ಜೌನಪುರ್ : ಇಲ್ಲಿನ ಅಮರ್ಪುರ ಗ್ರಾಮದ ತಿಲಕಧರಿ ಸಿಂಗ್ ಎಂಬಾತನ ಪತ್ನಿ ರಾಜಕುಮಾರಿ ಎಂಬುವರು ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಜಿಲ್ಲಾಸ್ಪತ್ರೆ ಮೃತದೇಹವನ್ನು ಸಾಗಿಸಲು ಸಹಾಯ ಮಾಡಿಲ್ಲ. ಕೊರೊನಾ ಭಯದಿಂದಾಗಿ ತಿಲಕಧರಿ ಸಿಂಗ್‌ಗೆ ಸಂಬಂಧಿಕರು ಸಹ ಆಸ್ಪತ್ರೆಯತ್ತ ಸುಳಿದಿಲ್ಲ.
ಹೀಗಾಗಿ, ಬಡವ ತಿಲಕಧರಿ ಸಿಂಗ್ ಬಳಿ ಹಣವಿಲ್ಲದೆ ಮತ್ತು ವಿಧಿಯಿಲ್ಲದೆ ತನ್ನ ಪತ್ನಿಯ ಶವವನ್ನು ಸೈಕಲ್ ಮೇಲೆಯೇ ಸಾಗಿಸುತ್ತಿದ್ದರು. ಈ ಸಮಯದಲ್ಲಿ ಪತಿ ತಿಲಕಧರಿ ಸಿಂಗ್ ಸುಸ್ತಾಗಿ ಅಲ್ಲಲ್ಲಿ ರಸ್ತೆ ಪಕ್ಕ ಕುಳಿತುಕೊಳ್ಳುತ್ತಿದ್ದರು. ಆದರೂ ಜನರು ತಿಲಕಧರಿ ಸಿಂಗ್ ಸಹಾಯಕ್ಕೆ ಮುಂದೆ ಬರದೆ ಮೂಕ ಪ್ರೇಕ್ಷರಂತೆ ನೋಡುತ್ತಿದ್ದರು. ಅಂತ್ಯಕ್ರಿಯೆಗೂ ಗ್ರಾಮಸ್ಥರು ನಿರಾಕರಿಸಿದರು. ಈ ಸುದ್ದಿ ಪೊಲೀಸರಿಗೆ ತಿಳಿದಿದೆ.
ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತಿಲಕಧರಿ ಸಿಂಗ್‌ಗೆ ಸಹಾಯ ಮಾಡಿದರು. ಪೊಲೀಸರು ತಿಲಕಧರಿ ಸಿಂಗ್‌ಗೆ ಹಣದ ಸಹಾಯ ಮಾಡಿದ್ದಲ್ಲದೆ, ಅವರ ಪತ್ನಿಯ ಶವವನ್ನು ರಾಮ್ಘಾಟ್ಗೆ ಸಾಗಿಸಲು ವ್ಯವಸ್ಥೆಯೂ ಮಾಡಿ ಮಾನವೀಯತೆ ಮೆರೆದರು.