ಮುಂಬೈ(ಮಹಾರಾಷ್ಟ್ರ): ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾಗುತ್ತಿದ್ದು, ಈ ವೇಳೆ ಭಾರತದಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಜಪಾನ್ 42 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಮುಂದಿನ ಐದು ವರ್ಷಗಳ ಯೋಜನೆಗೋಸ್ಕರ ಈ ಒಪ್ಪಂದ ಏರ್ಪಡಲಿದೆ ಎಂದು ತಿಳಿದುಬಂದಿದೆ.
ಜಪಾನ್ ಪ್ರಧಾನಿ 14ನೇ ಭಾರತ-ಜಪಾನ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಉಕ್ರೇನ್ ಬಿಕ್ಕಟ್ಟು, ಭಾರತದಲ್ಲಿನ ಹೂಡಿಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಉಕ್ರೇನ್ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿ, ನ್ಯಾಯ ಒದಗಿಸುವ ಸಮಯ ಬಂದಿದೆ: ಝೆಲೆನ್ಸ್ಕಿ
ಈ ಹಿಂದೆ ಭಾರತ-ಜಪಾನ್ ನಡುವಿನ ಶೃಂಗಸಭೆ 2018ರಲ್ಲಿ ಟೋಕಿಯೋದಲ್ಲಿ ನಡೆದಿತ್ತು. ಈ ವೇಳೆ ಅಂದಿನ ಪ್ರಧಾನಿ ಶಿಂಜೋ ಭಾರತದಲ್ಲಿ 3.5 ಟ್ರಿಲಿಯನ್ ಯೆನ್ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಜಪಾನ್ನಲ್ಲಿ ಜಾರಿಯಲ್ಲಿರುವ ಬುಲೆಟ್ ಟ್ರೈನ್ ತಂತ್ರಜ್ಞಾನ ಆಧರಿಸಿ ಭಾರತದಲ್ಲಿ ಹೈಸ್ಪೀಡ್ ರೈಲ್ವೆ ಕಾಮಕಾರಿ ನಡೆಯುತ್ತಿದ್ದು, ಇದೀಗ ಮತ್ತಷ್ಟು ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.