ಹೈದರಾಬಾದ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇಂದು ತಮ್ಮ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಅವರ ಕೂದಲ ಪೋಷಣೆ, ದಿನಚರಿ ಸೇರಿದಂತೆ ಅಭಿಮಾನಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಅಭಿಮಾನಿವೋರ್ವ ನಿಮಗೆ ಚುಂಬಿಸಬಹುದೇ? ಎಂದೂ ಕೂಡ ಕೇಳಿದ್ದಾನೆ.
ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರಿಗೆ ನಿಮ್ಮ ನೆಚ್ಚಿನ ನೆಚ್ಚಿನ ಸರಣಿ ಚಿತ್ರ ಮತ್ತು ಶೋ? ಯಾವುದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿ, ಸ್ಕಿಟ್ಸ್ ಕ್ರೀಕ್ ಎಂದು ಉತ್ತರಿಸಿದ್ದಾರೆ. ಹಾಗೆ ನೆಚ್ಚಿನ ಸಹನಟ ಯಾರು ಎಂದು ಕೇಳಿದಾಗ ಜಾಹ್ನವಿ ಗುಂಜನ್ ಸಕ್ಸೇನಾ ಮತ್ತು ಪಂಕಜ್ ತ್ರಿಪಾಠಿ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪ್ರಶ್ನೆಗಳು ಮುಂದುವರೆದಂತೆ ಅಭಿಮಾನಿವೋರ್ವ "ನಾವು ಚುಂಬಿಸಬಹುದೇ?" ಎಂದು ಕೇಳಿದ್ದಾರೆ. ಇದಕ್ಕೆ "NO" ಎಂದಿದ್ದಾರೆ. ಹಾಗೆ ಮಾಸ್ಕ್ನಲ್ಲಿರುವ ತಮ್ಮ ಚಿತ್ರದೊಂದಿಗೆ ಈ ಪ್ರತ್ಯುತ್ತರ ನೀಡಿದ್ದಾರೆ.
ಮತ್ತೋರ್ವ ಅಭಿಮಾನಿ "ಆತಂಕವನ್ನು ನಿಲ್ಲಿಸುವುದು ಹೇಗೆ?" ಎಂದು ಕೇಳಿದ್ದಕ್ಕೆ, ತಮಾಷೆಯ ವಿಡಿಯೋದ ಜೊತೆಗೆ ಉತ್ತರಿಸಿದ ಜಾಹ್ನವಿ, ಒಂದು ದಿಂಬನ್ನು ತಬ್ಬಿಕೊಂಡು ದುಃಖದ ಹಾಡುಗಳನ್ನು ಹಾಡಿ ಎಂದು ಬರೆದಿದ್ದಾರೆ.