ETV Bharat / bharat

ಇನ್ಮುಂದೆ ಪ್ಯಾಕೇಜ್​ ಸ್ಟಾರ್​ ಎಂದರೆ.. ಪವರ್​ ಸ್ಟಾರ್ ಪವನ್​ ಕಲ್ಯಾಣ್​ ರೋಷಾಗ್ನಿ - ಕಾಲಿನಲ್ಲಿದ್ದ ಶೂ ತೆಗೆದು ತೋರಿದರು

ಇನ್ಮುಂದೆ ತಮ್ಮನ್ನು ಪ್ಯಾಕೇಜ್​ ಸ್ಟಾರ್​ ಎಂದು ಕರೆದರೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ ಎಂದು ಜನಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್​ ಆಕ್ರೋಶ ಹೊರಹಾಕಿದ್ದಾರೆ.

janasena-chief-pawan-kalyan-fires-on-ysrcp
ಇನ್ಮುಂದೆ ಪ್ಯಾಕೇಜ್​ ಸ್ಟಾರ್​ ಎಂದರೆ... ಪವರ್​ ಸ್ಟಾರ್ ಪವನ್​ ಕಲ್ಯಾಣ್​ ರೋಷಾಗ್ನಿ
author img

By

Published : Oct 18, 2022, 5:46 PM IST

Updated : Oct 18, 2022, 6:05 PM IST

ಮಂಗಳಗಿರಿ (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ವಿರುದ್ಧ ಟಾಲಿವುಡ್​ ಪವರ್​ ಸ್ಟಾರ್​, ಜನಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್​ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ಮುಂದೆ ತಮ್ಮನ್ನು ಪ್ಯಾಕೇಜ್​ ಸ್ಟಾರ್​ ಎಂದು ಕರೆದರೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ ಎಂದು ಪವನ್​ ಸಿಟ್ಟು ಹೊರ ಹಾಕಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ಜನಸೇನಾ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಯಾರಾದರೂ ಪ್ಯಾಕೇಜ್ ಬಗ್ಗೆ ಮಾತನಾಡಿದರೆ ದವಡೆ ಊದಿಕೊಳ್ಳುವಂತೆ ಹೊಡೆಯುತ್ತೇನೆ. ಗೋಪಾಲನಗರದ ಶಾಲೆಯಲ್ಲಿ ಓದಿದ್ದೇನೆ. ಮತ್ತೆ ಪ್ಯಾಕೇಜ್ ಬಗ್ಗೆ ಮಾತನಾಡಿದರೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ ಎಂದು ತಮ್ಮ ಕಾಲಿನಲ್ಲಿದ್ದ ಶೂ ತೆಗೆದು ತೋರಿಸಿದರು.

ಇನ್ಮುಂದೆ ಪ್ಯಾಕೇಜ್​ ಸ್ಟಾರ್​ ಎಂದರೆ.. ಪವರ್​ ಸ್ಟಾರ್ ಪವನ್​ ಕಲ್ಯಾಣ್​ ರೋಷಾಗ್ನಿ

ಕಳೆದ 8 ವರ್ಷಗಳಲ್ಲಿ 6 ಸಿನಿಮಾಗಳನ್ನು ಮಾಡಿದ್ದೇನೆ. 100 ಕೋಟಿಯಿಂದ 130 ಕೋಟಿ ರೂಪಾಯಿವರೆಗೆ ಆದಾಯ ಸಂಪಾದನೆ ಮಾಡಿದ್ದೇನೆ. ನನ್ನ ಮಕ್ಕಳ ಹೆಸರಿನಲ್ಲಿದ್ದ ಠೇವಣಿ ಹಣವನ್ನು ತೆಗೆದು ಪಕ್ಷದ ಕಚೇರಿಗಾಗಿ 30 ಲಕ್ಷ ರೂ. ನೀಡಿದ್ದೇನೆ. ಎರಡು ರಾಜ್ಯಗಳ ಸಿಎಂ ಸಹಾಯ ನಿಧಿಗೆ 12 ಕೋಟಿ ರೂ. ಕೊಟ್ಟಿದ್ದೇನೆ. ಅಯೋಧ್ಯೆ ರಾಮ ಮಂದಿರಕ್ಕೆ 30 ಲಕ್ಷ ರೂ. ನೀಡಿದ್ದೇನೆ ಎಂದು ವಿವರಿಸಿದರು.

ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಮೇಲೆ ರಣಕಹಳೆ ಮೊಳಗಿಸಲು ನಾನು ಸಿದ್ಧನಿದ್ದೇನೆ. ಇಲ್ಲಿಯವರೆಗೂ ನನ್ನ ತಾಳ್ಮೆಯನ್ನು ನೋಡಿದ್ದೀರಿ. ಇನ್ಮುಂದೆ ಯುದ್ಧಕ್ಕೆ ನಾನು ಸಿದ್ಧ. ನನ್ನ ಮೂರು ಮದುವೆಗಳ ಬಗ್ಗೆ ಪದೇ ಪದೇ ಮಾತನಾಡುತ್ತೀರಾ?. ವಿಚ್ಛೇದನದ ನಂತರ ಬೇರೊಬ್ಬರನ್ನು ಮದುವೆಯಾಗಿದ್ದೇನೆ. ಅವರಿಗೆ ಕಾನೂನು ಪ್ರಕಾರ ಜೀವನಾಂಶ ನೀಡಿದ್ದೇನೆ. ಮೊದಲ ಪತ್ನಿಗೆ 5 ಕೋಟಿ, ಎರಡನೇ ಪತ್ನಿಗೆ ಆಸ್ತಿ ಬರೆದುಕೊಟ್ಟಿದ್ದೇನೆ. ಅಲ್ಲದೇ, ಜಾತಿಯ ಹೆಸರಿನಲ್ಲಿ ಟೀಕಿಸುವುದು ಸಭ್ಯತೆಯೇ ಎಂದು ಪವನ್​ ಗುಡುಗಿದರು.

ಇದನ್ನೂ ಓದಿ: ಎಂಬಿಎಸ್ ಗ್ರೂಪ್, ಮುಸದ್ದಿಲಾಲ್ ಜ್ಯುವೆಲರ್ಸ್ ಮೇಲೆ ಇಡಿ ದಾಳಿ: 100 ಕೋಟಿ ಮೌಲ್ಯದ ಚಿನ್ನ, ವಜ್ರ ವಶ

Last Updated : Oct 18, 2022, 6:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.