ETV Bharat / bharat

ಕಾನ್​ಸ್ಟೇಬಲ್ ಪತ್ನಿ, ಪುತ್ರಿ ಮೇಲೆ ಉಗ್ರರಿಂದ ಗುಂಡಿನ ದಾಳಿ - ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ

ಪೊಲೀಸ್ ಕಾನ್​ಸ್ಟೇಬಲ್​ವೊಬ್ಬರ ಪತ್ನಿ ಮತ್ತು ಪುತ್ರಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಘಟನೆ ಅನಂತ್​ನಗರ ಜಿಲ್ಲೆಯಲ್ಲಿ ನಡೆದಿದೆ.

Terrorists fire
Terrorists fire
author img

By

Published : Jul 21, 2021, 5:41 AM IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಪೊಲೀಸ್ ಕಾನ್​​ಸ್ಟೇಬಲ್​ವೊಬ್ಬರ ಪತ್ನಿ ಹಾಗೂ ಪುತ್ರಿಯ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ.

ದಾಳಿಯಲ್ಲಿ ಕಾನ್​ಸ್ಟೇಬಲ್ ಪತ್ನಿ, ಪುತ್ರಿ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಂತ್​ನಾಗ್ ಜಿಲ್ಲೆಯ ಕಾನ್​ಸ್ಟೇಬಲ್ ಸಾಜದ್ ಅಹಮದ್ ಮಲಿಕ್ ಅವರ ಕುಟುಂಬದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ.

ದಾಳಿ ಮಾಡಿದವರಲ್ಲಿ ಓರ್ವ ಜೈಶ್ ಇ ಮೊಹಮ್ಮದ ಉಗ್ರ ಸಂಘಟನೆಯ ಮುಫ್ತಿ ಅಲ್ತಾಫ್ ಎಂಬಾತ ಇದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ಮಧ್ಯೆ ಗುಂಡಿನ ಕಾಳಗ ಆಗಾಗ ನಡೆಯುತ್ತಲೇ ಇರುತ್ತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.