ETV Bharat / bharat

ಹೈದರಾಪೊರಾ ಎನ್​ಕೌಂಟರ್ ವಿರುದ್ಧ ಪ್ರತಿಭಟನೆ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸ್​ - ಹೈದರಾಪೊರಾ ಎನ್​ಕೌಂಟರ್ ವಿರುದ್ಧ ಪ್ರತಿಭಟನೆ

ಹೈದರಾಪೊರಾ ಎನ್​ಕೌಂಟರ್ (Hyderpora Gunfight) ವಿರುದ್ಧ ಜಮ್ಮುವಿನಲ್ಲಿ ಸಾವನ್ನಪ್ಪಿದ ಯುವಕರ ಕುಟುಂಬಸ್ಥರು ಸೇರಿದಂತೆ ಪ್ರತಿಭಟನಾಕಾರರು ಮಧ್ಯರಾತ್ರಿ ಶ್ರೀನಗರದ ಪ್ರೆಸ್ ಕಾಲೊನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳೆಯರು ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

The Jammu and Kashmir police
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕೋಠಿಬಾಗ್ ಪೊಲೀಸರು
author img

By

Published : Nov 18, 2021, 12:52 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ರಾತ್ರಿ ಶ್ರೀನಗರದ ಪ್ರೆಸ್ ಕಾಲೋನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೈದರಾಪೊರಾ ಎನ್​ಕೌಂಟರ್ (Hyderpora Encounter) ವಿರುದ್ಧ ಜಮ್ಮುವಿನಲ್ಲಿ ಸಾವನ್ನಪ್ಪಿದ ಯುವಕರ ಕುಟುಂಬಸ್ಥರು ಸೇರಿದಂತೆ ಪ್ರತಿಭಟನಾಕಾರರು ಕಳೆದ 12 ಗಂಟೆಗಳ ಕಾಲ ಶ್ರೀನಗರದ ಪ್ರೆಸ್ ಕಾಲೋನಿಯಲ್ಲಿ ಮೊಕ್ಕಾಂ ಹೂಡಿದ್ದು, ಮೃತ ನಾಗರಿಕರಿಗೆ ನ್ಯಾಯ ಒದಗಿಸಬೇಕು ಮತ್ತು ಮೃತರ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಮಧ್ಯರಾತ್ರಿ ಕೋಠಿಬಾಗ್ ಠಾಣೆಯ ಪೊಲೀಸ್​ ತಂಡವು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋದರು. ಈ ವೇಳೆ, ಕೆಲವರಿಗೆ ಥಳಿಸಲಾಯಿತು. ಜೊತೆಗೆ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕೋಠಿಬಾಗ್ ಪೊಲೀಸರು

ಇದನ್ನೂ ಓದಿ: Kulgam Encounter: ಕುಲ್ಗಾಮ್‌ನಲ್ಲಿ ಐವರು ಉಗ್ರರ ಹತ್ಯೆಗೈದ ಭದ್ರತಾಪಡೆ

ಇನ್ನು ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರತಿಭಟನೆಯಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ನಾವು ಶವಗಳನ್ನು ಹಿಂತಿರುಗಿಸುತ್ತೇವೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದವು. ಆದರೂ ಅವರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದರು. ಈ ಹಿನ್ನೆಲೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಗಿದೆ. ಈಗ ಅವರು ತಮ್ಮ ನಿವಾಸಗಳಲ್ಲಿದ್ದಾರೆ ಎಂದರು.

ಇದನ್ನೂ ಓದಿ: ಡಿಸಿ ಆದೇಶ ಉಲ್ಲಂಘನೆ: ಕೋಲಾರ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ಮುತಾಲಿಕ್​ ಪೊಲೀಸ್​ ವಶಕ್ಕೆ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೈದರ್‌ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನವೆಂಬರ್ 15 ರಂದು ಎನ್‌ಕೌಂಟರ್ ನಡೆದಿತ್ತು. ಈ ವೇಳೆ, ಗುಂಡಿನ ಚಕಮಕಿಯಲ್ಲಿ ವಿದೇಶಿ ಉಗ್ರ ಹೈದರ್ ಮತ್ತು ಆತನ ಸ್ಥಳೀಯ ಸಹಾಯಕ ಅಮೀರ್ ಮಗ್ರೆ, ನಾಗರಿಕ ಮುಹಮ್ಮದ್ ಅಲ್ತಾಫ್ ಭಟ್ ಮತ್ತು ಉಗ್ರಗಾಮಿ ಸಹಚರ ಡಾ. ಮುದಾಸಿರ್ ಗುಲ್ ಅವರನ್ನು ಕೊಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.