ETV Bharat / bharat

ಜಮ್ಮು-ಕಾಶ್ಮೀರದ ಹಿರಿಯ ರಾಜಕಾರಣಿ ಪ್ರೊ.ಭೀಮ್​ ಸಿಂಗ್​ ನಿಧನ: ಪ್ರಧಾನಿ ಸಂತಾಪ - ಜಮ್ಮು ಕಾಶ್ಮೀರದ ಹಿರಿಯ ರಾಜಕಾರಣಿ ಭೀಮ್​ ಸಿಂಗ್​

ಕಳೆದ ಒಂದು ವರ್ಷಕ್ಕೂ ಅಧಿಕ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ.ಭೀಮ್​ ಸಿಂಗ್​ ಅವರು ಜಮ್ಮುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Bhim Singh passes away in Jammu
ಜಮ್ಮು-ಕಾಶ್ಮೀರದ ಹಿರಿಯ ರಾಜಕಾರಣಿ ಪ್ರೊ.ಭೀಮ್​ ಸಿಂಗ್​ ನಿಧನ
author img

By

Published : May 31, 2022, 1:09 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರ ಪ್ಯಾಂಥರ್ಸ್ ಪಕ್ಷದ ಸಂಸ್ಥಾಪಕ ಪ್ರೊ.ಭೀಮ್​ ಸಿಂಗ್​ (81) ಇಂದು ಜಮ್ಮುವಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಹಿರಿಯ ನಾಯಕನ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಕಳೆದ ಒಂದು ವರ್ಷಕ್ಕೂ ಅಧಿಕ ದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಮತ್ತು ಪುತ್ರರನ್ನು ಪ್ರೊ.ಭೀಮ್​ ಸಿಂಗ್​ ಅಗಲಿದ್ದಾರೆ. ಶಾಸಕ ಮತ್ತು ಸಂಸದರಾಗಿ ಸೇವೆ ಸಲ್ಲಿಸಿದ್ದ ಭೀಮ್ ಸಿಂಗ್, ಮೊದಲಿಗೆ ಕಾಂಗ್ರೆಸ್​​ನಲ್ಲಿದ್ದು, 1977ರಲ್ಲಿ ಯುವ ಕಾಂಗ್ರೆಸ್​​ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿದ್ದರು. ನಂತರ ಪ್ಯಾಂಥರ್ಸ್ ಪಕ್ಷ ಸ್ಥಾಪಿಸಿದ್ದರು.

  • Prof Bhim Singh Ji will be remembered as a grassroots leader who devoted his life for the welfare of Jammu and Kashmir. He was very well read and scholarly. I will always recall my interactions with him. Saddened by his demise. Condolences to his family and supporters. Om Shanti.

    — Narendra Modi (@narendramodi) May 31, 2022 " class="align-text-top noRightClick twitterSection" data=" ">

ಪ್ರಧಾನಿ ಸಂತಾಪ: ಭೀಮ್​ ಸಿಂಗ್​ ನಿಧನಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೊ.ಭೀಮ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ತಳಮಟ್ಟದ ನಾಯಕ. ವಿದ್ವಾಂಸರೂ ಆಗಿದ್ದರು. ಅವರೊಂದಿಗಿನ ನನ್ನ ಮಾತುಕತೆಯನ್ನು ಯಾವಾಗಲೂ ಸ್ಮರಿಸಿಕೊಳ್ಳುತ್ತೇನೆ. ಅವರ ನಿಧನದಿಂದ ದುಃಖವಾಗಿದೆ. ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕುಲ್ಗಾಮ್‌: ಕಾಶ್ಮೀರಿ ಪಂಡಿತ ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.