ETV Bharat / bharat

ಜಲ ಜೀವನ್ ಮಿಷನ್​ನ ಯೋಜನೆ ಪ್ರಕರಣ: ರಾಜಸ್ಥಾನದ 24 ಸ್ಥಳಗಳ ಮೇಲೆ ಇಡಿ ದಾಳಿ - ತೀವ್ರ ಪರಿಶೀಲನೆ

Jal Jeevan Mission Scheme case: ಜಲ ಜೀವನ್ ಮಿಷನ್​ ಯೋಜನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಹಲವು ಸ್ಥಳಗಳ ಮೇಲೆ ಇಂದು ಇಡಿ ಅಧಿಕಾರಿಗಳ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Jal Jeevan Mission Scheme case
ಜಲ ಜೀವನ್ ಮಿಷನ್​ನ ಯೋಜನೆ ಪ್ರಕರಣ: ರಾಜಸ್ಥಾನದ 24 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳ ದಾಳಿ
author img

By ETV Bharat Karnataka Team

Published : Nov 3, 2023, 2:09 PM IST

ಜೈಪುರ(ರಾಜಸ್ಥಾನ): ರಾಜಸ್ಥಾನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ನಡುವೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಕಾರ್ಯಾಚರಣೆಗೆ ಇಳಿದಿದೆ. ಜಲ ಜೀವನ್ ಮಿಷನ್‌ನ ಯೋಜನೆಗೆ ಸಂಬಂಧಿಸಿದ ಪ್ರಕರಣದ ತನಿಖೆಗಾಗಿ 24ಕ್ಕೂ ಹೆಚ್ಚು ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಇಡಿ ಅಧಿಕಾರಿಗಳ ತಂಡಗಳು ರಾಜ್ಯದ ಎರಡು ಡಜನ್​ಗೂ ಹೆಚ್ಚು ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿವೆ. ಐಎಎಸ್ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಸಂಬಂಧಪಟ್ಟ ಸ್ಥಳದಲ್ಲಿ ಕಡತಗಳ ಶೋಧ ನಡೆಸುತ್ತಿದ್ದಾರೆ.

ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ, ರಾಜಸ್ಥಾನದಲ್ಲಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ 20,000 ಕೋಟಿ ರೂಪಾಯಿ ಅಕ್ರಮ ನಡೆದಿರುವುದರ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

ಇಡಿಗೆ ಆದಾಯ ತೆರಿಗೆ ಇಲಾಖೆ ಸಾಥ್: ಜಲ ಜೀವನ್ ಮಿಷನ್​ನಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ಸೆಕ್ರೆಟರಿಯೇಟ್ ಕಚೇರಿಗೆ ತಲುಪಿರುವ ಇಡಿ ತಂಡ ಶುಕ್ರವಾರ ಬೆಳಿಗ್ಗೆಯಿಂದಲೇ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆ ತಂಡವೂ ಸ್ಥಳದಲ್ಲಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಮತ್ತು ಸಚಿವ ಮಹೇಶ್ ಜೋಶಿ ಕಚೇರಿಯಲ್ಲಿ ಎರಡೂ ಇಲಾಖೆಗಳ ತಂಡಗಳು ಶೋಧ ನಡೆಸುತ್ತಿವೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಈ ದಾಳಿಯು, ಇನ್ನೂ ಕೂಡ ಮುಂದುವರಿದಿದೆ. ಇಡಿ ತಂಡವು ಐಎಎಸ್ ಸುಬೋಧ್ ಅಗರ್ವಾಲ್ ಮತ್ತು ಸಚಿವ ಮಹೇಶ್ ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಕೇಂದ್ರ ಭದ್ರತಾ ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ದೋಟಸಾರಾ ಅವರ ಇಬ್ಬರು ಪುತ್ರರಿಗೆ ಇಡಿ ನೋಟಿಸ್: ಇಡಿ ಇತ್ತೀಚೆಗೆ ಅಕ್ಟೋಬರ್ 26 ರಂದು ರಾಜ್ಯದ 11 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ ಸೇರಿದಂತೆ ಹಲವರ ಹೆಸರು ಪ್ರಶ್ನೆ ಸೋರಿಕೆ ಪ್ರಕರಣದಲ್ಲಿ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7 ಮತ್ತು 8 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಇಡಿ ವಿಚಾರಣೆಗೆ ಹಾಜರಾಗುವಂತೆ ದೋಟಸಾರಾ ಅವರ ಇಬ್ಬರು ಪುತ್ರರಿಗೆ ನೋಟಿಸ್​ ನೀಡಿತ್ತು.

200 ಸದಸ್ಯ ಬಲ ಹೊಂದಿರುವ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ತಮಿಳುನಾಡು ಲೋಕೋಪಯೋಗಿ ಸಚಿವರ ಮೇಲೆ ಐಟಿ ದಾಳಿ; 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.