ETV Bharat / bharat

ಶ್ರೀ ಸಮ್ಮೇದ್ ಶಿಖರ್ಜಿ ರಕ್ಷಣೆಗಾಗಿ ಇಬ್ಬರು ಜೈನ ಮುನಿಗಳ ಸಮಾಧಿ ಮರಣ! - jain monk samarth sagar died

ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ಸ್ಥಳವೆಂದು ಘೋಷಿಸಿದ ಜಾರ್ಖಂಡ್ ಸರ್ಕಾರದ ಆದೇಶವನ್ನು ನಿನ್ನೆ ರಾತ್ರಿ ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ. ಆದ್ರೆ, ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೈನ ಮುನಿಯೊಬ್ಬರು ಜೈಪುರದಲ್ಲಿ ಇಂದು ಸಮಾಧಿ ಮರಣ ಹೊಂದಿದರು. ಕಳೆದ 2 ದಿನಗಳ ಹಿಂದಷ್ಟೇ ಇನ್ನೊಬ್ಬ ಮುನಿವರ್ಯರು ದೇಹತ್ಯಾಗ ಮಾಡಿದ್ದರು.

jain
ಜೈನ ಸನ್ಯಾಸಿ
author img

By

Published : Jan 6, 2023, 12:16 PM IST

ಜೈಪುರ (ರಾಜಸ್ಥಾನ): ಇಲ್ಲಿನ ಸಂಗನೇರ್‌ನಲ್ಲಿ ವಿರಾಜಿತರಾದ ಆಚಾರ್ಯ ಸುನೀಲ್ ಸಾಗರ್ ಮಹಾರಾಜರ ಶಿಷ್ಯರಾದ ಮುನಿ ಸಮರ್ಥ ಸಾಗರ್ ಅವರು ಇಂದು ಸಮಾಧಿ ಮರಣ ಹೊಂದಿದ್ದಾರೆ. ಸಂಘಿಜಿ ಮಂದಿರದಿಂದ ಅವರ ಅಂತಿಮ ಯಾತ್ರೆಯ ಮೆರವಣಿಗೆ ನಡೆಸಿ, ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮುನಿ ಸಮರ್ಥ ಸಾಗರ್ ಕೂಡ ಸನ್ಯಾಸಿ ಸುಗ್ಯೆಸಾಗರ್ ಮಹಾರಾಜ್ ಅಂತೆಯೇ ಜೈನರ ಪವಿತ್ರ ಶ್ರದ್ಧಾ ಕೇಂದ್ರ ಸಮ್ಮೇದ್ ಶಿಖರ್ಜಿ ರಕ್ಷಣೆಯ ಸಲುವಾಗಿ ಜಾರ್ಖಂಡ್​ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಮರಣಾಂತ ಉಪವಾಸದಲ್ಲಿದ್ದರು.

ಈ ಹಿಂದೆ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಜಾರ್ಖಂಡ್ ಸರ್ಕಾರ ಘೋಷಿಸಿ, ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜೈನ ಶ್ರಾವಕ, ಶ್ರಾವಕಿಯರು ಪ್ರತಿಭಟನೆ ನಡೆಸಿ ಕೇಂದ್ರ ಹಾಗು ಜಾರ್ಖಂಡ್‌ ಸರ್ಕಾರದ ವಿರುದ್ಧ ತೀವ್ರ ಅಹಿಂಸಾತ್ಮಕ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆಗೂ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ನಿನ್ನೆ ಮಹತ್ವದ ಆದೇಶ ಹೊರಡಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. 'ಸಮ್ಮೇದ್ ಶಿಖರ್ಜಿ' ಇರುವ ಪರಸ್ನಾಥ್ ಬೆಟ್ಟದಲ್ಲಿ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲದೇ, ಮಂದಿರಗಳ ಪಾವಿತ್ರ್ಯತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕು' ಎಂದು ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: ಫಲಿಸಿದ ಸಮ್ಮೇದ್ ಶಿಖರ್ಜಿ ಹೋರಾಟ: ಕೇಂದ್ರದಿಂದ ಮಹತ್ವದ ಆದೇಶ, ಜೈನರ ಪ್ರತಿಭಟನೆ ಸ್ಥಗಿತ

ಮೂರು ವರ್ಷಗಳ ಹಿಂದೆ ಹೊರಡಿಸಿದ್ದ ಆದೇಶ ಹಿಂಪಡೆದ ಕೇಂದ್ರ ಸರ್ಕಾರ: ಆಗಸ್ಟ್ 2, 2019ರಲ್ಲಿ ಕೇಂದ್ರ ಪರಿಸರ ಸಚಿವಾಲಯವು ಪರಸ್ನಾಥ್ ವನ್ಯಜೀವಿ ಅಭಯಾರಣ್ಯದ ಸುತ್ತಲೂ ಪರಿಸರ-ಸೂಕ್ಷ್ಮ ವಲಯವೆಂದು ಸೂಚಿಸಿತ್ತು. ಜೊತೆಗೆ, ಶ್ರೀ ಸಮ್ಮೇದ್ ಶಿಖರ್ಜಿಯನ್ನು 'ಪ್ರವಾಸಿ ತಾಣ'ವೆಂದು ಘೋಷಿಸಿರುವುದಾಗಿ ತಿಳಿಸಿತ್ತು. ಇದೀಗ ಆದೇಶ ಹಿಂಪಡೆದಿರುವ ಕೇಂದ್ರ ಸರ್ಕಾರ, ಈ ಕುರಿತು ಎರಡು ಪುಟಗಳ ಪತ್ರವನ್ನು ರಾಜ್ಯಕ್ಕೆ ರವಾನಿಸಿದೆ. ಅದರಲ್ಲಿ, 'ಇತರೆ ಎಲ್ಲಾ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಒಳಗೊಂಡಿರುವ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯ ಷರತ್ತು-3 ರ ನಿಬಂಧನೆಗಳ ಅನುಷ್ಠಾನವನ್ನು ತಕ್ಷಣವೇ ನಿಷೇಧಿಸಲಾಗಿದೆ. ಈ ಕುರಿತು ಅಗತ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಇದರೊಂದಿಗೆ ಇಲ್ಲಿ ಮದ್ಯ, ಮಾಂಸಾಹಾರ, ಡ್ರಗ್ಸ್, ಅಬ್ಬರದ ಸಂಗೀತ, ಧ್ವನಿವರ್ಧಕಗಳು, ಸಾಕುಪ್ರಾಣಿಗಳನ್ನು ಒಯ್ಯುವುದು, ಅನಧಿಕೃತ ಪ್ರಚಾರಗಳು ಮತ್ತು ಟ್ರ್ಯಾಕಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಶ್ರೀ ಸಮ್ಮೇದ್ ಶಿಖರ್ಜಿಗಾಗಿ ಜಾರ್ಖಂಡ್ ಸರ್ಕಾರದ ವಿರುದ್ಧ ಉಪವಾಸ ಕುಳಿತ ಜೈನ ಸನ್ಯಾಸಿ ನಿಧನ

ಸಮ್ಮೇದ್ ಶಿಖರ್ಜಿಗಾಗಿ ಇಬ್ಬರು ಮುನಿಗಳ ಪ್ರಾಣತ್ಯಾಗ!: ಆದೇಶ ಹಿಂಪಡೆಯುವಂತೆ ಸರ್ಕಾರದ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಬ್ಬರು ಜೈನ ಸನ್ಯಾಸಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಇತ್ತೀಚೆಗೆ, ಮುನಿ ಸುಗ್ಯೇಯ ಸಾಗರ್ ಮತ್ತು ಈಗ ಮುನಿ ಸಮರ್ಥ ಸಾಗರ್ ಸಮಾಧಿ ಮರಣ ಹೊಂದಿದ್ದಾರೆ. ಇಂದು ನಸುಕಿನ ಜಾವ 1:20 ಕ್ಕೆ ಸಮರ್ಥ ಸಾಗರ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಇವರು ಆಚಾರ್ಯ ಸುನೀಲ್ ಸಾಗರ್ ಮಹಾರಾಜ್ ಅವರ ಶಿಷ್ಯರು.

ಜೈಪುರದಲ್ಲಿ ನಡೆದ ಶಾಂತಿಯುತ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ನಗರದ ಸಂಗನೇರ್ ಪ್ರದೇಶದ ಸಾಂಘಿಜಿ ದೇಗುಲದಲ್ಲಿ ಉಪವಾಸ ಕುಳಿತಿದ್ದ ಮುನಿವರ್ಯ ಸುಗ್ಯೇಯ ಸಾಗರ್ ಅವರು ಜ. 4ರಂದು ಜಿನೈಕ್ಯರಾಗಿದ್ದರು. ಡಿಸೆಂಬರ್ 25 ರಿಂದ ಇವರು ಅಮರಣಾಂತ ವ್ರತದಲ್ಲಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.