ETV Bharat / bharat

ಕೊನೆಗೂ 489 ದಿನಗಳ ಜೈಲುವಾಸ ಅಂತ್ಯ: ಅತ್ಯಾಚಾರ, ಅಪಹರಣ ಪ್ರಕರಣದ ಬಾಲಾಪರಾಧಿಗೆ ಸುಪ್ರೀಂಕೋರ್ಟ್ ಜಾಮೀನು - ಸುಪ್ರೀಂಕೋರ್ಟ್

ಇಬ್ಬರೂ ಅಪ್ರಾಪ್ತರಾಗಿದ್ದಾಗ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಹುಡುಗಿಯ ಕುಟುಂಬದವರು ಸಲ್ಲಿಸಿದ ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಆತ ಜೈಲು ಪಾಲಾಗಿದ್ದ.

Representative image
ಪ್ರಾತಿನಿಧಿಕ ಚಿತ್ರ
author img

By

Published : Jul 15, 2023, 8:04 PM IST

ನವದೆಹಲಿ: ಆತ 16ನೇ ವಯಸ್ಸಿನಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಓಡಿಹೋಗಿ ಹುಡುಗನ ತಾಯಿ ಮತ್ತು ತಾಯಿಯ ಚಿಕ್ಕಪ್ಪನ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ, ಆ ದಾಂಪತ್ಯ, ಪ್ರೀತಿ ಈಗ ಕಮರಿ ಹೋಗಿದೆ. ಬಾಲಕನ ಮೇಲೆ ಅತ್ಯಾಚಾರ, ಅಪಹರಣ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಆರೋಪ ಹೊರಿಸಲಾಗಿತ್ತು.

ಪ್ರಕರಣದಲ್ಲಿ ಆ ಯುವಕ ವಯಸ್ಕನಾಗಿ 489 ದಿನಗಳು ಮತ್ತು ಬಾಲಾಪರಾಧಿಯಾಗಿ 242 ದಿನಗಳಿಗಿಂತ ಹೆಚ್ಚು ಕಾಲ ಸೆರೆವಾಸದಲ್ಲಿದ್ದ. ಶುಕ್ರವಾರ ಸುಪ್ರೀಂಕೋರ್ಟ್ ಸುಮಾರು ಎರಡು ವರ್ಷಗಳ ಅಗ್ನಿಪರೀಕ್ಷೆ ಕೊನೆಗೊಳಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ ಸೂಕ್ತ ಷರತ್ತುಗಳಿಗೆ ಒಳಪಟ್ಟು ಜಾಮೀನು ನೀಡಿದೆ.

8 ತಿಂಗಳ ಕಾಲ ಬಾಲಾಪರಾಧಿ ಗೃಹದಲ್ಲಿ: ಜುವೆನೈಲ್ ಜಸ್ಟೀಸ್ ಆಕ್ಟ್ ಅಡಿ 16-18 ವರ್ಷ ವಯಸ್ಸಿನ ಯಾವುದೇ ಆರೋಪಿಯನ್ನು ಅವನು ಅಥವಾ ಅವಳು ಘೋರ ಅಪರಾಧ ಮಾಡಿದಾಗ ವಯಸ್ಕರಂತೆ ವಿಚಾರಣೆಗೆ ಒಳಪಡಿಸಲಾಗುತ್ತದೆ. ಅರ್ಜಿದಾರರ ಕುಟುಂಬವು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸುಧಾರಣೆಯ ವ್ಯಾಪ್ತಿ ಇರುವುದರಿಂದ ಅವರನ್ನು ಮಕ್ಕಳ ವೀಕ್ಷಣಾ ಮನೆಗೆ ಕಳುಹಿಸಬೇಕು ಎಂದು ವಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಸಮ್ಮತಿಸಿ ಒಂದು ವರ್ಷದ ನಂತರ ಅವರನ್ನು ಬಾಲಾಪರಾಧಿ ಗೃಹಕ್ಕೆ ಸ್ಥಳಾಂತರಿಸಿತು. ಬಾಲಕ ಸುಮಾರು 8 ತಿಂಗಳ ಕಾಲ ಬಾಲಾಪರಾಧಿ ಗೃಹದಲ್ಲಿ ಇದ್ದ. ಬಾಲನ್ಯಾಯ ಮಂಡಳಿ ಮತ್ತು ಹೈಕೋರ್ಟ್‌ನಿಂದ ಬಾಲಕನನ್ನು ಬಿಡುಗಡೆ ಮಾಡಲು ಕುಟುಂಬದವರು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

ಈ ವರ್ಷದ ಏಪ್ರಿಲ್‌ನಲ್ಲಿ ಅರ್ಜಿದಾರರ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ವಜಾಗೊಳಿಸಿದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ವಕೀಲ ನಮಿತ್ ಸಕ್ಸೇನಾ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಪೀಠ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನಿನ ಮೇಲೆ ಬಿಡುಗಡೆ: "ವಿಚಾರಣಾ ನ್ಯಾಯಾಲಯವು ವಿಧಿಸುವ ಸೂಕ್ತ ಷರತ್ತುಗಳಿಗೆ ಒಳಪಟ್ಟು ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನಾವು ನಿರ್ದೇಶಿಸುತ್ತೇವೆ. ಈ ಉದ್ದೇಶಕ್ಕಾಗಿ, ಅರ್ಜಿದಾರರನ್ನು ತಕ್ಷಣವೇ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಮತ್ತು ಸೂಕ್ತ ಬಿಡುಗಡೆ ಆದೇಶವನ್ನು ಹೊರಡಿಸಬೇಕು" ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಪ್ರಕರಣದ ವಿವರ: ಏ.17, 2021 ರಂದು ಸಂತ್ರಸ್ತೆ ಸ್ವಯಂಪ್ರೇರಣೆಯಿಂದ ತನ್ನೊಂದಿಗೆ ಬಂದಿದ್ದರು. ಆದರೆ ಆಕೆಯ ಕುಟುಂಬಸ್ಥರು ಏಪ್ರಿಲ್ 18, 2021ರಂದು ಎಫ್‌ಐಆರ್ ದಾಖಲಿಸಿದ್ದರು. ಏಪ್ರಿಲ್ 22, 2021 ರಂದು ಆಪಾದಿತ ಸಂತ್ರಸ್ತೆಯ ಕುಟುಂಬದಿಂದ ಬೆದರಿಕೆಗಳ ಬಗ್ಗೆ ದೂರು ನೀಡಲು ಅರ್ಜಿದಾರರು ಮತ್ತು ಆಪಾದಿತ ಯುವಕ ಪೊಲೀಸ್ ಸೂಪರಿಂಟೆಂಡೆಂಟ್ ಕಚೇರಿಗೆ ಹೋಗಿದ್ದರು. ಪೊಲೀಸರು ಏಪ್ರಿಲ್ 22 ರಂದು ಸೆಕ್ಷನ್ 161 CrPC ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅಲ್ಲಿ ಅವಳು ಅರ್ಜಿದಾರರೊಂದಿಗೆ ತಾನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು ಮತ್ತು ಅವನೊಂದಿಗೆ ವಾಸಿಸಲು ಬಯಸಿದ್ದರು.

ಬಳಿಕ ಏಪ್ರಿಲ್ 23ರಂದು, 164 ಸಿಆರ್​ಪಿಸಿ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್, ಕೋಟಾ ಅವರ ಮುಂದೆ ದಾಖಲಿಸಲಾಗಿತ್ತು. ನಂತರ ಸಂತ್ರಸ್ತ ಯುವತಿ ತಾನು ತನ್ನ ಮನೆಯಿಂದ ಸ್ವಯಂಪ್ರೇರಣೆಯಿಂದ ಬಂದಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಳು. ಆದರೆ ಏಪ್ರಿಲ್ 29 ರಂದು, ಪೊಲೀಸರು ಹುಡುಗಿಯ ಕುಟುಂಬದವರು ಸಲ್ಲಿಸಿದ ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಅರ್ಜಿದಾರನನ್ನು ಬಂಧಿಸಿದ್ದರು. ಆ ಬಳಿಕ ಜುಲೈ 12, 2021 ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರೂ ಕೂಡಾ . ಪ್ರಕರಣವನ್ನು ದಾಖಲಿಸಿದ ದಿನಾಂಕದಿಂದ 85 ದಿನಗಳು, ಜುವೆನೈಲ್ ಜಸ್ಟಿಸ್ ಬೋರ್ಡ್ ಎರಡು ಬಾರಿ ಅರ್ಜಿದಾರರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಜನವರಿ, 2023 ರಲ್ಲಿ, ವಿಶೇಷ ನ್ಯಾಯಾಧೀಶ ಪೋಕ್ಸೊ ಪ್ರಕರಣಗಳು, ಬಾಲಾಪರಾಧಿ ನ್ಯಾಯ ಮಂಡಳಿಯಿಂದ ಎರಡನೇ ಜಾಮೀನು ಅರ್ಜಿಯನ್ನು ವಜಾಗೊಳಿಸುವುದರ ವಿರುದ್ಧದ ಮೇಲ್ಮನವಿಯನ್ನು ಸಹ ವಜಾಗೊಳಿಸಿತ್ತು.

ಸಕ್ಸೇನಾ ಅವರು ಉನ್ನತ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳು ಮತ್ತು ದಾಖಲೆಯಲ್ಲಿ ಲಭ್ಯವಿರುವ ಪುರಾವೆಗಳ ಸರಿಯಾದ ಮೌಲ್ಯಮಾಪನ ಆಗಿಲ್ಲ , ತಮ್ಮ ಕಕ್ಷಿದಾರರ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 496-ಎ, ವಿಚಾರಣಾಧೀನ ಕೈದಿಯನ್ನು ಕಾನೂನಿನಡಿಯಲ್ಲಿ ಆ ಅಪರಾಧಕ್ಕೆ ನಿರ್ದಿಷ್ಟಪಡಿಸಿದ ಗರಿಷ್ಠ ಅವಧಿಯ ಒಂದೂವರೆ ಅವಧಿಯವರೆಗೆ ಸೆರೆವಾಸಕ್ಕೆ ಒಳಗಾಗಿದ್ದರೆ ಎಂದು ಅವರು ವಿವರಿಸಿದರು.

ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರಲ್ಲಿ, ಬಾಲಾಪರಾಧಿಗೆ ಗರಿಷ್ಠ ಜೈಲು ಶಿಕ್ಷೆ ಮೂರು ವರ್ಷಗಳು ಎಂದು ಸಕ್ಸೇನಾ ವಾದಿಸಿದರು. ಅರ್ಜಿದಾರರನ್ನು ಆಗಸ್ಟ್ 30, 2022 ರವರೆಗೆ ವಯಸ್ಕರಂತೆ ವಿಚಾರಣೆಗೆ ಒಳಪಡಿಸಲಾಯಿತು. ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದ ನಂತರ, ಪ್ರಕರಣವನ್ನು ಬಾಲಾಪರಾಧ ನ್ಯಾಯ ಮಂಡಳಿಗೆ ವರ್ಗಾಯಿಸಲಾಯಿತು. ಹೈಕೋರ್ಟ್ ನೀಡಿದ ಆದೇಶದ ಸ್ವರೂಪಕ್ಕೆ ಸಂಬಂಧಿಸಿದಂತೆ ವಿವಾದಗಳನ್ನು ಉಲ್ಲೇಖಿಸಲಾಗಿದೆಯಾದರೂ, ಈ ಹಂತದಲ್ಲಿ ನಾವು ವಿಷಯದ ಎಲ್ಲ ಅಂಶಗಳಿಗೆ ಹೋಗಬೇಕಾಗಿಲ್ಲ. ಆರಂಭದಲ್ಲಿ ನಾವು ಅರ್ಜಿದಾರರು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರು ಎಂದು ಗಮನಿಸುತ್ತೇವೆ. ಈ ವಿಷಯದ ದೃಷ್ಟಿಯಿಂದ, ಜಾಮೀನು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ: ಕಾರಿನಲ್ಲಿ ಚಲಿಸುತ್ತಿದ್ದ ಮಹಿಳೆ ಅಪಹರಿಸಿ ಲೈಂಗಿಕ ದೌರ್ಜನ್ಯ.. ಬಾಲಾಪರಾಧಿ ಸೇರಿ ಐವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.