ETV Bharat / bharat

'ಜೈ ಭೀಮ್‌'ನಂತಹ ಚಲನಚಿತ್ರಗಳತ್ತ ಒಲವು ಹೆಚ್ಚಾಗುತ್ತಿದೆ : ನಟ ಸೂರ್ಯ - ಜೈ ಭೀಮ್ ಚಿತ್ರ

ಚಿತ್ರವು ನವೆಂಬರ್ 2 ರಂದು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಜೈ ಭೀಮ್ ಚಿತ್ರವನ್ನು 2ಡಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸೂರ್ಯ ಮತ್ತು ಜ್ಯೋತಿಕಾ ನಿರ್ಮಿಸಿದ್ದಾರೆ..

Jai Bhim a hard-hitting, intense film, not just another entertainer: Suriya
'ಜೈ ಭೀಮ್‌'ನಂತಹ ಚಲನಚಿತ್ರಗಳತ್ತ ಒಲವು ಹೆಚ್ಚಾಗುತ್ತಿದೆ: ಸೂರ್ಯ
author img

By

Published : Oct 31, 2021, 5:31 PM IST

ಮುಂಬೈ (ಮಹಾರಾಷ್ಟ್ರ): ತಮ್ಮ ಮುಂಬರುವ ಜೈ ಭೀಮ್ ಚಿತ್ರ ಮೌಲ್ಯವನ್ನು ಹೊಂದಿರುವ ಚಲನಚಿತ್ರವಾಗಿದೆ ಎಂದು ನಟ ಸೂರ್ಯ ಹೇಳಿದ್ದಾರೆ.

ಇದು ನ್ಯಾಯಕ್ಕಾಗಿ, ಸಮುದಾಯದ ಅನ್ವೇಷಣೆಯ ಕಟುವಾದ ಚಿತ್ರಣದ ಮೂಲಕ ಹಲವಾರು ಪ್ರಮುಖ ಪ್ರಶ್ನೆಗಳನ್ನು ಎತ್ತುವ ಗುರಿಯನ್ನು ಹೊಂದಿದೆ. ಈ ಚಿತ್ರವು ತಮಿಳುನಾಡಿನಲ್ಲಿ 1990ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ ಮತ್ತು ಇರುಲರ್ ಬುಡಕಟ್ಟು ಸಮುದಾಯದ ಸೆಂಗೇಣಿ ಮತ್ತು ರಾಜಕಣ್ಣು ದಂಪತಿಗಳ ಕಥೆಯನ್ನು ಅನುಸರಿಸುತ್ತದೆ ಎಂದು ವಿವರಿಸಿದ್ದಾರೆ.

ರಾಜಕಣ್ಣು ಸುಳ್ಳು ಆರೋಪದ ಮೇಲೆ ಬಂಧಿಸಲ್ಪಡುತ್ತಾನೆ. ನಂತರ ಪೊಲೀಸ್ ಕಸ್ಟಡಿಯಿಂದ ಆತ ನಾಪತ್ತೆಯಾದಾಗ, ಅವನ ಹೆಂಡತಿ ತನ್ನ ಗಂಡನನ್ನು ಹುಡುಕಲು ವಕೀಲ ಚಂದ್ರುವಿನ(ಸೂರ್ಯ)ಸಹಾಯವನ್ನು ತೆಗೆದುಕೊಳ್ಳುತ್ತಾಳೆ.

  • " class="align-text-top noRightClick twitterSection" data="">

ವರ್ಚುವಲ್​ ಸಭೆಯಲ್ಲಿ ಮಾತನಾಡಿರುವ ಸೂರ್ಯ, ಈಗ ಜೈ ಭೀಮ್‌ನಂತಹ ಚಲನಚಿತ್ರಗಳತ್ತ ಜನರು ಒಲವು ತೋರುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೆ ಇದು ದೊಡ್ಡ ಸಾಮಾಜಿಕ ಸಂಭಾಷಣೆಯನ್ನು ಹುಟ್ಟು ಹಾಕುತ್ತದೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾರೆ.

ನಾನು ಸಿನಿಮಾ ಸಂಬಂಧ ಆಯ್ಕೆಮಾಡುವ ವಿಷಯದ ಬಗ್ಗೆ ಆಳವಾಗಿ ಇಳಿಯಲು ಪ್ರಯತ್ನಿಸುತ್ತೇನೆ ಮತ್ತು ಕಷ್ಟಕರವಾದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತೇನೆ. ಅದರಲ್ಲೇ ಉತ್ತರಗಳನ್ನು ಹುಡುಕುತ್ತೇನೆ ಅಥವಾ ಕನಿಷ್ಠ ಜನರು ಅದರ ಬಗ್ಗೆ ಯೋಚಿಸಲು ಅವಕಾಶ ಮಾಡಿ ಕೊಡುವ ಹಾಗೆ ಮಾಡುತ್ತೇನೆ ಎಂದಿದ್ದಾರೆ.

ತಾ ಸೇ ಜ್ಞಾನವೇಲ್ ನಿರ್ದೇಶಿಸಿದ ಜೈಭೀಮ್ ಮೂಲಭೂತವಾಗಿ ಅಸಮಾನತೆ ವಿರುದ್ಧ ಎದ್ದುನಿಂತು ತುಳಿತಕ್ಕೊಳಗಾದವರಿಗೆ ನ್ಯಾಯಕ್ಕಾಗಿ ಹೋರಾಡಿದ ಒಬ್ಬ ವ್ಯಕ್ತಿಯ ಪ್ರಯಾಣದ ಕುರಿತಾಗಿದೆ.

ಜೈ ಭೀಮ್ ಚಿತ್ರದಲ್ಲಿ ಪ್ರಕಾಶ್ ರಾಜ್, ರಾವ್ ರಮೇಶ್, ರಜಿಶಾ ವಿಜಯನ್, ಮಣಿಕಂದನ್ ಮತ್ತು ಲಿಜೋ ಮೋಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರವು ನವೆಂಬರ್ 2 ರಂದು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಜೈ ಭೀಮ್ ಚಿತ್ರವನ್ನು 2ಡಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸೂರ್ಯ ಮತ್ತು ಜ್ಯೋತಿಕಾ ನಿರ್ಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.