ETV Bharat / bharat

ಶೀಘ್ರವೇ ಜಗನ್​ ಸರ್ಕಾರ ಪತನ: ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್

author img

By

Published : Nov 4, 2022, 9:47 PM IST

ಜನಸೇನಾ ಪಕ್ಷ ಸಂಸ್ಥಾಪನಾ ದಿನದ ನಿಮಿತ್ತ ಸಾರ್ವಜನಿಕ ಸಭೆ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟಿರುವ ಗ್ರಾಮಸ್ಥರನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್​ ಸರ್ಕಾರವು ಗುರಿಯಾಗಿಸಿಕೊಂಡಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

jagan-government-will-collapse-soon-pawan-kalyan
ಶೀಘ್ರವೇ ಜಗನ್​ ಸರ್ಕಾರ ಪತನ: ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್

ಅಮರಾವತಿ (ಆಂಧ್ರ ಪ್ರದೇಶ): ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖ್ಯಸ್ಥ ವೈಎಸ್​ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶದ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ತೆಲುಗಿನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ಬಾಂಬ್​ ಸಿಡಿಸಿದ್ದಾರೆ.

ಗುಂಟೂರು ಜಿಲ್ಲೆಯ ಇಪ್ಪತಂ ಗ್ರಾಮದಲ್ಲಿ ಶುಕ್ರವಾರ ಜನಸೇನಾ ಪಕ್ಷದ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಉಲ್ಲೇಖಿಸಿ ಮತ್ತು ಇದನ್ನು ಖಂಡಿಸಿರುವ ಪವನ್​ ಕಲ್ಯಾಣ್​, ಈ ಧ್ವಂಸದಿಂದಲೇ ಸರ್ಕಾರ ಪತನವು ಆರಂಭವಾಗಿದ್ದು, ಅದು ಉರುಳುವ ದಿನ ದೂರವಿಲ್ಲ ಎಂದು ಗುಡುಗಿದ್ದಾರೆ.

ಮಾರ್ಚ್ 14ರಂದು ಜನಸೇನಾ ಪಕ್ಷ ಸಂಸ್ಥಾಪನಾ ದಿನದ ನಿಮಿತ್ತ ಸಾರ್ವಜನಿಕ ಸಭೆ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟಿರುವ ಗ್ರಾಮಸ್ಥರನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್​ ಸರ್ಕಾರವು ಗುರಿಯಾಗಿಸಿಕೊಂಡಿದೆ.

ಅಮರಾವತಿಯಲ್ಲಿ ಜನಸೇನೆಯೊಂದಿಗೆ ಸಹಕರಿಸಬೇಡಿ ಎಂದು ಜನರಿಗೆ ಆಡಳಿತ ಪಕ್ಷದ ನಾಯಕರು ಬೆದರಿಕೆ ಹಾಕುತ್ತಿದ್ದಾರೆ. ಇದರ ಬೆದರಿಕೆ ನಡುವೆಯೂ ಜನಸೇನಾ ಸಾರ್ವಜನಿಕ ಸಭೆಗೆ ಗ್ರಾಮಸ್ಥರು ತಮ್ಮ ಸ್ಥಳ ನೀಡಲು ಮುಂದೆ ಬಂದಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಪ್ಯಾಕೇಜ್​ ಸ್ಟಾರ್​ ಎಂದರೆ.. ಪವರ್​ ಸ್ಟಾರ್ ಪವನ್​ ಕಲ್ಯಾಣ್​ ರೋಷಾಗ್ನಿ

ಇಪ್ಪತಂ ಗ್ರಾಮದಲ್ಲಿ ಈಗಾಗಲೇ 70 ಅಡಿ ರಸ್ತೆ ಇದ್ದು, ಸಂಚಾರ ರಸ್ತೆ ಸಾಕಾಗುತ್ತದೆ. ಜನಸೇನಾ ಸಾರ್ವಜನಿಕ ಸಭೆಗೆ ಸ್ಥಳ ನೀಡಲು ಮುಂದಾಗಿದ್ದರಿಂದ ಗ್ರಾಮಸ್ಥರನ್ನು ಗುರಿಯಾಗಿಸಿಕೊಂಡು ಹಾಗೂ ಉದ್ದೇಶಪೂರ್ವಕವಾಗಿ 120 ಅಡಿಗಳಿಗೆ ರಸ್ತೆ ವಿಸ್ತರಿಸಲಾಗುತ್ತಿದೆ. ಈ ರಾಜಕೀಯ ಸೇಡಿನಿಂದ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಜನಸೇನಾ ಅಧ್ಯಕ್ಷರಾದ ಪವನ್​ ಆರೋಪಿಸಿದ್ದಾರೆ.

ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಯಾವುದೇ ನೋಟಿಸ್ ಜಾರಿ ಮಾಡದೆ ತೆರವು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಮನೆಗಳ ಧ್ವಂಸಗೊಳಿಸುವುದನ್ನು ಖಂಡಿಸಿ ಪ್ರತಿಭಟನಾಕಾರರು ಜೆಸಿಬಿಗಳ ಮುಂದೆ ಧರಣಿ ಕುಳಿತಿದ್ದರು. ಇಪ್ಪಟಂ ಗ್ರಾಮಕ್ಕೆ ಪವನ್ ಕಲ್ಯಾಣ್ ಶನಿವಾರ ಭೇಟಿ ನೀಡಲು ಸಹ ಉದ್ದೇಶಿಸಿದ್ದಾರೆ.

ಇದನ್ನೂ ಓದಿ: ಇಸುದನ್ ಗಧ್ವಿ.. ನ್ಯೂಸ್​ ಚಾನೆಲ್​ನ ಜನಪ್ರಿಯತೆಯಿಂದ ಗುಜರಾತ್​ ಸಿಎಂ ಅಭ್ಯರ್ಥಿಯವರೆಗೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.