ಕುಲ್ಗಾಂ, ಜಮ್ಮು ಮತ್ತು ಕಾಶ್ಮೀರ: ಕುಲ್ಗಾಂನಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.
ಭಯೋತ್ಪಾದಕರಿರುವುದಾಗಿ ನಿಖರ ಮಾಹಿತಿ ಪಡೆದುಕೊಂಡು ಹೊರಟ ಕುಲ್ಗಾಂ ಪೊಲೀಸರು, ಸಿಆರ್ಪಿಎಫ್ನ 18ನೇ ಬೆಟಾಲಿಯನ್ ಮತ್ತು ರಾಷ್ಟ್ರೀಯ ರೈಫಲ್ ಜೊತೆಗೂಡಿ ಚಿಮ್ಮರ್ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಭಯೋತ್ಪಾದಕರು ಪತ್ತೆಯಾದ ಮೇಲೆ ಪದೇ ಪದೇ ಶರಣಾಗುವಂತೆ ಮನವಿ ಮಾಡಿದರೂ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಕೊಂದಿದ್ದಾರೆ.
ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಸೈನಿಕರಿಗೆ ಗಾಯವಾಗಿದ್ದು, ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: World Bank: ಭಾರತದ ಅಸಂಘಟಿತ ಕಾರ್ಮಿಕರ ನೆರವಿಗಾಗಿ 500 ಮಿಲಿಯನ್ ಡಾಲರ್ ಸಾಲ
ಇನ್ನು ಹತ್ಯೆಯಾದ ಭಯೋತ್ಪಾದಕರನ್ನು ರೆದ್ವಾನಿ ಕುಲ್ಗಾಂ ಪ್ರದೇಶದ ವಸೀಮ್ ಅಹ್ಮದ್ ಬಂಗ್ರೂ, ಕಿಲ್ಬಾಲ್ ಶೋಪಿಯಾನ್ ನಿವಾಸಿ ಶಹನಾವಾಜ್ ಅಹ್ಮದ್ ಮತ್ತು ಚಿಮ್ಮರ್ ಕುಲ್ಗಾಂ ನಿವಾಸಿ ಝಾಕಿರ್ ಬಶೀರ್ ಎಂದು ಗುರುತಿಸಲಾಗಿದೆ. ಎನ್ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.