ETV Bharat / bharat

ಯೂರೋಪ್​ ಮೂಲದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಇಬ್ಬರ ಬಂಧನ - ಈಟಿವಿ ಭಾರತ ಕನ್ನಡ

ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಇಬ್ಬರು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಸಾಗಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

two arrested
ಯೂರೋಪ್​ ಮೂಲದ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಇಬ್ಬರ ಬಂಧನ
author img

By

Published : Oct 31, 2022, 7:09 AM IST

ಶ್ರೀನಗರ( ಜಮ್ಮು ಮತ್ತು ಕಾಶ್ಮೀರ): ಯುರೋಪ್‌ನಿಂದ ಸಂಘಟಿತವಾಗಿರುವ ಭಯೋತ್ಪಾದಕ ಘಟಕವನ್ನು ಭೇದಿಸಿರುವುದು ಮತ್ತು ಜಮ್ಮುವಿನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಾಗಿಸುವಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವುದಾಗಿ ಜಮ್ಮು & ಕಾಶ್ಮೀರ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರ್​ಎಸ್​ ಪುರದ ಅಂತಾರಾಷ್ಟ್ರೀಯ ಗಡಿಯ ಬಸ್ಪುರ್ ಬಾಂಗ್ಲಾ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಸಾಗಿಸುವಲ್ಲಿ ತೊಡಗಿದ್ದ ದೋಡಾದ ಚಂದರ್ ಬೋಸ್ ಮತ್ತು ಜಮ್ಮುವಿನ ಕ್ಯಾಂಪ್ ಗೋಲ್ ಗುಜ್ರಾಲ್‌ನ ಶಂಶೇರ್ ಸಿಂಗ್​ರನ್ನು ಪೊಲೀಸರು ಬಂಧಿಸಿ, ಅವರ ಬಳಿ ಇದ್ದ ನಾಲ್ಕು ಪಿಸ್ತೂಲ್‌ಗಳು, ಎಂಟು ಮ್ಯಾಗಜೀನ್‌ಗಳು ಮತ್ತು 47 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ, ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರ ಬಾಸ್ ಬಲ್ವಿಂದರ್​​ ಯುರೋಪ್​ನಲ್ಲಿ ಅಡಗಿ ಕುಳಿತು ಕೆಲಸ ಮಾಡುತ್ತಿದ್ದಾನೆ ಎಂದು ಬಂಧಿತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ರಸ್ತೆ ನಿರ್ಮಾಣದ ವೇಳೆ ಭೂಕುಸಿತ, 4 ಸಾವು, 6 ಮಂದಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.