ETV Bharat / bharat

ಇಸ್ರೇಲ್​ ವಿರೋಧಿ ಪ್ರತಿಭಟನೆ: ಬಂಧಿತ 17 ಕಾಶ್ಮೀರಿ ಯುವಕರ ಬಿಡುಗಡೆ

author img

By

Published : May 16, 2021, 11:46 PM IST

ಇಸ್ರೇಲ್‌ - ಪ್ಯಾಲೆಸ್ಟೈನ್‌ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಜಮ್ಮು-ಕಾಶ್ಮೀರದಲ್ಲಿ ಇಸ್ರೇಲ್​ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ 17 ಜನರ ಬಂಧನ ಮಾಡಲಾಗಿತ್ತು. ಇದೀಗ ಅವರನ್ನ ಬಿಡುಗಡೆ ಮಾಡಲಾಗಿದೆ.

J-K police releases youths
J-K police releases youths

ಶ್ರೀನಗರ: ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಇಸ್ರೇಲ್​ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 17 ಯುವಕರನ್ನು ಬಂಧಿಸಿದ್ದ ಜಮ್ಮು-ಕಾಶ್ಮೀರ ಪೊಲೀಸರು ಇದೀಗ ಅವರನ್ನು ರಿಲೀಸ್​ ಮಾಡಿದ್ದಾರೆ.

ಜಮ್ಮು-ಕಾಶ್ಮೀರ ಪೊಲೀಸರಿಂದ 17 ಯುವಕರ ಬಂಧನವಾಗಿತ್ತು. ಆದರೆ ಇಂದು ಅವರನ್ನ ಬಿಡುಗಡೆ ಮಾಡಲಾಗಿದೆ. ಪ್ಯಾಲೆಸ್ಟೈನ್‌​ ಪರ ಬರಹ, ಚಿತ್ರ ಬಿಡಿಸಿದ್ದ ಕಲಾವಿದ ಮುದಾಸೀರ್​ ಗುಲ್​ ಸಹ ಇದರಲ್ಲಿ ಬಂಧನವಾಗಿದ್ದನು.

ಅವರಿಂದ ಮಾಹಿತಿ ಪಡೆದುಕೊಂಡ ಬಳಿಕ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಈ ವೇಳೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಸೆಕ್ಷನ್​ 51 ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುವಕರು ದಾರಿ ತಪ್ಪದಂತೆ ನೋಡಿಕೊಳ್ಳಲು ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

32 ವರ್ಷದ ಗುಲ್​, ಆಳುತ್ತಿರುವ ಮಹಿಳೆಯ ಮುಖ ಪಾಲೆಸ್ಟೈನ್‌​ ಧ್ವಜದಲ್ಲಿ ಚಿತ್ರಿಸಲಾಗಿದ್ದು, ನಾವು ಪ್ಯಾಲೆಸ್ಟೈನ್​ ಎಂಬ ಪದವನ್ನ ದಪ್ಪವಾಗಿ ಬಿಳಿ ಅಕ್ಷರದಲ್ಲಿ ಬರೆದಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗುಲ್ ತಾಯಿ, ಕೆಲವರು ನಮ್ಮ ಮನೆಗೆ ಬಂದು ಚಿತ್ರ ಬಿಡಿಸುವಂತೆ ತಿಳಿಸಿದ್ದರು ಎಂದಿದ್ದಾರೆ. ಈ ವೇಳೆ ನನ್ನ ಮಗ ನಿರಾಕರಣೆ ಮಾಡಿದ್ದನು. ಆದರೆ ಅವರು ಭಾರತದ ವಿರುದ್ಧ ಇದರಲ್ಲಿ ಏನೂ ಇರುವುದಿಲ್ಲ ಎಂದು ಮನವರಿಕೆ ಮಾಡಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಗಂಗಾ ನದಿಯಲ್ಲಿ ಮೃತದೇಹ: ಕೇಂದ್ರದಿಂದ ಬಿಹಾರ, ಉತ್ತರ ಪ್ರದೇಶಕ್ಕೆ ನೋಟಿಸ್​

ಕಳೆದ ಕೆಲ ದಿನಗಳಿಂದ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್‌ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಗಾಜಾ ಸಿಟಿ ಮೇಲೆ ವೈಮಾನಿಕ ದಾಳಿ ನಡೆಸಿರುವ ಇಸ್ರೇಲ್​ ಅನೇಕ ಕಟ್ಟಡ ನೆಲಸಮಗೊಳಿಸಿದೆ. ಘಟನೆ ವೇಳೆ ನೂರಾರು ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.