ETV Bharat / bharat

LeT ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಬಂಧನ: AK 56, 30 ಜೀವಂತ ಗುಂಡು ವಶಕ್ಕೆ!

ಲಷ್ಕರ್​ -ಇ-ತೊಯ್ಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಬಂಧನ ಮಾಡುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

author img

By

Published : Mar 8, 2022, 1:32 PM IST

LeT associate held in Baramulla
LeT associate held in Baramulla

ಬಾರಾಮುಲ್ಲಾ(ಜಮ್ಮು-ಕಾಶ್ಮೀರ): ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್​-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಸಹಚರನ ಭದ್ರತಾ ಪಡೆಗಳು ಬಂಧನ ಮಾಡಿವೆ. ಬಂಧಿತ ವ್ಯಕ್ತಿಯಿಂದ AK 56 ರೈಫಲ್​, ಮ್ಯಾಗಜೀನ್ ಮತ್ತು 30 ಜೀವಂತ ಗುಂಡು ವಶಕ್ಕೆ ಪಡೆದುಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವ ಸೋಪೋರ್ ಪೊಲೀಸರು ಫಿರ್ದೌಸ್​ ಅಹ್ಮದ್​ ಎಂಬಾತನ ಬಂಧನ ಮಾಡಿದ್ದಾರೆ. ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ: ವಿಶೇಷ ಚೇತನ ವ್ಯಕ್ತಿಗೆ ಜೆರ್ಸಿ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ​​

ಏರ್ ಇಂಡಿಯಾ ವಿಮಾನ ಹೈಜಾಕ್ ಮಾಡಿದ್ದ ಉಗ್ರ ಸಾವು: 1999ರಲ್ಲಿ ಏರ್ ಇಂಡಿಯಾದ ಐಸಿ 814 ವಿಮಾನ ಹೈಜಾಕ್ ಮಾಡಿದ್ದ ಉಗ್ರರಲ್ಲಿ ಓರ್ವ ಝಹೂರ್​ ಮಿಸ್ತ್ರಿ ಪಾಕಿಸ್ತಾನದಲ್ಲಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಆತನ ನಿವಾಸದ ಮೇಲೆ ದಾಳಿ ಮಾಡಿರುವ ದಾಳಿಕೋರರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.