ಬದ್ಗಾಂ(ಜಮ್ಮು ಕಾಶ್ಮೀರ): ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ದಾಳಿ ನಡೆಸಿ ಲಷ್ಕರ್ ಎ ತೋಯ್ಬಾದ ಇಬ್ಬರು ಭಯೋತ್ಪಾದಕರ ಸಹಚರರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬದ್ಗಾಂನ ಚಂದೂರ ಪ್ರದೇಶದ ಕರಲಪುರ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಸಿಆರ್ಪಿಎಫ್ ಮತ್ತು ಭಾರತೀಯ ಸೇನೆ ಹಾಗೂ ಬದ್ಗಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿವೆ. ಅಬ್ದುಲ್ ಮಜೀದ್ ಮಗ್ರಾ ಮಗನಾದ ಇಮ್ರಾನ್ ಮಜೀದ್ ಮತ್ತು ಮುಹಮದ್ ಅಮಿನ್ ರಾಥರ್ ಮಗನಾದ ಅಖೀಬ್ ಅಮಿನ್ ಬಂಧಿತರಾಗಿದ್ದರಾಗಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ಇಬ್ಬರೂ, ಎಲ್ಇಟಿಯ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಸಹಕರಿಸುತ್ತಿದ್ದರು ಎನ್ನಲಾಗಿದೆ. ಚಂದೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.
ಇದನ್ನೂ ಓದಿ: ಉನ್ನತ ಸ್ಥಾನದ 100ಕ್ಕೂ ಅಧಿಕ ಅಧಿಕಾರಿಗಳು ಭ್ರಷ್ಟರು.. ಸದನದಲ್ಲಿ ಮಾಹಿತಿ ನೀಡಿದ ಸರ್ಕಾರ