ETV Bharat / bharat

ಭಾರತವು ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಬೇಕಾದ ಸಮಯವಿದು : ತಜ್ಞರ ಅಭಿಪ್ರಾಯ

author img

By

Published : Jun 22, 2021, 10:43 PM IST

ಲಸಿಕೆಗಳು ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪ್ರಮುಖ ಸಾಧನವಾಗಿವೆ. ಸಾಮೂಹಿಕ ಸಭೆ ಮತ್ತು ಸಾರ್ವಜನಿಕ ಸ್ಥಳಗಳನ್ನು ನಿರ್ಬಂಧಿಸುವುದು ಸಹ ಮುಖ್ಯವಾಗಿದೆ. ಇದಕ್ಕೆ ವ್ಯವಸ್ಥೆಯ ಸಿದ್ಧತೆ ಕೂಡ ಬಹಳ ಅವಶ್ಯಕವಾಗಿದೆ..

corona
corona

ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಾರಕ ದಾಳಿಯಿಂದ ಭಾರತ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆ ತಜ್ಞರು ದೇಶವು ತನ್ನ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಮೂರನೇ ಅಲೆಯ ಆಗಮನವು ನಾವು ದೇಶವನ್ನು ಹೇಗೆ ಅನ್‌​ಲಾಕ್​ ಮಾಡುತ್ತಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ತಜ್ಞರು ಎಚ್ಚರಿಸಿದಾರೆ.

ಈ ಮಧ್ಯೆ ಸೋಮವಾರ (82 ಲಕ್ಷಕ್ಕೂ ಹೆಚ್ಚು)ಅತೀ ವೇಘವಾಗಿ ವ್ಯಾಕ್ಸಿನೇಷನ್‌ ನಡೆದಿದ್ದು, ಸಾಂಕ್ರಾಮಿಕ ರೋಗದ 3ನೇ ಅಲೆ ಎದುರಾದರೂ ಭಾರತಕ್ಕೆ ಅದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬ ಭರವಸೆ ನೀಡಿದೆ. ಸಾಂಕ್ರಾಮಿಕ ರೋಗದ 2ನೇ ಅಲೆ ಭಾರತವನ್ನು ಕಂಗೆಡಿಸಿತು. ದೇಶವು ವ್ಯಾಪಕ ಸೋಂಕು ಮತ್ತು ಗರಿಷ್ಠ ಸಾವು-ನೋವುಗಳಿಗೆ ಸಾಕ್ಷಿಯಾಯಿತು.

ನಗರ ಪ್ರದೇಶಗಳ ಹೊರತಾಗಿ, ದೇಶದ ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರಿದ 2ನೇ ಅಲೆಯು, ಭಾರತದ ಆರೋಗ್ಯ ವ್ಯವಸ್ಥೆ ಪುನರುಜ್ಜೀವನಗೊಳ್ಳುವ ಅಗತ್ಯವನ್ನು ಬಹಿರಂಗಪಡಿಸಿದೆ ಎಂದು ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್‌ನ ಅಧ್ಯಕ್ಷ ಡಾ.ತಮೋರಿಶ್ ಕೋಲೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಕೊರೊನಾ 2ನೇ ಅಲೆ ಅಪ್ಪಳಿಸಿದಾಗ ಭಾರತ ತನ್ನ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಕೊರತೆ ಎದುರಿಸಬೇಕಾಯ್ತು. ಆಸ್ಪತ್ರೆ ಹಾಸಿಗೆಗಳು, ಐಸಿಯು ಬೆಡ್​ಗಳ ಕೊರತೆ, ಆಮ್ಲಜನಕದ ಅಲಭ್ಯತೆ ನಾಗರಿಕರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ. ನಿರ್ದಿಷ್ಟ ಪ್ರದೇಶಗಳ ಅನ್‌ಲಾಕ್‌ಗೆ ಸಂಬಂಧಿಸಿದಂತೆ ಆಡಳಿತವು ಹೆಚ್ಚು ಜಾಗರೂಕರಾಗಿರಬೇಕು ಎಂದು ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಸುನೀಲ ಗರ್ಗ್ ಹೇಳಿದ್ದಾರೆ.

ಲಸಿಕೆಗಳು ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪ್ರಮುಖ ಸಾಧನವಾಗಿವೆ ಎಂದು ಡಾ. ಗರ್ಗ್ ಹೇಳಿದರು. "ಸಾಮೂಹಿಕ ಸಭೆ ಮತ್ತು ಸಾರ್ವಜನಿಕ ಸ್ಥಳಗಳನ್ನು ನಿರ್ಬಂಧಿಸುವುದು ಸಹ ಮುಖ್ಯವಾಗಿದೆ. ಇದಕ್ಕೆ ವ್ಯವಸ್ಥೆಯ ಸಿದ್ಧತೆ ಕೂಡ ಬಹಳ ಅವಶ್ಯಕವಾಗಿದೆ" ಎಂದು ಅವರು ಹೇಳಿದ್ದಾರೆ. ಕೋವಿಡ್ ವಿರುದ್ಧ ಹೋರಾಡಲು ಆರೋಗ್ಯ ಕಾರ್ಯಕರ್ತರನ್ನು ಸಿದ್ಧಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರೂ ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.