ETV Bharat / bharat

ITPB Jobs: ಐಟಿಬಿಪಿಯಲ್ಲಿ 458 ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ಮಾಹಿತಿ

ಐಟಿಬಿಪಿಯಲ್ಲಿ 458 ಕಾನ್ಸ್​ಟೇಬಲ್​ (ಡ್ರೈವರ್​) ಹುದ್ದೆ ಮತ್ತು 81 ಹೆಡ್​ಕಾನ್ಸ್​ಟೇಬಲ್​ (ಮಿಡ್​ವೈಫ್​) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

itpb-recruitment-for-458-constable-driver-and-81-head-constable-midwife

author img

By

Published : Jun 27, 2023, 3:54 PM IST

ಕೇಂದ್ರ ಸರ್ಕಾರದ ಗೃಹ ಇಲಾಖೆಯಡಿ ಬರುವ ಇಂಡೋ- ಟಿಬೆಟಿಯನ್​ ಗಡಿ ಭದ್ರತಾ ಪಡೆ (ಐಟಿಬಿಪಿ)ಯಲ್ಲಿ ಖಾಲಿ ಇರುವ 458 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನ್ಸ್​​ಟೇಬಲ್​ ಡ್ರೈವರ್​ ಹುದ್ದೆಗಳು ಇದಾಗಿದ್ದು, ವಾಹನ ಚಾಲನೆಯಲ್ಲಿ ತರಬೇತಿ ಹೊಂದಿರುವ, ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ: ಕಾನ್ಸ್​ಟೇಬಲ್​ ಡ್ರೈವರ್​​ ಹುದ್ದೆಗೆ ಅಧಿಸೂಚನೆ. ಒಟ್ಟು 458 ಹುದ್ದೆಗಳ ಭರ್ತಿಗೆ ಕ್ರಮ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಮಂಡಳಿಯಿಂದ ಎಸ್​ಎಸ್​ಎಲ್​ಸಿ ಶಿಕ್ಷಣ ಪಡೆದಿರಬೇಕು. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ವಯೋಮಿತಿ: ವಯೋಮಿತಿ ಕನಿಷ್ಠ 21ರಿಂದ ಗರಿಷ್ಠ 27 ವರ್ಷ. 27-07-1996ಗಿಂತ ನಂತರ ಜನಿಸಿದ ಮತ್ತು ಜುಲೈ 26- 2002ರ ನಂತರ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ?: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ನಿವೃತ್ತ ಸೇವಾ ನೌಕರರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಇತರೆ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳ ದೈಹಿಕ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್​ಟಿ), ಲಿಖಿತ ಪರೀಕ್ಷೆ, ಮೂಲ ಪ್ರತಿಗಳ ಪರಿಶೀಲನೆ, ಪ್ರಾಯೋಗಿಕ ಪರೀಕ್ಷೆ ಮತ್ತು ಮೆಡಿಕಲ್​ ಪರೀಕ್ಷೆ ಹಾಗೂ ರಿವ್ಯೂ ಮೆಡಿಕಲ್​ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಕೆ ಜೂನ್​ 27 ರಿಂದ ಆರಂಭವಾಗಿದ್ದು, ಜುಲೈ 27ರವರೆಗೆ ಅವಕಾಶ ನೀಡಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆಗಳ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ recruitment.itbpolice.nic.in ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

ಐಟಿಬಿಪಿಯಲ್ಲಿ ಹೆಡ್​ಕಾನ್ಸಟೇಬಲ್​ (ಮಿಡ್​ವೈಫ್​) ಹುದ್ದೆ: ಐಟಿಬಿಪಿಯ ಮತ್ತೊಂದು ಹೊಸ ಅಧಿಸೂಚನೆಯಲ್ಲಿ 81 ಹೆಡ್​ ಕಾನ್ಸ್​ಟೇಬಲ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ ನೇಮಕಾತಿ ನಡೆಯಲಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವೇತನ: ಮಾಸಿಕ 25,500 ರೂ ಯಿಂದ 81,100 ರೂ.ವರೆಗೆ ವೇತನ ನಿಗದಿಯಾಗಿರುವ ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಗುಣಮಟ್ಟ ಪರೀಕ್ಷೆ, ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಡಿಎಂಇ/ ಆರ್​ಎಂಇ ಮೂಲಕ ಆಯ್ಕೆ ನಡೆಸಲಾಗುತ್ತದೆ. ಜೂನ್​ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನಾಂಕ ಜುಲೈ 8. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು itbpolice.nic.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ನೇಮಕಾತಿ: 196 ಹುದ್ದೆಗಳಿಗೆ ಅರ್ಜಿ ಆಹ್ವಾನ.. ಆಸಕ್ತರು ಇಂದೇ ಅರ್ಜಿ ಸಲ್ಲಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.