ETV Bharat / bharat

ಬೆಟ್ಟದಿಂದ ಉರುಳುತ್ತಿದೆ ಕಲ್ಲು,ಮಣ್ಣು: ಹಿಮಾಚಲದಲ್ಲಿ ಕಾರ್ಯಾಚರಣೆಗೆ ಸ್ಥಗಿತಗೊಳಿಸಿದ ಸಿಬ್ಬಂದಿ

ಹಿಮಾಚಲ ಪ್ರದೇಶದಲ್ಲಿ ಭಕ್ತಾದಿಗಳನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್​ ಹಾಗೂ ಇತರ ವಾಹನಗಳ ಮೇಲೆ ದಿಢೀರ್​ ಮಣ್ಣು ಕುಸಿದು ಬಿದ್ದ ದುರ್ಘಟನೆ ನಿನ್ನೆ ನಡೆದಿದ್ದು, ಇಲ್ಲಿಯವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ.

landslide in Kinnaur
ಹಿಮಾಚಲದಲ್ಲಿ ಭೂಕುಸಿತ
author img

By

Published : Aug 12, 2021, 8:02 AM IST

Updated : Aug 12, 2021, 1:38 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕಿನ್ನೌರ್​​ನಲ್ಲಿ ನಿನ್ನೆ ದೊಡ್ಡ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸರ್ಕಾರಿ ಬಸ್​ ಸೇರಿದಂತೆ ಅನೇಕ ವಾಹನಗಳ ಮೇಲೆ ಮಣ್ಣು ಹಾಗೂ ಕಲ್ಲುಗಳು ಬಿದ್ದಿದ್ದವು. ಪರಿಣಾಮ ಸುಮಾರು 40ಕ್ಕೂ ಹೆಚ್ಚು ಮಂದಿ ಅದರಡಿ ಸಿಲುಕಿಕೊಂಡಿದ್ದರು.

Kinnaur
ಸರ್ಕಾರಿ ಬಸ್​ ಹಾಗೂ ಇತರ ವಾಹನಗಳ ಮೇಲೆ ದಿಢೀರ್​ ಮಣ್ಣು ಕುಸಿತ

ಉಳಿದ ಜನರಿಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಎನ್​ಡಿಆರ್​ಎಫ್​ ತಂಡಗಳು ಶೋಧ​ ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ ಮತ್ತೆ ಬೆಟ್ಟಗಳಿಂದ ಕಲ್ಲುಗಳು ಉರುಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

Kinnaur
ಕಾರ್ಯಾಚರಣೆಗೆ ಸ್ಥಗಿತಗೊಳಿಸಿದ ಸಿಬ್ಬಂದಿ

ಇವತ್ತು ಅವಘಡ ಸಂಭವಿಸಿದ ಸ್ಥಳದಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

Kinnaur
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ

ಇದನ್ನೂ ಓದಿ: ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿದ 40ಕ್ಕೂ ಅಧಿಕ ಜನರು: 10 ಸಾವು, 14 ಮಂದಿಯ ರಕ್ಷಣೆ

ಭಕ್ತಾದಿಗಳನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್​ ಹಾಗೂ ಇತರ ವಾಹನಗಳ ಮೇಲೆ ದಿಢೀರ್​ ಮಣ್ಣು ಕುಸಿದು ಬಿದ್ದು ಈ ದುರಂತ ಸಂಭವಿಸಿತ್ತು. ಭೂಕುಸಿತದಿಂದ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ ಬಸ್​ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿತ್ತು. ಬಸ್ ಕಿನ್ನೌರಿನ ರೆಕಾಂಗ್ ಪಿಯೊದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

ಹಿಮಾಚಲದಲ್ಲಿ ಭೀಕರ ದುರಂತ

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ; ಅವಶೇಷಗಳಡಿ 40ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ

ಇಲ್ಲಿಯವರೆಗೆ ಬಸ್ ಚಾಲಕ ಸೇರಿದಂತೆ 13 ಜನರನ್ನು ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಎನ್‌ಡಿಆರ್‌ಎಫ್ (NDRF) ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಈಗಾಗಲೇ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜಯರಾಮ್​ ಠಾಕೂರ್​ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

Last Updated : Aug 12, 2021, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.