ಉತ್ತರಾಖಂಡ: ಇಲ್ಲಿನ ಚಮೋಲಿಯ ಹಿಮ್ವೀರ್ ವಸುಂಧರಾ ಮತ್ತು ಸತೋಪಂತ್ ಹಿಮನದಿಯ ಬಳಿ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್ ಸೈನಿಕರು ಪರ್ವತಾರೋಹಣ ಮತ್ತು ಸ್ಕೀಯಿಂಗ್ ತರಬೇತಿಯನ್ನು ಪೂರೈಸಿ ಮರಳಿ ತಮ್ಮ ಕ್ಯಾಂಪ್ ತಲುಪಿದ್ದಾರೆ.
ಭಾರೀ ಚಂಡಮಾರುತ ಹಾಗೂ ಹಿಮಪಾತದ ನಡುವೆ ಐಟಿಬಿಪಿಯ ಸುಮಾರು 90 ಸೈನಿಕರು 21 ದಿನಗಳ ಕಠಿಣ ತರಬೇತಿಯನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.