ETV Bharat / bharat

ಬಿಬಿಸಿ ಇಂಡಿಯಾ ಪ್ರಕರಣ: ಕಂದಾಯ ಇಲಾಖೆಯ ಅರ್ಜಿ ವಜಾಗೊಳಿಸಿದ ITAT - etv bharat kannada

ಬಿಬಿಸಿ ವರ್ಲ್ಡ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ವರ್ಗಾವಣೆ ಬೆಲೆ ಪ್ರಕರಣದಲ್ಲಿ ಕಂದಾಯ ಇಲಾಖೆಯ ಅರ್ಜಿಯನ್ನು ITAT ವಜಾಗೊಳಿಸಿದೆ.

ITAT dismisses I-T dept's appeal in BBC India case of annual year 2004-05
ಬಿಬಿಸಿ ಇಂಡಿಯಾ ಪ್ರಕರಣ; ಕಂದಾಯ ಇಲಾಖೆಯ ಅರ್ಜಿಯನ್ನು ವಜಾಗೊಳಿಸಿದ ITAT
author img

By PTI

Published : Nov 11, 2023, 10:56 PM IST

ನವದೆಹಲಿ: 2004-05ರ ಹಣಕಾಸು ವರ್ಷದಲ್ಲಿ ಬಿಬಿಸಿ ವರ್ಲ್ಡ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ವರ್ಗಾವಣೆ ಬೆಲೆ ಪ್ರಕರಣದಲ್ಲಿ ಕಂದಾಯ ಇಲಾಖೆಯ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಗುಂಪು ಘಟಕಗಳ ನಡುವಿನ ಜಾಹೀರಾತು ವೆಚ್ಚಗಳನ್ನು 2004-05ರ ಹಣಕಾಸು ವರ್ಷದ ಪಾಸ್-ಥ್ರೂ ವೆಚ್ಚಗಳು ಎಂದು ಪರಿಗಣಿಸಬೇಕು ಎಂಬ CIT(A) ನ ತೀರ್ಪನ್ನು ಐಟಿಎಟಿಯ ದೆಹಲಿ ಪೀಠವು ಎತ್ತಿ ಹಿಡಿದಿದೆ.

"ಜಾಹೀರಾತಿಗೆ ಸಂಬಂಧಿಸಿದ ವೆಚ್ಚಗಳು ವೃತ್ತಿಪತ್ರಿಕೆಗಳಲ್ಲಿ ಜಾಹೀರಾತು ಜಾಗವನ್ನು ಖರೀದಿಸಿದವು. ಇಂತಹ ಚಟುವಟಿಕೆಗಳಿಗೆ ವ್ಯಯಿಸುವ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಇದಕ್ಕಾಗಿ ಹೆಚ್ಚು ಶ್ರಮ ವಹಿಸಬೇಕಾಗಿಲ್ಲ. ಈ ತರ್ಕಗಳ ಮೇಲೆ ಅವುಗಳನ್ನು ಪಾಸ್-ಥ್ರೂ ವೆಚ್ಚ ಎಂದು ಪರಿಗಣಿಸಬೇಕು ಎಂದು ಸಿಐಟಿ (ಎ) ಅಭಿಪ್ರಾಯಪಟ್ಟಿದೆ" ಎಂದು ಐಟಿಎಟಿ ತನ್ನ ಆದೇಶದಲ್ಲಿ ಉಲ್ಲೇಖಿಸಿ ಕಂದಾಯ ಇಲಾಖೆಯ ಮನವಿಯನ್ನು ವಜಾಗೊಳಿಸಿದೆ.

"2004-05ರ ಹಣಕಾಸು ವರ್ಷದ BBC ವರ್ಲ್ಡ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪ್ರಕರಣದ ಇತ್ತೀಚಿನ ತೀರ್ಪಿನಲ್ಲಿ, ದೆಹಲಿ ಟ್ರಿಬ್ಯೂನಲ್ ಜಾಹೀರಾತಿಗೆ ಸಂಬಂಧಿಸಿದ ವೆಚ್ಚಗಳನ್ನು ಪಾಸ್-ಥ್ರೂ ವೆಚ್ಚವಾಗಿ ಪರಿಗಣಿಸಲು ಒಪ್ಪಿಕೊಂಡಿತು ಮತ್ತು ಮಾರ್ಕ್-ಅಪ್ ಅನ್ನು ವಿಧಿಸುವ ಉದ್ದೇಶಕ್ಕಾಗಿ ವೆಚ್ಚವನ್ನು ಆಧಾರದ ಭಾಗವಾಗಿ ಪರಿಗಣಿಸಲಾಗುವುದಿಲ್ಲ" ಎಂದು ಹೇಳಿರುವುದಾಗಿ ನಂಗಿಯಾ ಆಂಡರ್ಸನ್ ಇಂಡಿಯಾ ಪಾಲುದಾರ ನಿತಿನ್​ ನಾರಂಗ್​ ತಿಳಿಸಿದರು.

ಇದನ್ನೂ ಓದಿ: ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ಸಿಂಧು: 'ಲಕ್ಕಿ ಡ್ರಾ' ಆಯ್ಕೆ ರದ್ಧತಿ ಕೋರಿ ಸಲ್ಲಿಸಿದ ಅರ್ಜಿ ವಜಾ

ಬಿಬಿಸಿ ವರ್ಲ್ಡ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ ಅದರ ಸಂಬಂಧಿತ ಉದ್ಯಮಗಳಿಗೆ ಸೇವೆಗಳನ್ನು ಒದಗಿಸುವ ನಿರೀಕ್ಷೆಯ ಚಟುವಟಿಕೆಗಳ ವಿಷಯದಲ್ಲಿ ಅಂತರ - ಕಂಪೆನಿ ಒಪ್ಪಂದವು ಸ್ಪಷ್ಟವಾಗಿದೆ ಎಂದು ನ್ಯಾಯಮಂಡಳಿ ಗಮನಿಸಿದೆ. ಜಾಹೀರಾತಿಗೆ ಸಂಬಂಧಿಸಿದ ವೆಚ್ಚಗಳು ಪತ್ರಿಕೆಗಳಲ್ಲಿ ಜಾಹೀರಾತು ಸ್ಥಳವನ್ನು ಖರೀದಿಸಲು ಮತ್ತು ಅಂತಹ ಚಟುವಟಿಕೆಗಳಲ್ಲಿ ಒಳಗೊಂಡಿರುವ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಅಲ್ಲದೇ, ಅಂತಹ ಸ್ಥಳವನ್ನು ಖರೀದಿಸಲು ಹೆಚ್ಚು ಶ್ರಮವಿಲ್ಲ ಎಂದು ಅದು ಹೇಳಿದೆ.

"ಆದ್ದರಿಂದ, ನ್ಯಾಯಮಂಡಳಿಯು ಅಂತಹ ವೆಚ್ಚಗಳನ್ನು ಪಾಸ್-ಥ್ರೂ ವೆಚ್ಚಗಳೆಂದು ಪರಿಗಣಿಸಿದೆ. ಈ ಎಲ್ಲಾ ವೆಚ್ಚಗಳನ್ನು ಹೊರತುಪಡಿಸಿ ಇತರ ಎಲ್ಲಾ ವೆಚ್ಚಗಳನ್ನು ವೆಚ್ಚದ ಆಧಾರದ ಭಾಗವಾಗಿ ಪರಿಗಣಿಸಲಾಗಿದೆ ಮತ್ತು ಗುರುತಿಸಲಾಗಿದೆ. ಅಂತರ-ಕಂಪನಿ ವಹಿವಾಟುಗಳನ್ನು ಬೆಂಬಲಿಸುವ ದೃಢವಾದ ಬ್ಯಾಕ್‌ಅಪ್ ದಾಖಲಾತಿಗಳ ಪ್ರಾಮುಖ್ಯತೆಯನ್ನು ತೀರ್ಪು ಮತ್ತೊಮ್ಮೆ ಒತ್ತಿ ಹೇಳುತ್ತದೆ" ಎಂದು ನಾರಂಗ್ ಹೇಳಿದರು.

ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ: ಮರು ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.