ETV Bharat / bharat

ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ಗುರುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳ ನಿವಾಸಗಳು ಸೇರಿದಂತೆ ತೆರಿಗೆ ವಂಚನೆ ಪ್ರಕರಣದಲ್ಲಿ 25 ಸ್ಥಳಗಳಲ್ಲಿ ದಾಳಿ ನಡೆಸಿತು.

ಅಹಮದಾಬಾದ್‌ನ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ಐಟಿ ದಾಳಿ

author img

By

Published : Feb 10, 2022, 6:06 PM IST

ಅಹಮದಾಬಾದ್​: ಗುಜರಾತ್‌ನ ಅಹಮದಾಬಾದ್‌ನ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳ ನಿವಾಸಗಳು ಸೇರಿದಂತೆ ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತು.

ಅಧಿಕೃತ ಮೂಲಗಳ ಪ್ರಕಾರ, ಐಟಿ ಅಧಿಕಾರಿಗಳು ಶಿಲ್ಪಾ ಮತ್ತು ಶಿವಾಲಿಕ್ ಬಿಲ್ಡರ್ಸ್ ಗ್ರೂಪ್ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಅಹಮದಾಬಾದ್‌ನ ಒಟ್ಟು 25 ಸ್ಥಳಗಳಲ್ಲಿ ಆದಾಯ ತೆರಿಗೆ ತಂಡ ದಾಳಿ ನಡೆಸಿದೆ.

ಇವುಗಳಲ್ಲಿ ಶಿವಾಲಿಕ್ ಗ್ರೂಪ್‌ನ ನಿರ್ದೇಶಕ ಚಿತ್ರಕ್ ಶಾ, ಶಿಲ್ಪಾ ಗ್ರೂಪ್‌ನ ಸಂಸ್ಥಾಪಕ ಯಶ್ ಬ್ರಹ್ಮಭಟ್, ಶಾರದಾ ಗ್ರೂಪ್ ಆಫ್ ಬ್ರೋಕರ್ ದೀಪಕ್ ನಿಂಬಾರ್ಕ್ ಮತ್ತು ಬ್ರೋಕರ್ ಕೇತನ್ ಶಾ ಅವರ ಕಚೇರಿಗಳ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಓದಿ:ವೀಕ್ಷಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಮಹಾಭಾರತ - ರಾಮಾಯಣ ಧಾರಾವಾಹಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.