ಮಧುರೈ, ತಮಿಳುನಾಡು: ಭಾರತೀಯ ನೌಕಾಪಡೆಯಿಂದ ದಾಳಿಗೊಳಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೀನುಗಾರನನ್ನು ತಮಿಳುನಾಡು ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್ ಖುದ್ದು ಭೇಟಿಯಾದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಟಿ ಸ್ಕ್ಯಾನ್ನಲ್ಲಿ ನಾಲ್ಕು ಗುಂಡುಗಳು ಮೀನುಗಾರ ವೀರವೆಲ್ ದೇಹಕ್ಕೆ ನುಗ್ಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ. ವೈದ್ಯರ ವರದಿಯಂತೆ ಮೀನುಗಾರನ ಹೊಟ್ಟೆ ಮತ್ತು ತೊಡೆಗೆ ಗುಂಡುಗಳು ತಗುಲಿವೆ ಎಂದು ಸಚಿವರು ಹೇಳಿದರು.
ಸಚಿವರು ನೀಡಿರುವ ಮಾಹಿತಿ ಪ್ರಕಾರ ಕಾರೈಕಲ್ ಪ್ರದೇಶದಿಂದ 10 ಮಂದಿ ಮೀನುಗಾರರು ದೋಣಿಯಲ್ಲಿ ತೆರಳಿದ್ದಾರೆ. ಅವರಲ್ಲಿ ಮೂವರು ಕಾರೈಕಲ್‌ನಿಂದ, ಒಬ್ಬರು ನಾಗಪಟ್ಟಣಂನಿಂದ ಮತ್ತು ಆರು ಮಂದಿ ಮೈಲಾಡುತುರೈ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಮನ್ನಾರ್ ಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ಭಾರತೀಯ ನೌಕಾಪಡೆಯ ಸೈನಿಕರು ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದೆ.
ನಮ್ಮ ಮೀನುಗಾರರಿಗೆ ನಮ್ಮದೇ ನೌಕಾಪಡೆ ಗುಂಡಿನ ದಾಳಿ ನಡೆಸಿರುವುದು ಅತ್ಯಂತ ದುಃಖಕರ ಘಟನೆ. ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡು ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಸತತ ಒತ್ತಾಯದ ಮೂಲಕ ತಡೆದಿದ್ದಾರೆ. ಆದರೆ, ಭಾರತೀಯ ನೌಕಾಪಡೆಯ ಈ ಘಟನೆ ನೋವು ತಂದಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಸದ್ಯ ತನಿಖೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಓದಿ: ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ತಾತ್ಕಾಲಿಕ ಶೆಡ್ ತೆರವು, ಸ್ಥಳೀಯರ ಆಕ್ರೋಶ