ETV Bharat / bharat

ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಹಾಯ ಮಾಡಲಿರುವ ಐಟಿ ನೌಕರರ ಸಂಘಟನೆ - ವಿದ್ಯಾರ್ಥಿಗಳಿಗೆ ತಂತ್ರಜ್ಞಾನದಲ್ಲಿ ತರಬೇತಿ

ಕೇರಳದ ಐಟಿ ಉದ್ಯೋಗಿಗಳ ಕಲ್ಯಾಣ ಸಂಸ್ಥೆಯಾದ ಪ್ರತಿಧ್ವನಿ, ಕಂಪನಿಗಳಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಕೌಶಲ್ಯದ ಬಗ್ಗೆ ತರಬೇತಿ ನೀಡುತ್ತದೆ ಮತ್ತು ಉತ್ತಮ ಉದ್ಯೋಗ ಹುಡುಕುವ ಹೊಸ ಅವಕಾಶ ನೀಡುತ್ತದೆ. ಅರ್ಜಿದಾರರ ಪ್ರೊಫೈಲ್‌ಗಳನ್ನು ಸಂಸ್ಥೆ ಕಂಪನಿಗಳಿಗೆ ಹಂಚಿಕೊಳ್ಳಲಿದೆ.

it-employees-organisation-in-kerala-to-help-freshers-get-jobs

author img

By

Published : Jul 27, 2021, 1:46 PM IST

ಕೊಚ್ಚಿ (ಕೇರಳ): ಕೇರಳದ ಐಟಿ ಉದ್ಯೋಗಿಗಳ ಕಲ್ಯಾಣ ಸಂಸ್ಥೆಯಾದ ಪ್ರತಿಧ್ವನಿ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನದಲ್ಲಿ ತರಬೇತಿ ಹೆಚ್ಚಿಸಲು ಮತ್ತು ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯ ನೀಡಲು ಯೋಜನೆ ರೂಪಿಸಿದೆ. "ಈ ಯೋಜನೆಯು ಕಂಪನಿಗಳಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಕೌಶಲ್ಯದ ಬಗ್ಗೆ ತರಬೇತಿ ನೀಡುತ್ತದೆ ಮತ್ತು ಉತ್ತಮ ಉದ್ಯೋಗವನ್ನು ಹುಡುಕುವ ಹೊಸ ಅವಕಾಶ ನೀಡುತ್ತದೆ.

ಅರ್ಜಿದಾರರ ಪ್ರೊಫೈಲ್‌ಗಳನ್ನು ನಾವು ಕಂಪನಿಗಳಿಗೆ ಹಂಚಿಕೊಳ್ಳುತ್ತೇವೆ"ಎಂದು ಪ್ರತಿಧ್ವನಿಯ ತಿರುವನಂತಪುರಂನ ಟೆಕ್ನೋಪಾರ್ಕ್ ಅಧ್ಯಕ್ಷ ರನೀಶ್ ಎಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

www.jobs.prathidhwani.org ಪೋರ್ಟಲ್‌ನಲ್ಲಿ ನೋಂದಾಯಿಸುವವರು, ಪ್ರತಿ ತಿಂಗಳು ಪ್ರತಿಧ್ವನಿ ಆಯೋಜಿಸುವ ವಿವಿಧ ತಂತ್ರಜ್ಞಾನ ಕಾರ್ಯಾಗಾರಗಳ ಅಧಿಸೂಚನೆಗಳನ್ನು ಪಡೆಯುತ್ತಾರೆ. ಡೊಮೇನ್ ತಜ್ಞರ ನೇತೃತ್ವದ ಈ ತರಬೇತಿ ಅವಧಿಗಳನ್ನು ಉಚಿತವಾಗಿ ಆಯೋಜಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಇಲ್ಲಿಯವರೆಗೆ, ಪ್ರತಿ ತಂತ್ರಜ್ಞಾನದಲ್ಲಿ 90 ತರಬೇತಿ ಅವಧಿಗಳನ್ನು ಪ್ರತಿಧ್ವನಿ ನಡೆಸಿದೆ. ಆನ್‌ಲೈನ್‌ನಲ್ಲಿ ನಡೆಸಲಾಗುವ ಈ ತರಬೇತಿಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದು ರನೀಶ್ ಹೇಳಿದ್ದಾರೆ.

ಇಲ್ಲಿಯವರೆಗೆ 35,600 ಜನರು ಪೋರ್ಟಲ್ ಮೂಲಕ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕಳೆದ ವರ್ಷದಲ್ಲಿ 14,360 ಉದ್ಯೋಗಗಳನ್ನು ಪಟ್ಟಿ ಮಾಡಲಾಗಿದೆ. ಉದ್ಯೋಗಾಕಾಂಕ್ಷಿಗಳ 9,630 ನೋಂದಾಯಿತ ಪ್ರೊಫೈಲ್‌ಗಳನ್ನು ಪೋರ್ಟಲ್ ಹೊಂದಿದೆ.

ಪ್ರಸ್ತುತ, ಟೆಕ್ನೊಪಾರ್ಕ್, ತಿರುವನಂತಪುರಂ, ಇನ್ಫೋಪಾರ್ಕ್, ಕೊಚ್ಚಿ, ಸೈಬರ್ ಪಾರ್ಕ್ ಹಾಗೂ ಕೋಯಿಕ್ಕೋಡ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಸಂಸ್ಥೆಗಳು ಸೇರಿದಂತೆ ರಾಜ್ಯದ 410 ಕಂಪನಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ ಮತ್ತು ಪೋರ್ಟಲ್ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ.

ಈ ಪೋರ್ಟಲ್‌ನಲ್ಲಿನ ಸೇವೆ ಐಟಿ ಉದ್ಯೋಗಾಕಾಂಕ್ಷಿಗಳು ಮತ್ತು ಐಟಿ ಕಂಪನಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ ಎಂದು ಸಂಸ್ಥೆ ಹೇಳಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.