ETV Bharat / bharat

ಊಟಿಯಲ್ಲಿ ಕಂದಕಕ್ಕೆ ಉರುಳಿದ ಐಟಿ ಉದ್ಯೋಗಿಗಳ ಪ್ರವಾಸದ ವಾಹನ, ಮಹಿಳೆ ಸಾವು - Accident in Ooty

ಐಟಿ ಉದ್ಯೋಗಿಗಳು ಪ್ರವಾಸ ಮುಗಿಸಿ ಶನಿವಾರ ರಾತ್ರಿ ನೀಲಗಿರಿ ಜಿಲ್ಲೆಯ ಕಲ್ಹಟ್ಟಿ ಬಳಿಯ ಖಾಸಗಿ ಹೋಟೆಲ್​ನಲ್ಲಿ ತಂಗಲು ತೆರಳಿದ್ದಾರೆ. ಈ ಸಂದರ್ಭದಲ್ಲಿ 15ನೇ ಹೇರ್‌ಪಿನ್-ಬೆಂಡ್ ಪ್ರದೇಶವನ್ನು ತಲುಪಿದಾಗ ವಾಹನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.

IT employees' excursion ends in tragic accident
ಅಪಘಾತದಲ್ಲಿ ಕೊನೆಯಾದ 18 ಮಂದಿ ಐಟಿ ಉದ್ಯೋಗಿಗಳ ಪ್ರವಾಸ
author img

By

Published : Jul 3, 2022, 11:28 AM IST

ನೀಲಗಿರಿ (ತಮಿಳುನಾಡು): ಚೆನ್ನೈನ ಐಟಿ ಕಂಪೆನಿಯೊಂದರ 18 ಉದ್ಯೋಗಿಗಳು ಊಟಿಗೆ ಪ್ರವಾಸ ಹೋಗುತ್ತಿದ್ದ ಟೆಂಪೋ ಟ್ರಾವೆಲ್ಲರ್​ ನಿಯಂತ್ರಣ ಕಳೆದುಕೊಂಡು 50 ಅಡಿ ಆಳದ ಕಂದಕಕ್ಕೆ ಉರುಳಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 17 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಇವರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಹೆಚ್​ಸಿಎಲ್​ ಐಟಿ ಕಂಪೆನಿಯ ಉದ್ಯೋಗಿಗಳು ಎಂದು ತಿಳಿದು ಬಂದಿದೆ. 14 ಪುರುಷರು ಹಾಗೂ 4 ಮಹಿಳೆಯರು ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಶನಿವಾರ ರಾತ್ರಿ ನೀಲಗಿರಿ ಜಿಲ್ಲೆಯ ಕಲ್ಹಟ್ಟಿ ಬಳಿಯ ಖಾಸಗಿ ಹೋಟೆಲ್​ನಲ್ಲಿ ತಂಗಲು ತೆರಳಿದ್ದಾರೆ. ಈ ಸಂದರ್ಭದಲ್ಲಿ 15ನೇ ಹೇರ್‌ಪಿನ್-ಬೆಂಡ್ ಪ್ರದೇಶ ತಲುಪಿದಾಗ ವಾಹನ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ.

ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲೇ ಮೃತಪಟ್ಟ ಮಹಿಳೆಯನ್ನು ಮುತ್ತುಮರಿ (24) ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮತ್ತು ರಕ್ಷಣಾ ತಂಡ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಊಟಿ ಸರ್ಕಾರಿ ಆಸ್ಪತ್ರೆ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಲಾರಿ ಹರಿದು ವೃದ್ಧೆ ಸ್ಥಳದಲ್ಲೇ ಸಾವು, ಚಾಲಕ ಪೊಲೀಸ್ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.