ಮೆಡ್ಚಲ(ತೆಲಂಗಾಣ): ಎಂಜಿನಿಯರಿಂಗ್ ಮುಗಿಸಿ, ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿಯೋರ್ವಳು ಗಾಂಜಾ ಮಾರಾಟಕ್ಕಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದ ಮೆಡ್ಚಲನಲ್ಲಿ ನಡೆದಿದೆ. ಒಳ್ಳೆಯ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿಯೋರ್ವಳು ಎಲ್ಲರಿಗಿಂತಲೂ ಭಿನ್ನವಾಗಿರಬೇಕೆಂದು ಈ ಕೆಲಸಕ್ಕೆ ಕೈ ಹಾಕಿ, ಇದೀಗ ಪೊಲೀಸ್ ಕಂಬಿ ಎಣಿಸುತ್ತಿದ್ದಾಳೆ.
ಇದನ್ನೂ ಓದಿ: 'ಶ್ರೀ ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರ': ಕನ್ನಡದಲ್ಲೇ ಟ್ವೀಟ್ ಮಾಡಿ ಮೋದಿ ನಮನ
ಮೆಡ್ಚಲನ ಕೊಂಪಳ್ಳಿಯಲ್ಲಿ ವಾಸವಾಗಿದ್ದ ಮಾನ್ಸಿ, ಯುವಕರು ಮತ್ತು ಐಟಿ ವೃತ್ತಿಪರರ ಗಾಂಜಾ ಬೇಡಿಕೆ ಈಡೇರಿಸುವ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಿದ್ದಾಳೆ. ಮಲ್ಕಾಜ್‌ಗಿರಿ, ನಾಚರಂ, ಮೆಡ್ಚಲ್, ಪಂಜಗುಟ್ಟ, ಬಂಜಾರಾ ಹಿಲ್ಸ್‌ನಲ್ಲಿ ಐಟಿ ಉದ್ಯೋಗಿಗಳಿಗೆ ಗಂಡ ಮದನ್ ಜೊತೆ ಸೇರಿ ಗಾಂಜಾ ಮಾರಾಟ ಮಾಡ್ತಿದ್ದಳು.
ಖಚಿತ ಮಾಹಿತಿ, ಪಡೆದುಕೊಂಡು ಬಲೆ ಬೀಸಿರುವ ಪೊಲೀಸರು ಇದೀಗ ದಂಪತಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ 1.2 ಕಿಲೋ ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭೋಪಾಲ್ನಲ್ಲಿ ಇಂಜಿನಿಯರಿಂಗ್ ಮುಗಿಸಿ, ಹೈದರಾಬಾದ್ನಲ್ಲಿ ಕೆಲಸ ಮಾಡ್ತಿದ್ದ ಮಾನ್ಸಿ ಮೂರು ವರ್ಷಗಳಿಂದ ಈ ಕೆಲಸದಲ್ಲಿ ಭಾಗಿಯಾಗಿದ್ದಾಳೆಂದು ತಿಳಿದು ಬಂದಿದೆ.