ETV Bharat / bharat

ಪುರುಷ ಮತ್ತು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ - ನವದೆಹಲಿ

ಪುರುಷರ ಫೈನಲ್‌ನಲ್ಲಿ ವಿಯೆಟ್ನಾಂ ಅನ್ನು ದಿನ್ಹ್ ತನ್ ನ್ಯುಯೆನ್, ಕ್ವಾಕ್ ಕ್ಯುಂಗ್ ಟ್ರಾನ್ ಮತ್ತು ಕ್ಸುವಾನ್ ಚುಯೆನ್ ಫನ್ ಪ್ರತಿನಿಧಿಸಿದ್ದರು. ಹಾಗೆ ಭಾರತ ಒಟ್ಟು 579 ಅಂಕಗಳೊಂದಿಗೆ ಚೌಧರಿ ಮತ್ತು ಕೋ ಅರ್ಹತಾ ಭಾಗ ಎರಡರಲ್ಲಿ ಮುನ್ನಡೆ ಸಾಧಿಸಿದರೆ, ವಿಯೆಟ್ನಾ 565 ಅಂಕಗಳನ್ನು ಗಳಿಸಿದೆ. ಮೊದಲ ಅರ್ಹತೆಯಲ್ಲಿ ಭಾರತೀಯ ಪುರುಷರು ಒಟ್ಟು 1750 ಅಂಕ ಗಳಿಸಿದರೆ, ವಿಯೆಟ್ನಾಂ 1708 ಅಂಕ ಗಳಿಸಿತು.

ಭಾರತ ಪುರುಷರ ಮತ್ತು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ತಂಡಕ್ಕೆ  ಚಿನ್ನದ ಪದಕ
issf-wc-india-win-both-mens-and-womens-10m-air-pistol-team-gold-medals
author img

By

Published : Mar 21, 2021, 4:59 PM IST

ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ನ ಮೂರನೇ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ತಂಡವು ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.

ಮಹಿಳಾ ತಂಡದಲ್ಲಿ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಯಶಸ್ವಿನಿ ಸಿಂಗ್ ದೇಸ್ವಾಲ್, ಮನು ಭೇಕರ್ ಮತ್ತು ಶ್ರೀ ನಿವೇತಾ ಅವರ ತಂಡ ಪ್ರಥಮ ಬಹುಮಾನ ಪಡೆದಿದೆ. ಹಾಗೆ ಯುವ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಮತ್ತು ಶಹಜಾರ್ ರಿಜ್ವಿ ಪುರುಷರ ವಿಭಾಗದಲ್ಲಿ ವಿಯೆಟ್ನಾಂ ಅನ್ನು 17-11ರಿಂದ ಸೋಲಿಸಿದ್ದಾರೆ.

ಪೋಲೆಂಡ್‌ನ ಜುಲಿಟಾ ಬೊರೆಕ್, ಜೊವಾನ್ನಾ ಐವೊನಾ ವಾವರ್ಜೊನೊವ್ಸ್ಕಾ ಮತ್ತು ಅಗ್ನಿಸ್ಕಾ ಕೋರೆಜ್ವೊ ಅವರಿಗಿಂತ ಭಾರತದ ಮಹಿಳಾ ತಂಡ ಚಿನ್ನದ ಪದಕ ಸುತ್ತಿನಲ್ಲಿ 16 ಗುಂಡು ಹಾರಿಸಿದರು. 576 ಅಂಕಗಳೊಂದಿಗೆ ತವರು ತಂಡ ಎರಡನೇ ಅರ್ಹತೆಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಪೋಲೆಂಡ್‌ ಮಹಿಳೆಯರು 567 ಅಂಕಗಳನ್ನು ಗಳಿಸಿದರು.

ಮೊದಲ ಸುತ್ತಿನ ಆರು ಸರಣಿಗಳಲ್ಲಿ 290, 287, 288, 287, 293 ಮತ್ತು 287 ಸ್ಕೋರ್‌ಗಳನ್ನು ಪಡೆದ ಭಾರತೀಯರು 1731 ಅಂಕವನ್ನು ಪಡೆದರು. ಹಾಗೆಯೇ ಪೋಲೆಂಡ್‌ನ ಸ್ಕೋರ್‌ಗಳ ಅನುಕ್ರಮವು ಒಟ್ಟು 1701 ಆಗಿದ್ದು, ಕ್ರಮವಾಗಿ 286, 283, 286, 286, 286 ಮತ್ತು 287 ಅಂಕ ಪಡೆದರು.

ಪುರುಷರ ಫೈನಲ್‌ನಲ್ಲಿ ವಿಯೆಟ್ನಾಂ ಅನ್ನು ದಿನ್ಹ್ ತನ್ ನ್ಯುಯೆನ್, ಕ್ವಾಕ್ ಕ್ಯುಂಗ್ ಟ್ರಾನ್ ಮತ್ತು ಕ್ಸುವಾನ್ ಚುಯೆನ್ ಫನ್ ಪ್ರತಿನಿಧಿಸಿದ್ದರು. ಹಾಗೆ ಭಾರತ ಒಟ್ಟು 579 ಅಂಕಗಳೊಂದಿಗೆ ಚೌಧರಿ ಮತ್ತು ಕೋ ಅರ್ಹತಾ ಭಾಗ ಎರಡರಲ್ಲಿ ಮುನ್ನಡೆ ಸಾಧಿಸಿದರೆ, ವಿಯೆಟ್ನಾ 565 ಅಂಕಗಳನ್ನು ಗಳಿಸಿದೆ. ಮೊದಲ ಅರ್ಹತೆಯಲ್ಲಿ ಭಾರತೀಯ ಪುರುಷರು ಒಟ್ಟು 1750 ಅಂಕ ಗಳಿಸಿದರೆ, ವಿಯೆಟ್ನಾಂ 1708 ಅಂಕ ಗಳಿಸಿತು.

ನಿನ್ನೆ ನಡೆದ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ 23 ವರ್ಷದ ದೇಸ್ವಾಲ್ ವೈಯಕ್ತಿಕ ಚಿನ್ನದ ಪದಕವನ್ನು ಗೆದಿದ್ದಾರೆ. ಪುರುಷರ ವೈಯಕ್ತಿಕ 10 ಮೀ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಚೌಧರಿ ಮತ್ತು ವರ್ಮಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಕೊರಿಯಾ, ಸಿಂಗಪುರ್, ಯುಎಸ್ಎ, ಯುನೈಟೆಡ್ ಕಿಂಡಮ್, ಇರಾನ್, ಉಕ್ರೇನ್, ಫ್ರಾನ್ಸ್, ಹಂಗೇರಿ, ಇಟಲಿ, ಥೈಲ್ಯಾಂಡ್ ಮತ್ತು ಟರ್ಕಿ ಸೇರಿದಂತೆ 53 ದೇಶಗಳ ಒಟ್ಟು 294 ಶೂಟರ್‌ಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.