ಶ್ರೀಹರಿಕೋಟಾ (ಆಂಧ್ರಪ್ರದೇಶ): 2025ರಲ್ಲಿ ರಾಕೆಟ್ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಇಸ್ರೋದ ಯೋಜನೆಯ ಭಾಗವಾಗಿ ಇಂದು ಬೆಳಗ್ಗೆ 7.30 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ TV-D1 ಹೆಸರಿನ ಮಾನವರಹಿತ ಪರೀಕ್ಷಾರ್ಥ ವಾಹಕ ಉಡಾವಣೆಯಾಗಲಿದೆ. ಈ ಮೂಲಕ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು ಇಸ್ರೋ ನಡೆಸಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಪರಿಶೋಧನಾ ಪ್ರಯತ್ನಗಳಲ್ಲಿ ಇದು ಕೂಡ ಒಂದಾಗಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಮಗ್ರ ಪರೀಕ್ಷೆಗಳ ಸರಣಿಯನ್ನು ಈ ಮಿಷನ್ ಒಳಗೊಂಡಿದೆ. 2022ರಲ್ಲಿ ಗಗನಯಾನ ಮಿಷನ್ ಉಡಾವಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಮುಂದೂಡಲಾಗಿತ್ತು. ಇದೀಗಾ ಗಗನಯಾನ ಮಿಷನ್‌ನ ಮೊದಲ ಪರೀಕ್ಷೆ ಶನಿವಾರ ಬೆಳಗ್ಗೆ 7 ಗಂಟೆಯಿಂದ 9:00 ಗಂಟೆಯವರೆಗೆ ಶ್ರೀಹರಿಕೋಟಾದಲ್ಲಿ ನಡೆಯಲಿದೆ. ಮುಂದಿನ ಪರೀಕ್ಷೆ ಡಿಸೆಂಬರ್ 2023 ಅಥವಾ ಜನವರಿ 2024ಕ್ಕೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.
-
Mission Gaganyaan:
— ISRO (@isro) October 19, 2023 " class="align-text-top noRightClick twitterSection" data="
TV-D1 Test Flight
The test flight can be watched LIVE
from 0730 Hrs. IST
on October 21, 2023
at https://t.co/MX54CwO4IUhttps://t.co/zugXQAYy1y
YouTube: https://t.co/75VtErpm0H
DD National TV@DDNational#Gaganyaan pic.twitter.com/ktomWs2TvN
">Mission Gaganyaan:
— ISRO (@isro) October 19, 2023
TV-D1 Test Flight
The test flight can be watched LIVE
from 0730 Hrs. IST
on October 21, 2023
at https://t.co/MX54CwO4IUhttps://t.co/zugXQAYy1y
YouTube: https://t.co/75VtErpm0H
DD National TV@DDNational#Gaganyaan pic.twitter.com/ktomWs2TvNMission Gaganyaan:
— ISRO (@isro) October 19, 2023
TV-D1 Test Flight
The test flight can be watched LIVE
from 0730 Hrs. IST
on October 21, 2023
at https://t.co/MX54CwO4IUhttps://t.co/zugXQAYy1y
YouTube: https://t.co/75VtErpm0H
DD National TV@DDNational#Gaganyaan pic.twitter.com/ktomWs2TvN
ಗಗನಯಾನಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಪರೀಕ್ಷಾ ವಾಹಕಗಳನ್ನು ಸಿದ್ಧಪಡಿಸಲಾಗಿದೆ. ಈ ಕಾರ್ಯಾಚರಣೆಯು ಸರಿಸುಮಾರು 20 ಮಹತ್ವದ ಪರೀಕ್ಷೆಗಳನ್ನು ಒಳಗೊಂಡಿರಲಿದೆ. ಅವುಗಳಲ್ಲಿ ಮೂರು ಮಾನವ-ರೇಟೆಡ್ ಲಾಂಚ್ ವೆಹಿಕಲ್ ಮಾರ್ಕ್-3 (HLVM3) ಸಿಬ್ಬಂದಿ ರಹಿತ ಕಾರ್ಯಾಚರಣೆಗಳಿಗೆ ಮೀಸಲಾಗಿವೆ. ಗಗನಯಾನ ಮಿಷನ್ ಪ್ರಾಯೋಗಿಕ ಹಂತದಲ್ಲಿ ಎರಡು ಮಾನವರಹಿತ ಪರೀಕ್ಷಾ ಹಾರಾಟಗಳನ್ನು ನಡೆಸಲಿದೆ. ಮೊದಲ ಹಂತದಲ್ಲಿ ಅಂದರೆ ಇಂದು ಸಿಬ್ಬಂದಿ ಮಾಡ್ಯೂಲ್ ಪರೀಕ್ಷೆ ನಡೆದರೆ, ಎರಡನೇ ಹಂತದಲ್ಲಿ ರಾಕೆಟ್ನ ಎಲ್ಲಾ ಸಿಸ್ಟಮ್‌ಗಳನ್ನು ಪರೀಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಇಸ್ರೋ ಹೇಳಿಕೊಂಡಿದೆ.
ಮಿಷನ್‌ನ ಪ್ರಾಥಮಿಕ ಉದ್ದೇಶಗಳು: ಈ ಮಿಷನ್ ಮುಖ್ಯ ಉದ್ದೇಶವೆಂದರೆ ಗಗನಯಾತ್ರಿಗಳ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಜತೆಗೆ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಬಗ್ಗೆ ಗಮನಿಸುವುದು. ಗಗನಯಾತ್ರಿಗಳಿಗೆ ವಾಸಯೋಗ್ಯ ವಾತಾವರಣವನ್ನು ಒದಗಿಸುವ ಕ್ರ್ಯೂ ಮಾಡ್ಯೂಲ್ ಅತ್ಯಂತ ಎತ್ತರದಲ್ಲಿ ಪರೀಕ್ಷಿಸುವುದು. ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯಾಣದ ಸಮಯದಲ್ಲಿ ಮತ್ತು ಭೂಮಿಗೆ ಮರು ಪ್ರವೇಶಿಸುವಾಗ ಎದುರಿಸುವ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಇಸ್ರೋ ತಿಳಿಸಿದೆ.
ಇಂದು ಪರೀಕ್ಷಿಸಲಿರುವ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಗಗನಯಾತ್ರಿಗಳ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಿಸ್ಟಮ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು ವಿಭಿನ್ನ ಕಾರ್ಯಗಳನ್ನು ಹೊಂದಿರುವ ಘನ ಮೋಟಾರ್‌ಗಳನ್ನು ಇದು ಒಳಗೊಂಡಿದೆ. ತುರ್ತು ಸಂದರ್ಭಗಳಲ್ಲಿ ಗಗನಯಾತ್ರಿಗಳು ತ್ವರಿತವಾಗಿ ಪಾರಾಗಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಮಿಷನ್ ಅಡಿಯಲ್ಲಿ, ಇಸ್ರೋ ಮೂರು ದಿನಗಳ ಕಾಲ ಭೂಮಿಯಿಂದ 400 ಕಿಮೀ ಕಕ್ಷೆಗೆ ಮಾನವನನ್ನು ಕಳುಹಿಸಿ ಬಳಿಕ ಭೂಮಿಗೆ ಸುರಕ್ಷಿತವಾಗಿ ಕರೆತರುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Gaganyaan: ನಾಳೆ ಗಗನಯಾನದ ಮೊದಲ ಪರೀಕ್ಷಾರ್ಥ ಪ್ರಯೋಗ.. 7.30ಕ್ಕೆ ನೇರಪ್ರಸಾರ