ಶ್ರೀಹರಿಕೋಟಾ (ಆಂಧ್ರಪ್ರದೇಶ): ಬ್ರೆಜಿಲ್ನ ಅಮೆಜಾನಿಯಾ-1 ಉಪಗ್ರಹವನ್ನು ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇದೇ ಮೊದಲ ಬಾರಿಗೆ ಶ್ರೀಹರಿಕೋಟಾದಿಂದ ಬ್ರೆಜಿಲ್ ಉಪಗ್ರಹವೊಂದನ್ನು ಇಸ್ರೋ ಉಡಾವಣೆ ಮಾಡಿದೆ. ಅಂದರೆ ಬ್ರೆಜಿಲ್ನ ಅಮೆಜಾನಿಯಾ-1 ಉಪಗ್ರಹವನ್ನು ಹೊತ್ತು ಇಸ್ರೋವಿನ ಪಿಎಸ್‌ಎಲ್‌ವಿ-ಸಿ 51 ರಾಕೆಟ್ ಬಾಹ್ಯಾಕಾಶಕ್ಕೆ ನೆಗೆದಿದೆ.
ಇದನ್ನೂ ಓದಿ: ಇಂದು ರಾಷ್ಟ್ರೀಯ ವಿಜ್ಞಾನ ದಿನ: ಸರ್ ಸಿ.ವಿ. ರಾಮನ್ ಆವಿಷ್ಕಾರದ ಸವಿ ನೆನಪು
PSLV-C51 - ಇದು ಇಸ್ರೋ ಪಿಎಸ್‌ಎಲ್‌ವಿ ರಾಕೆಟ್ನ 53ನೇ ಮಿಷನ್ ಆಗಿದ್ದು, ಅಮೆಜಾನಿಯಾ-1 ಉಪಗ್ರಹದ ಜೊತೆ ಪಿಎಸ್‌ಎಲ್‌ವಿ-ಸಿ 51 ರಾಕೆಟ್ ಇತರೆ 18 ಸಣ್ಣ ಸ್ಯಾಟಲೈಟ್ಗಳನ್ನು ಕಕ್ಷೆಗೆ ಸೇರಿಸಲಿದೆ.