ತಿರುವನಂತಪುರಂ : ಇಸ್ರೋ ಬೇಹುಗಾರಿಗೆ ಪ್ರಕರಣದಲ್ಲಿ ಅಧಿಕಾರಿಗಳ ಪಿತೂರಿ ಬಗ್ಗೆ ತನಿಖೆ ನಡೆಸಲು ರಚಿಸಲಾದ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಡಿ ಕೆ ಜೇನ್ ನೇತೃತ್ವದ ಸಮಿತಿಯು ತಿರುವನಂತಪುರಂನಲ್ಲಿ ತನಿಖೆ ಮುಂದುವರೆಸಿದೆ.
ಸೋಮವಾರ ಸಭೆ ನಡೆಸಿರುವ ಸಮಿತಿಯು, ಸಾಕ್ಷಿ ಸಂಗ್ರಹ, ರೆಕಾರ್ಡಿಂಗ್ ಹೇಳಿಕೆಗಳನ್ನು ಕಲೆ ಹಾಕುವ ಕಾರ್ಯ ಮಾಡುತ್ತಿದೆ. ಈ ಬಗ್ಗೆ ಡಿಸೆಂಬರ್ 15ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರು ತಮ್ಮ ಹೇಳಿಕೆ ನೀಡಲು ಸಮಿತಿಯ ಮುಂದೆ ಹಾಜರಾಗಿದ್ದರು.
ಇದೇ ವೇಳೆ ಇಸ್ರೋ ಬೇಹುಗಾರಿಕೆ ಪ್ರಕರಣದ ತನಿಖಾಧಿಕಾರಿಗಳಾದ ಸಿ ಬಿ ಮ್ಯಾಥ್ಯೂಸ್, ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಕೆ ಕೆ ಜೋಶುವಾ ಮತ್ತು ಎಸ್ ವಿಜಯನ್ ಅವರ ಹೇಳಿಕೆಗಳನ್ನು ಸಮಿತಿ ದಾಖಲಿಸಿಕೊಳ್ಳುತ್ತಿದೆ. ಸಮಿತಿಯ ಸಭೆಯು ತಿರುವನಂತಪುರಂನ ಕೇರಳ ಸಚಿವಾಲಯದ ಅನೆಕ್ಸ್‌ನ ಕಾನ್ಫ್‌ರೆನ್ಸ್ ಹಾಲ್‌ನಲ್ಲಿ ನಡೆಯುತ್ತಿದೆ.