ನವದೆಹಲಿ: ಐಸಿಸ್ ಉಗ್ರರು ಅಮಾಯಕರನ್ನು ಅಪಹರಿಸಿ ಕತ್ತು ಸೀಳಿ ಕೊಲೆ ಮಾಡುವ ಕ್ರೌರ್ಯದ ವಿಡಿಯೋಗಳು ಜಗತ್ತನ್ನೇ ತಲ್ಲಣಗೊಳಿಸಿದ್ದವು. ಇತ್ತೀಚೆಗೆ ಲೈಂಗಿಕ ಕಾರ್ಯಕರ್ತೆಯನ್ನು ಎಳೆದೊಯ್ದು ಅವರ ಒಂದು ವರ್ಷದ ಮಗುವನ್ನು ಸಾಯಿಸಿ ಅದರ ಮಾಂಸವನ್ನು ಅವರಿಗೇ ಉಣಬಡಿಸಿದೆ ಎಂಬ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಇನ್ನೊಂದೆಡೆ 10 ವರ್ಷದ ಬಾಲಕಿಯನ್ನು ಕುಟುಂಬಸ್ಥರ ಮುಂದೆಯೇ ಅತ್ಯಾಚಾರ ಮಾಡಿ ಕೊಲೆ ಮಾಡಿ ವಿಕೃತಿ ಮೆರೆಯಲಾಗಿದೆ ಎಂದು ವರದಿಯಾಗಿದೆ. ಐಸಿಸ್ ವಶದಲ್ಲಿದ್ದ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಮೂರು ದಿನ ಅನ್ನ, ನೀರಿಲ್ಲದೇ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು.
ಅಲ್ಲದೇ ಒಂದು ವರ್ಷದ ಮಗುವನ್ನು ಆ ತಾಯಿಯಿಂದ ಕಿತ್ತುಕೊಳ್ಳಲಾಗಿತ್ತು. ಮೂರು ದಿನದ ಬಳಿಕ ಹಸಿವಿನಿಂದ ಒದ್ದಾಡಿದ್ದ ಮಹಿಳೆಗೆ ಒಂದು ಪ್ಲೇಟ್ ಅನ್ನ ಮತ್ತು ಮಾಂಸ ನೀಡಲಾಗಿತ್ತು. ಅದನ್ನು ಸೇವಿಸಿದ ಬಳಿಕ "ನೀನು ತಿಂದ ಮಾಂಸ ನಿನ್ನ ಮಗನ ದೇಹದ್ದೇ" ಎಂದು ಆ ತಾಯಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕ್ರೂರ ಘಟನೆಯನ್ನು ಇರಾಕ್ ಸಂಸದ ವಿಯಾನ್ ದಾಖಿಲ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ. ಇದನ್ನು ಸಾಮಾಜಿಕ ಕಾರ್ಯಕರ್ತ ಝಿದನ್ ಇಸ್ಮಾಯಿಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.
-
A sex slave captured by ISIS was forced to eat her 1-year-old son with a side of rice, according to a gut-wrenching report.
— Zidan Ismail (@zidan_yezidi) May 16, 2022 " class="align-text-top noRightClick twitterSection" data="
The unnamed Yezidi woman — who was starved for three days in an Iraq basement unwittingly ate the boy after barbaric guards cooked and served him to her1/2 pic.twitter.com/AEbN03TOnQ
">A sex slave captured by ISIS was forced to eat her 1-year-old son with a side of rice, according to a gut-wrenching report.
— Zidan Ismail (@zidan_yezidi) May 16, 2022
The unnamed Yezidi woman — who was starved for three days in an Iraq basement unwittingly ate the boy after barbaric guards cooked and served him to her1/2 pic.twitter.com/AEbN03TOnQA sex slave captured by ISIS was forced to eat her 1-year-old son with a side of rice, according to a gut-wrenching report.
— Zidan Ismail (@zidan_yezidi) May 16, 2022
The unnamed Yezidi woman — who was starved for three days in an Iraq basement unwittingly ate the boy after barbaric guards cooked and served him to her1/2 pic.twitter.com/AEbN03TOnQ
10ರ ಬಾಲಕಿ ರೇಪ್, ಕೊಲೆ: ಮತ್ತೊಂದು ಘಟನೆಯಲ್ಲಿ, ಐಸಿಸ್ ತನ್ನ ಆರು ಸಹೋದರಿಯರನ್ನು ಅಪಹರಿಸಿದೆ ಎಂದು ಬಾಲಕಿಯೊಬ್ಬಳು ಹೇಳಿದ್ದಾಳೆ. ಕೇವಲ 10 ವರ್ಷ ವಯಸ್ಸಿನ ತನ್ನ ಕಿರಿಯ ಸಹೋದರಿಯನ್ನು ತನ್ನ ತಂದೆ ಮತ್ತು ಸಹೋದರಿಯರ ಮುಂದೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು ಎಂದು ಆ ಮಹಿಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್) ಇದೊಂದು ಸುನ್ನಿ ಪಂಗಡಕ್ಕೆ ಸೇರಿದ ಉಗ್ರಗಾಮಿ ಸಂಘಟನೆಯಾಗಿದ್ದು, ಅವರು ಎಲ್ಲರ ಮೇಲೆ ತಮ್ಮ ಧಾರ್ಮಿಕ ಅಧಿಕಾರವನ್ನು ಚಲಾಯಿಸುವ ಹಪಾಹಪಿ ಹೊಂದಿದ್ದಾರೆ. ಮೊದಮೊದಲು ಹೆಚ್ಚಾಗಿ ಹಬ್ಬಿಕೊಂಡಿದ್ದ ಇವರ ಸಂತತಿ ಕ್ರಮೇಣ ಕಡಿಮೆಯಾದರೂ ಇರಾಕ್ ಮತ್ತು ಮಧ್ಯಪ್ರಾಚ್ಯದ ಕೆಲವು ಪ್ರದೇಶಗಳಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಆ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸಿದ್ದಾರೆ.
ಓದಿ: ಛತ್ತೀಸ್ಗಢದಲ್ಲಿ ನಕ್ಸಲ್ ದಮನ ಕಾರ್ಯಾಚರಣೆ.. ಇಬ್ಬರು ಮಾವೋವಾದಿಗಳ ಎನ್ಕೌಂಟರ್