ETV Bharat / bharat

ಮರದ ಮೇಲಿಂದ ಕಾಲು ಜಾರಿ ಬಿದ್ದ ಬಾಲಕನ ದೇಹ ಹೊಕ್ಕ 3 ಕಬ್ಬಿಣದ ರಾಡು

ಧನ್ಬಾದ್​ನಲ್ಲಿ ಸೀಬೆ ಮರವೇರಿದ್ದ ಬಾಲಕ ಕಾಲು ಜಾರಿ ಬಿದ್ದಿದ್ದು, ಕೆಳಗಿದ್ದ ಮೂರು ಕಬ್ಬಿಣದ ರಾಡುಗಳು ಆತನ ದೇಹ ಹೊಕ್ಕಿವೆ.

author img

By

Published : Oct 22, 2021, 4:54 PM IST

Updated : Oct 22, 2021, 5:20 PM IST

ಕಬ್ಬಿಣದ ರಾಡುಗಳು
ಕಬ್ಬಿಣದ ರಾಡುಗಳು

ಧನ್ಬಾದ್(ಜಾರ್ಖಂಡ್): ಸೀಬೆ ಮರವೇರಿದ್ದ ಬಾಲಕ ಕಾಲು ಜಾರಿ ಬಿದ್ದಿದ್ದು, ಕೆಳಗಿದ್ದ ಮೂರು ಕಬ್ಬಿಣದ ರಾಡುಗಳು ಆತನ ದೇಹಕ್ಕೆ ಹೊಕ್ಕಿವೆ. ಜಿಲ್ಲೆಯ ಕೋಯಲಾಂಚಲ್​​ನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಾಲಕನ ದೇಹ ಹೊಕ್ಕಿರುವ ರಾಡುಗಳು
ಬಾಲಕನ ದೇಹ ಹೊಕ್ಕಿರುವ ರಾಡುಗಳು

ವಿಷಯ ತಿಳಿದ ಕೂಡಲೇ ಸ್ಥಳೀಯರು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ. ಅಸಂಬನಿ ಗ್ರಾಮದ 12 ವರ್ಷದ ಬಾಲಕ ಸೀಬೆ ಹಣ್ಣಿಗಾಗಿ ಮರವೇರಿದ್ದಾನೆ.

ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದು, ನೆಲದಲ್ಲಿದ್ದ ರಾಡುಗಳು ಬಾಲಕನ ದೇಹ ಸೇರಿವೆ. ಸ್ಥಳೀಯರು ಬ್ಲೇಡ್​ನಿಂದ ರಾಡುಗಳನ್ನು ಕತ್ತರಿಸಿ, ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Drugs Case​: 2ನೇ ದಿನವೂ NCB ವಿಚಾರಣೆಗೆ ಹಾಜರಾದ ಅನನ್ಯಾ ಪಾಂಡೆ

ಈಗಾಗಲೇ ತಂದೆ ತೀರಿಕೊಂಡಿದ್ದು, ಕೂಲಿನಾಲಿ ಮಾಡಿ ತಾಯಿ ಮಗನನ್ನು ಸಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರೋದು ಆಕೆಯನ್ನು ಮತ್ತಷ್ಟು ದುಗುಡಕ್ಕೆ ದೂಡಿದಂತಾಗಿದೆ.

Last Updated : Oct 22, 2021, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.