ETV Bharat / bharat

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕ್ಷೌರಿಕ.. 'ಡ್ರೀಮ್​ ಇಲೆವೆನ್​​​'ನಿಂದ ಹಣ ಗೆದ್ದು ಬೀಗಿದ.. - ಡ್ರೀಮ್​ ಇಲೆವೆನ್​​​'ನಿಂದ ಕೋಟಿ ಗೆದ್ದ ಅಶೋಕ್​

ಹೇರ್ ಕಟಿಂಗ್ ಸಲೂನ್​ ನಡೆಸುವ ಅಶೋಕ್ ಠಾಕೂರ್​, ಬಿಹಾರದ ಮಧುಬನಿಯ ಅಂಧರಥಾರಿ ಬ್ಲಾಕ್​​ನಲ್ಲಿ ಶಾಪ್​ ಇಟ್ಟುಕೊಂಡಿದ್ದಾನೆ. ಜೀವನೋಪಾಯಕ್ಕಾಗಿ ಸಲೂನ್​​ ನಂಬಿಕೊಂಡಿರುವ ಅಶೋಕ್​, ಈ ಹಿಂದೆ ಕೂಡ ಅನೇಕ ಸಲ ಡ್ರೀಮ್​ ಇಲೆವೆನ್​​ನಲ್ಲಿ ತಂಡ ಇಳಿಸಿ, ಕೈ ಸುಟ್ಟುಕೊಂಡಿದ್ದಾರೆ..

barber
barber
author img

By

Published : Sep 28, 2021, 8:49 PM IST

Updated : Sep 28, 2021, 9:01 PM IST

ಮಧುಬನಿ(ಬಿಹಾರ) : ಇಂಡಿಯನ್​ ಪ್ರೀಮಿಯರ್ ಲೀಗ್​​ ಸೇರಿ ಇತರೆ ಯಾವುದೇ ಕ್ರಿಕೆಟ್​ ಪಂದ್ಯಗಳು ನಡೆಯುವಾಗ ದೇಶದ ಕೋಟ್ಯಂತರ ಜನರು ಡ್ರೀಮ್​ ಇಲೆವನ್​ ಆಡ್ತಾರೆ. ತಮ್ಮ ಕನಸಿನ ತಂಡ ಕಣಕ್ಕಿಳಿಸಿ, ಹಣ ಗೆಲ್ಲುತ್ತಾರೆ. ಇದರಲ್ಲಿ ಜಯ ಕಂಡವರಿಗಿಂತಲೂ ವಿಫಲರಾಗಿರುವ ಜನರೇ ಹೆಚ್ಚು. ಇಂತಹ ಅನೇಕ ನಿದರ್ಶನಗಳು ನಮ್ಮ ಮುಂದೆ ಕೂಡ ಇವೆ. ಆದರೆ, ಇಲ್ಲೋರ್ವ ಕ್ಷೌರಿಕ ದಾಖಲೆಯ 1 ಕೋಟಿ ರೂ. ಗೆದ್ದಿದ್ದಾನೆ.

ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ ಅಶೋಕ್​, ಚೆನ್ನೈ ಸೂಪರ್ ಕಿಂಗ್ಸ್​​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡಗಳ ನಡುವಿನ ಪಂದ್ಯದಲ್ಲಿ 1 ಕೋಟಿ ರೂ. ಗೆದ್ದಿದ್ದಾರೆ. ಈ ಪಂದ್ಯದ ವೇಳೆ ತಮ್ಮ ಕನಸಿನ ತಂಡ ಆಯ್ಕೆ ಮಾಡಿದ್ದ ಅಶೋಕ್​​ ಇಷ್ಟೊಂದು ಹಣ ಗೆದ್ದಿದ್ದಾನೆ.

ಹೇರ್ ಕಟಿಂಗ್ ಸಲೂನ್​ ನಡೆಸುವ ಅಶೋಕ್ ಠಾಕೂರ್​, ಬಿಹಾರದ ಮಧುಬನಿಯ ಅಂಧರಥಾರಿ ಬ್ಲಾಕ್​​ನಲ್ಲಿ ಶಾಪ್​ ಇಟ್ಟುಕೊಂಡಿದ್ದಾನೆ. ಜೀವನೋಪಾಯಕ್ಕಾಗಿ ಸಲೂನ್​​ ನಂಬಿಕೊಂಡಿರುವ ಅಶೋಕ್​, ಈ ಹಿಂದೆ ಕೂಡ ಅನೇಕ ಸಲ ಡ್ರೀಮ್​ ಇಲೆವೆನ್​​ನಲ್ಲಿ ತಂಡ ಇಳಿಸಿ, ಕೈ ಸುಟ್ಟುಕೊಂಡಿದ್ದಾರೆ.

ಇದನ್ನೂ ಓದಿರಿ: ತಂಡದ ಗೆಲುವಿನ ಸಂಪೂರ್ಣ ಶ್ರೇಯ ಕೋಚ್​ ಮೆಕಲಮ್​ಗೆ ಸಲ್ಲಬೇಕು : ಕೆಕೆಆರ್ ಕ್ಯಾಪ್ಟನ್​ ಮಾರ್ಗನ್​

ಆದರೆ, ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಪಂದ್ಯದಲ್ಲಿ ಅವರ ಅದೃಷ್ಟ ಖುಲಾಯಿಸಿದೆ. 49 ರೂ. ಹೂಡಿಕೆ ಮಾಡಿದ್ದ ಆತ, ಡ್ರೀಮ್​ ಇಲೆವೆನ್​ ಮೂಲಕ 1 ಕೋಟಿ ರೂ. ಹಣ ಗೆದ್ದಿದ್ದಾರೆ. ಇದರಲ್ಲಿ ಶೇ.30ರಷ್ಟು ಕಡಿತಗೊಂಡು ಒಟ್ಟು 70 ಲಕ್ಷ ರೂ. ಅವರ ಅಕೌಂಟ್​ಗೆ ಜಮಾವಣೆಯಾಗಲಿದೆ. ಈ ಹಣದಿಂದ ತಾನು ಮಾಡಿರುವ ಸಾಲ ತೀರಿಸಿ, ಹೊಸ ಮನೆ ಕಟ್ಟಲು ಅಶೋಕ್ ನಿರ್ಧರಿಸಿದ್ದಾನೆ.

Last Updated : Sep 28, 2021, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.