ETV Bharat / bharat

ಅಂತಾರಾಜ್ಯ ಡ್ರಗ್​​ ಗ್ಯಾಂಗ್​ ಅಂದರ್​.. 35 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ - etv bharat kannada

ರಾಜಸ್ಥಾನದ ಜಲೋರ್ ಜಿಲ್ಲೆಯ ಪ್ರವೀಣ್ ಕುಮಾರ್ (22) ಉದ್ಯೋಗ ಅರಸಿ 2017 ರಲ್ಲಿ ಹೈದರಾಬಾದ್‌ಗೆ ಬಂದು ಪತಂಚೆರುವಿನಲ್ಲಿ ಸ್ಟೀಲ್ ಫ್ಯಾಬ್ರಿಕೇಶನ್ ಘಟಕ ನಡೆಸುತ್ತಿದ್ದ. ನಂತರ ಆತ ಸೈಕೋಟ್ರೋಪಿಕ್ ಡ್ರಗ್​ ಪಡೆದು ನಗರದಲ್ಲಿ ಸಂಪರ್ಕ ಬೆಳೆಸಿಕೊಂಡಿದ್ದ. ತದನಂತರ ಸ್ವತಃ ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದ. ಸ್ಥಳೀಯ ಮೂಲಗಳಿಂದ ಹೆರಾಯಿನ್ ಪಡೆದು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಭಾಗವತ್ ಹೇಳಿದರು.

ಹೈದರಾಬಾದ್: 35 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ, ಐವರ ಬಂಧನ
interstate-drug-syndicate-busted-in-hyderabad-five-arrested
author img

By

Published : Dec 21, 2022, 9:26 PM IST

ಹೈದರಾಬಾದ್: ರಾಗಿ ತುಂಬಿದ ಚೀಲಗಳಲ್ಲಿ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ ಗ್ಯಾಂಗ್​ ಅನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಮಂಗಳವಾರ ಬಂಧಿಸಿದ್ದಾರೆ.

ರಾಜಸ್ಥಾನದ ಮಾದಕ ವ್ಯಸನಿಯೊಬ್ಬ ಈ ಸಿಂಡಿಕೇಟ್‌ನ ಮಾಸ್ಟರ್‌ಮೈಂಡ್ ಎಂದು ಹೇಳಲಾಗಿದ್ದು, ನಂತರ ಈ ಗ್ಯಾಂಗ್​ಗೆ ಇತರರು ಸೇರಿಕೊಂಡಿದ್ದರು. ಬಂಧಿತ ಐವರಲ್ಲಿ ಮೂವರು ಪೂರೈಕೆದಾರರು ಮತ್ತು ಇಬ್ಬರು ಖರೀದಿದಾರರಾಗಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ 35 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ಹೆರಾಯಿನ್, ಒಂದು ಆಟೋ, ಒಂದು ಜೋಡಿ ದ್ವಿಚಕ್ರ ವಾಹನಗಳು ಮತ್ತು ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ಅವರೊಂದಿಗೆ ಡಿಸಿಪಿಗಳಾದ ರಕ್ಷಿತಾ ಕೆ.ಮೂರ್ತಿ, ಮುರಳೀಧರ್, ಎಸಿಪಿಗಳಾದ ಸಾಧನಾ ರಶ್ಮಿ ಪೆರುಮಾಳ್, ನರೇಶ್ ರೆಡ್ಡಿ ಮತ್ತು ಇತರರು ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು.

ರಾಜಸ್ಥಾನದ ಜಲೋರ್ ಜಿಲ್ಲೆಯ ಪ್ರವೀಣ್ ಕುಮಾರ್ (22) ಉದ್ಯೋಗ ಅರಸಿ 2017 ರಲ್ಲಿ ಹೈದರಾಬಾದ್‌ಗೆ ಬಂದು ಪಠಂಚೆರುವಿನಲ್ಲಿ ಸ್ಟೀಲ್ ಫ್ಯಾಬ್ರಿಕೇಶನ್ ಘಟಕ ನಡೆಸುತ್ತಿದ್ದ. ನಂತರ ಆತ ಸೈಕೋಟ್ರೋಪಿಕ್ ಡ್ರಗ್ಸ್ ಪಡೆದು ನಗರದಲ್ಲಿ ಸಂಪರ್ಕ ಬೆಳೆಸಿಕೊಂಡಿದ್ದ. ನಂತರ ಸ್ವತಃ ಅವುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದ. ಸ್ಥಳೀಯ ಮೂಲಗಳಿಂದ ಹೆರಾಯಿನ್ ಪಡೆದು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಭಾಗವತ್ ಹೇಳಿದರು.

ಪ್ರವೀಣ್ ರಾಜಸ್ಥಾನ ಮೂಲದ ಪೆಡ್ಲರ್ ಸಾವ್ಲಾ ಮಹದೇವ್ ರಾಮ್ ಎಂಬಾತನೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಆತನಿಂದ ಹೆರಾಯಿನ್ ಖರೀದಿಸಲು ಪ್ರಾರಂಭಿಸಿದ್ದ. ಮಹದೇವ್ ರಾಮ್ ಈತ ಖಾಸಗಿ ವಾಹನಗಳ ಮೂಲಕ ರವಾನೆಯಾಗುವ ರಾಗಿ ಚೀಲಗಳಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಇತರ ನಾಲ್ವರು ಅವನಿಗೆ ಸಹಾಯ ಮಾಡುತ್ತಿದ್ದರು.

ಮೇಡಿಪಲ್ಲಿ ಪೊಲೀಸರು ಮತ್ತು ಎಲ್‌ಬಿ ನಗರ ಎಸ್‌ಒಟಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಮಹದೇವ್ ರಾಮ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬೆಳಗಾವಿ : ಹೆರಾಯಿನ್, ಗಾಂಜಾ ಮಾರಾಟ, ನಾಲ್ವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.