ನವದೆಹಲಿ : ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟ ಸ್ಥಗಿತದ ಅವಧಿಯನ್ನು ಮೇ 31 ರವರೆಗೆ ಭಾರತ ವಿಸ್ತರಿಸಿದೆ. ಆದರೆ, ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
2020ರ ಜೂನ್ ತಿಂಗಳಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಏಪ್ರಿಲ್ ಅಂತ್ಯದವರೆಗೆ ವಾಣಿಜ್ಯ ಸೇವೆಗಳಿಗಾಗಿ ಇರುವ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಿ ಸುತ್ತೋಲೆ ಹೊರಡಿಸಿತ್ತು. ಈ ಆದೇಶದಲ್ಲಿ ಬದಲಾವಣೆ ಮಾಡಲಾಗಿದ್ದು, ಮೇ 31ರವರೆಗೆ ಅವಧಿ ವಿಸ್ತರಣೆಯಾಗಿದೆ.
ವಿದೇಶಗಳಿಗೆ ಹಾರಾಟ ನಡೆಸುವ ಕಾರ್ಗೋ ವಿಮಾನ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.