ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸೇವೆಯ (ಐಸಿಎಒ) 50ನೇ ವಾರ್ಷಿಕೋತ್ಸವದ ಭಾಗವಾಗಿ 1994ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನಾಚರಣೆ ಆರಂಭಿಸಲಾಯಿತು. 1996ರಲ್ಲಿ, ಐಸಿಎಒ ಉಪಕ್ರಮಕ್ಕೆ ಅನುಗುಣವಾಗಿ ಮತ್ತು ಕೆನಡಾ ಸರ್ಕಾರದ ನೆರವಿನೊಂದಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 7 ಅನ್ನು ನಾಗರಿಕ ವಿಮಾನಯಾನ ದಿನವೆಂದು ಅಧಿಕೃತವಾಗಿ ಘೋಷಿಸಲಾಯಿತು.
ಇತಿಹಾಸ:
1944 ರಲ್ಲಿ ಅಮೆರಿಕದ ಆಹ್ವಾನದ ಮೇರೆಗೆ 54 ರಾಷ್ಟ್ರಗಳ ಪ್ರತಿನಿಧಿಗಳು ಚಿಕಾಗೋದ ಸ್ಟೀವನ್ಸ್ ಹೋಟೆಲ್ನ ಗ್ರ್ಯಾಂಡ್ ಬಾಲ್ ರೂಂನಲ್ಲಿ ಸೇರಿದ್ದರು. ಈ ಸಮಾರಂಭದಲ್ಲಿ ಭಾಗವಹಿಸಿದವರು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನಕ್ಕೆ ಸಹಿ ಹಾಕುತ್ತಾರೆ. ಇದನ್ನು 'ಚಿಕಾಗೊ ಕನ್ವೆನ್ಷನ್' ಎಂದೂ ಕರೆಯುತ್ತಾರೆ. ಇದು ಜಾಗತಿಕ ನಾಗರಿಕ ವಿಮಾನಯಾನ ವ್ಯವಸ್ಥೆಯನ್ನು ಶಾಂತಿಯುತವಾಗಿ ಮತ್ತು ಎಲ್ಲಾ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅನುಮತಿ ನೀಡಿದ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ. ಐಸಿಎಒನ 50ನೇ ವಾರ್ಷಿಕೋತ್ಸವದ ಅಂಗವಾಗಿ 1994 ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
1996 ರಲ್ಲಿ ಐಸಿಎಒ ಉಪಕ್ರಮಕ್ಕೆ ಅನುಗುಣವಾಗಿ ಮತ್ತು ಕೆನಡಾ ಸರ್ಕಾರದ ನೆರವಿನೊಂದಿಗೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಎ / ಆರ್ಇಎಸ್ / 51/33 ನಿರ್ಣಯವನ್ನು ಅಂಗೀಕರಿಸಿತು. ಯುಎನ್ ಇದನ್ನು ಡಿಸೆಂಬರ್ 7ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವೆಂದು ಘೋಷಿಸಲಾಯಿತು. ಇದಲ್ಲದೆ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಆಚರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರಗಳು ಮತ್ತು ಸಂಬಂಧಿತ ರಾಷ್ಟ್ರೀಯ, ಪ್ರಾದೇಶಿಕ, ಅಂತಾರಾಷ್ಟ್ರೀಯ ಹಾಗೂ ಅಂತರ್ ಸರ್ಕಾರಿ ಸಂಸ್ಥೆಗಳನ್ನು ಸಾಮಾನ್ಯ ಸಭೆ ಒತ್ತಾಯಿಸಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ಐಸಿಎಒ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಯಾವುದೇ ಕ್ಷಣದಲ್ಲಿ, ಎಲ್ಲಿಗೆ ಬೇಕಾದ್ರೂ 500,000 ದಿಂದ ಒಂದು ಮಿಲಿಯನ್ ಜನರು ಇದರಲ್ಲಿ ಹಾರಾಟ ನಡೆಸಬಹುದಾಗಿದೆ.
ಮೊದಲ ನಿಗದಿತ ವಾಣಿಜ್ಯ ವಿಮಾನಯಾನ ಹಾರಾಟವು ಜನವರಿ 1, 1914 ರಂದು ಪ್ರಾರಂಭವಾಯಿತು. ಇದು ಫ್ಲೋರಿಡಾ ಬೇಯಿಂದ ಸೇಂಟ್ ಪೀಟರ್ಸ್ಬರ್ಗ್ ಟ್ಯಾಂಪಾವರೆಗೆ ಹಾರಾಟ ನಡೆಸಿತ್ತು.
ಲಂಡನ್‌ನಿಂದ ಪ್ಯಾರಿಸ್‌ಗೆ ಹ್ಯಾಂಡ್ಲಿ-ಪೇಜ್ ವಿಮಾನದ ಮೂಲಕ ಮೊದಲ ವಿಮಾನಯಾನ ಆರಂಭವಾಯಿತು.
ಟ್ರಯಂಫ್ ಇಂಟರ್ನ್ಯಾಷನಲ್ ಅವರು ಫ್ರಿಕ್ವೆಂಟ್ ಫ್ಲೈಯರ್ ಬ್ರಾ ಎಂಬ ಕಾರ್ಡ್ನನ್ನು 2001ರಲ್ಲಿ ಆರಂಭಿಸಿದ್ರು, ಇದರಲ್ಲಿ ಕಂಚನ್ನು ಮೊದಲ ಬಾರಿಗೆ ಬಳಸಲಾಗಿತ್ತು.
ವಿಶ್ವದ ಅತಿ ಚಿಕ್ಕ ವಾಣಿಜ್ಯ ರನ್ವೇ ಕೆರಿಬಿಯನ್ ದ್ವೀಪದ ಸಬಾದಲ್ಲಿದೆ. ಇದು ಕೇವಲ 400 ಮೀಟರ್ ಉದ್ದವಾಗಿದೆ. ಇದು ಜೆಟ್ ವಿಮಾನಗಳಿಗಿಂತ ಚಿಕ್ಕದಾಗಿದೆ. ಬೋಯಿಂಗ್ 747 ಜಂಬೊ ಜೆಟ್ ತೂಕವು ಆಫ್ರಿಕಾದ 67 ಆನೆಗಳ ತೂಕಕ್ಕೆ ಸಮಾನವಾಗಿದೆ. "ಏರ್-ಪೋರ್ಟ್" ಎಂಬ ಪದವನ್ನು 1780 ರ ದಶಕದಲ್ಲಿ ಬಂತು.
ವಿಮಾನಯಾನದ ಮೇಲೆ ಕೋವಿಡ್ -19 ಜಾಗತಿಕ ಪರಿಣಾಮ:
ವಿಮಾನ ಸೇವೆಯನ್ನು ಪುನರಾರಂಭಿಸಿದರೂ 2020 ರ ದ್ವಿತೀಯಾರ್ಧದಲ್ಲಿ ಜಾಗತಿಕ ವಿಮಾನಯಾನ ಉದ್ಯಮಕ್ಕೆ 77 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಅಂತಾರಾಷ್ಟ್ರೀಯ ಐಎಟಿಎ ವರದಿ ಹೇಳಿದೆ. ಸಿಡ್ನಿ ಮೂಲದ ವಾಯುಯಾನ ಸಲಹಾ ಸಿಎಪಿಎ ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಅರ್ಧದಷ್ಟು ವ್ಯವಹಾರದಿಂದ ಹೊರಗುಳಿಯಬಹುದು ಎಂದು ಭವಿಷ್ಯ ನುಡಿದಿದೆ.
ಕೊರೊನಾ ಸಮಯದಲ್ಲಿ ಕಾರ್ಯನಿರ್ವಹಿಸದ ಕೆಲವು ವಿಮಾನಯಾನ ಸಂಸ್ಥೆಗಳ ಪಟ್ಟಿ:
ಏರ್ ಇಟಲಿ: ಫೆಬ್ರವರಿ 11 ರಂದು ಮೊದಲ ವಿಮಾನ ಹಾರಾಟ ನಡೆಸಿದ ಎರಡು ವರ್ಷಗಳ ನಂತರ ಮಿಲನ್ ಮೂಲದ ವಿಮಾನಯಾನ ಏರ್ ಇಟಲಿ ದಿವಾಳಿಯಾಗುವ ಹಂತದಲ್ಲಿದೆ ಎಂದು ಘೋಷಿಸಿದ್ದರು. ಹೂಡಿಕೆದಾರರಾದ ಇಟಾಲಿಯನ್ ವಿಮಾನಯಾನ ಸಂಸ್ಥೆ, ಕತಾರ್ ಏರ್ವೇಸ್ ಮತ್ತು ಅಗಾ ಖಾನ್ ಅವರು ತಮ್ಮ ಈ ನಿರ್ಧಾರವು ಮಾರುಕಟ್ಟೆಯಲ್ಲಿನ "ನಿರಂತರ ಮತ್ತು ರಚನಾತ್ಮಕ ಪರಿಸ್ಥಿತಿಗಳನ್ನು" ಆಧರಿಸಿದೆ ಎಂದು ಹೇಳಿದರು.
ಲ್ಯಾಟಮ್ ಏರ್ಲೈನ್ಸ್: ಚಿಲಿಯ ಲ್ಯಾಟಮ್ ಏರ್ಲೈನ್ಸ್ ಮೇನಲ್ಲಿ ಸಾಂಕ್ರಾಮಿಕದ ಹಿನ್ನೆಲೆ ವಿಧಿಸಲಾಗಿದ್ದ ಲಾಕ್ಡೌನ್ನಿಂದ ತನ್ನ ಸೇವೆಯನ್ನು ನಿಲ್ಲಿಸಿತ್ತು. ಅಲ್ಲದೇ ಇದು ದಿವಾಳಿಯಾಗುವ ಹಂತದಲ್ಲಿದ್ದಾಗ ಯುಎಸ್ನಿಂದ 2.45 ಬಿಲಿಯನ್ ಡಾಲರ್ ಸಾಲವನ್ನು ಪಡೆದಿತ್ತು.
ವರ್ಜಿನ್ ಆಸ್ಟ್ರೇಲಿಯಾ: ಏಪ್ರಿಲ್ 21 ರಂದು ಬ್ರಿಸ್ಬೇನ್ ಮೂಲದ ವಿಮಾನಯಾನ ವರ್ಜಿನ್ ಆಸ್ಟ್ರೇಲಿಯಾ ಸ್ವಯಂಪ್ರೇರಿತ ಆಡಳಿತಕ್ಕಾಗಿ ಅರ್ಜಿ ಸಲ್ಲಿಸಿತ್ತು. ಇದು ಕೂಡ ದಿವಾಳಿತನದ ಹಂತದಲ್ಲಿತ್ತು. ಸುಮಾರು ಎರಡು ದಶಕಗಳಷ್ಟು ಹಳೆಯದಾದ ವಿಮಾನಯಾನವು ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದಿವಾಳಿಯಾಗಿರುವುದು. ಕಳೆದ ತಿಂಗಳು ಈ ವಿಮಾನಯಾನ ಸಂಸ್ಥೆಯನ್ನು ಬೈನ್ ಕ್ಯಾಪಿಟಲ್ ಸ್ವಾಧೀನಪಡಿಸಿಕೊಂಡಿತ್ತು.
ಕಂಪಾಸ್ ಏರ್ಲೈನ್ಸ್: ಪ್ರಾದೇಶಿಕ ವಾಹಕ ಕಂಪಾಸ್ ಏರ್ಲೈನ್ಸ್ ಏಪ್ರಿಲ್ 7 ರೊಳಗೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದಾಗಿ ಘೋಷಿಸಿತು. ಈ ವಿಮಾನಯಾನವು ಅಮೆರಿಕನ್ ಏರ್ಲೈನ್ಸ್ ಪ್ರಾದೇಶಿಕ ಅಂಗಸಂಸ್ಥೆ ಅಮೆರಿಕನ್ ಈಗಲ್ ಮತ್ತು ಡೆಲ್ಟಾ ಸಂಪರ್ಕಕ್ಕಾಗಿ ವಿಮಾನಗಳನ್ನು ನಿರ್ವಹಿಸಲು ಬಳಸುತ್ತಿತ್ತು.
ಟ್ರಾನ್ಸ್ ಸ್ಟೇಟ್ಸ್ ಏರ್ಲೈನ್ಸ್: ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಬೇಡಿಕೆ ಕ್ಷೀಣಿಸುತ್ತಿರುವುದರಿಂದ ಕಂಪಾಸ್ ಏರ್ಲೈನ್ಸ್ನ ಸಹೋದರಿ ಸಂಸ್ಥೆಯಾದ ಟ್ರಾನ್ಸ್ ಸ್ಟೇಟ್ಸ್ ಏರ್ಲೈನ್ಸ್ ಏಪ್ರಿಲ್ 1 ರಂದು ತನ್ನ ಸೇವೆಯನ್ನು ನಿಲ್ಲಿಸಿತ್ತು.
ಮಿಯಾಮಿ ಏರ್ ಇಂಟರ್ನ್ಯಾಷನಲ್: ಮಾರ್ಚ್ 8 ರಂದು, ಚಾರ್ಟರ್ ಏರ್ಲೈನ್ನ ಮಿಯಾಮಿ ಏರ್ ಇಂಟರ್ನ್ಯಾಷನಲ್ ತನ್ನ ವಿಮಾನಯಾನ ಸೇವೆಯನ್ನು ನಿಲ್ಲಿಸುವ ಮೊದಲು ಅಧ್ಯಾಯ 11 ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತ್ತು.
ಫ್ಲೈಬೆ: ಯುಕೆ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈಬೆ, ಕೋವಿಡ್ -19 ಕ್ಕಿಂತ ಮೊದಲೇ ಆರ್ಥಿಕವ ಸಂಕಷ್ಟದಲ್ಲಿತ್ತು. ಸಾಂಕ್ರಾಮಿಕ ರೋಗ ಆರಂಭವಾದ ನಂತರ ಮತ್ತಷ್ಟ ಆರ್ಥಿಕವಾಗಿ ನಷ್ಟವನ್ನು ಅನುಭವಿಸಿತು.
ಏರ್ ಡೆಕ್ಕನ್: ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿದ್ದ ಏರ್ ಡೆಕ್ಕನ್, ಏಪ್ರಿಲ್ನಲ್ಲಿ ತನ್ನ ವಿಮಾನಯಾನ ಸೇವೆಯನ್ನು ನಿಲ್ಲಿಸುತ್ತಿರುವುದಾಗಿ ಮತ್ತು ಮುಂದಿನ ಸೂಚನೆ ಬರುವವರೆಗೂ ತನ್ನ ಎಲ್ಲ ಉದ್ಯೋಗಿಗಳಿಗೆ ಕೆಲಸಕ್ಕೆ ಬಾರದಂತೆ ಸೂಚಿಸಿತ್ತು. ಸುಮಾರು ಒಂದು ತಿಂಗಳ ನಂತರ, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಮಹಾರಾಷ್ಟ್ರದಲ್ಲಿ ಮತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಏವಿಯಾಂಕಾ ಹೋಲ್ಡಿಂಗ್ಸ್: ದಕ್ಷಿಣ ಅಮೆರಿಕದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ, ಏವಿಯಾಂಕಾ ಮೇ ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿ ಅಧ್ಯಾಯ 11 ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿತು. LATAM ನಂತೆಯೇ, ಕೊಲಂಬಿಯಾದ ವಿಮಾನಯಾನವು ಪುನರ್ರಚನೆ ಪ್ರಕ್ರಿಯೆಯಲ್ಲಿಯೂ ಸಹ ವಿಮಾನ ನಿರ್ವಹಿಸುತ್ತಲೇ ಇತ್ತು.
ದಕ್ಷಿಣ ಆಫ್ರಿಕಾದ ಏರ್ವೇಸ್: ದಕ್ಷಿಣ ಆಫ್ರಿಕಾದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯಾದ ದಕ್ಷಿಣ ಆಫ್ರಿಕಾದ ಏರ್ವೇಸ್ ಕಳೆದ ತಿಂಗಳು ತನ್ನ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಏರ್‌ಏಷ್ಯಾ ಜಪಾನ್: ಏರ್‌ಏಷ್ಯಾ ಜಪಾನ್ ಅಕ್ಟೋಬರ್ 5 ರಂದು ತನ್ನ ವಿಮಾನಯಾನ ಸೇವೆಯನ್ನು ನಿಲ್ಲಿಸುವುದಾಗಿ ಘೋಷಿಸಿತ್ತು.
ಭಾರತೀಯ ನಾಗರಿಕ ವಿಮಾನಯಾನದ ಮೇಲೆ ಕೋವಿಡ್-19 ಪರಿಣಾಮ:
ಕ್ರೆಡಿಟ್ ರೇಟಿಂಗ್ ಏಜೆನ್ಸಿ ಇಕ್ರಾ ಲಿಮಿಟೆಡ್ನ ಇತ್ತೀಚಿನ ವರದಿಯ ಪ್ರಕಾರ ಇಂಡಿಯನ್ ಏರ್ಲೈನ್ಸ್ ಆರ್ಥಿಕ ವರ್ಷ 2021 ರಲ್ಲಿ ಸುಮಾರು 21,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಹೇಳಿದೆ.
ನಷ್ಟ ಮತ್ತು ಸಾಲದಿಂದ ಚೇತರಿಸಿಕೊಳ್ಳಲು Fy 2021 ರವರೆಗೆ 37,000 ಕೋಟಿ ರೂ.ಗೆ ಹೆಚ್ಚುವರಿ ಹಣದ ಅಗತ್ಯವಿರುತ್ತದೆ ಎಂದು ಇಕ್ರಾ ಹೇಳಿದೆ.
ಸುರಕ್ಷತೆ, ಭದ್ರತೆ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆಗೆ ಯಾವ ಕ್ರಮ ಕೈಗೊಳ್ಳಬೇಕು. ವಿಮಾನಯಾನ ಸುರಕ್ಷತೆಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು, ಇದಕ್ಕೆ ಸಂಬಂಧಿತ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನದ ಉದ್ದೇಶವಾಗಿದೆ. ಸರ್ಕಾರಗಳು, ಸಂಸ್ಥೆಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳ ಬೆಂಬಲದಿಂದ ಐಇಎಒ ಸಂಸ್ಥೆಯು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ವಿವಿಧ ಚಟುವಟಿಕೆಗಳು ಮತ್ತು ಘಟನೆಗಳ ಮೂಲಕ ಸಕ್ರಿಯವಾಗಿ ಆಚರಿಸುತ್ತಿದೆ.