ETV Bharat / bharat

ಡ್ಯಾನ್ಸ್​ ಮಾಡುತ್ತಲೇ ಪ್ರಾಣ ಬಿಟ್ಟ ವಿದ್ಯಾರ್ಥಿನಿ.. ವೈದ್ಯರ ಸಲಹೆಗಳೇನು?

author img

By

Published : Aug 12, 2023, 8:49 AM IST

ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಇಂಟರ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.

Inter student dies  Inter student dies of a heart attack  Inter student dies of a heart attack while dancing  What is Doctors advise  ಡ್ಯಾನ್ಸ್​ ಮಾಡುತ್ತಲೇ ಪ್ರಾಣ ಬಿಟ್ಟ ವಿದ್ಯಾರ್ಥಿನಿ  ಡ್ಯಾನ್ಸ್ ಮಾಡುವಾಗ ಹೃದಯಾಘಾತ  ಹೃದಯಾಘಾತದಿಂದ ಇಂಟರ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ  ಜಿಲ್ಲೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ  ಕಾಲೇಜ್​ವೊಂದರಲ್ಲಿ ಆಯೋಜಿಸಿದ್ದ ಒಂದು ಸಣ್ಣ ಕಾರ್ಯಕ್ರಮ  ಡ್ಯಾನ್ಸ್​ ಮಾಡುತ್ತಲೇ ಪ್ರಾಣ ಕಳೆದುಕೊಂಡಿರುವ ದುಃಖ  ಕಾಲೇಜಿನಲ್ಲಿ ಫ್ರೆಶರ್ಸ್ ಡೇ  ವೈದ್ಯ ಸಿಬ್ಬಂದಿ ಸಿಪಿಆರ್ ಮಾಡಿಸಿ ಚಿಕಿತ್ಸೆ
ಡ್ಯಾನ್ಸ್​ ಮಾಡುತ್ತಲೇ ಪ್ರಾಣ ಬಿಟ್ಟ ವಿದ್ಯಾರ್ಥಿನಿ

ಕರೀಂನಗರ, ತೆಲಂಗಾಣ: ಜಿಲ್ಲೆಯಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಕಾಲೇಜ್​ವೊಂದರಲ್ಲಿ ಆಯೋಜಿಸಿದ್ದ ಒಂದು ಸಣ್ಣ ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಡ್ಯಾನ್ಸ್​ ಮಾಡುತ್ತಲೇ ಪ್ರಾಣ ಕಳೆದುಕೊಂಡಿರುವ ದುಃಖದ ವಿಚಾರ ಬೆಳಕಿಗೆ ಬಂದಿದೆ.

16 ವರ್ಷದ ಬಾಲಕಿ ಸಾವು: ಕರೀಂನಗರ ಜಿಲ್ಲೆಯ ಗಂಗಾಧರ ತಾಲೂಕಿನ ನ್ಯಾಲಕೊಂಡಪಲ್ಲಿಯ ಸರ್ಕಾರಿ ಕಾಲೇಜುವೊಂದರಲ್ಲಿ ಇಂಟರ್ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾಹಿತಿ ಪ್ರಕಾರ, ಇಲ್ಲಿನ ವೆಂಕಟಾಯಪಲ್ಲಿ ಗ್ರಾಮದ ಗುಂಡು ಅಂಜಯ್ಯ ಮತ್ತು ಶಾರದಾಳ ಅವರ ಪುತ್ರಿ ಪ್ರದೀಪ್ತಿ (16) ಸರ್ಕಾರಿ ಕಾಲೇಜ್​ನಲ್ಲಿ ಇಂಟರ್‌ ಪ್ರಥಮ ವರ್ಷ ಓದುತ್ತಿದ್ದರು.

ಶುಕ್ರವಾರದಂದು ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿಮಿತ್ತ ಪ್ರದೀಪ್ತಿ ಸಹ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಕಾಲೇಜಿನ ವೈದ್ಯ ಸಿಬ್ಬಂದಿ ಸಿಪಿಆರ್ ಮಾಡಿಸಿ ಚಿಕಿತ್ಸೆ ಕೊಡಿಸಿದರು. ಆದ್ರೂ ಸಹ ಪ್ರಯೋಜನವಾಗಲಿಲ್ಲ.

ಪ್ರದೀಪ್ತಿಯನ್ನು ಕರೀಂನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತು. ಆದರೆ ಆಕೆ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಚಿಕ್ಕಂದಿನಿಂದಲೂ ಪ್ರದೀಪ್ತಿ ಅವರ ಹೃದಯದಲ್ಲಿ ರಂಧ್ರವಿದ್ದು, ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಪಾಲಕರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗದೇ ದಿನಗಳನ್ನು ಮುಂದುಡುತ್ತಾ ಬಂದಿದ್ದರು.

ವೈದ್ಯರ ಸಲಹೆಗಳೇನು?: ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳು ಯಾವುದೇ ಸಂದರ್ಭದಲ್ಲೂ ಅತಿಯಾದ ವ್ಯಾಯಾಮ ಮಾಡಬಾರದು ಎಂದು ಮಕ್ಕಳ ಹೃದ್ರೋಗ ತಜ್ಞ ಡಾ.ಕೋನೇಟಿ ನಾಗೇಶ್ವರ್ ರಾವ್ ಸಲಹೆ ನೀಡಿದ್ದಾರೆ.

ತೀವ್ರ ಪರಿಶ್ರಮಕ್ಕೆ ಒಳಗಾದಾಗ ಹೃದಯ ವೈಫಲ್ಯದ ಅಪಾಯವಿದೆ. ಕರೀಂನಗರದಲ್ಲಿ ಡ್ಯಾನ್ಸ್ ಮಾಡುವಾಗ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳಲ್ಲಿ ಸುಮಾರು 50 ವಿಧದ ಹೃದ್ರೋಗಗಳಿವೆ. ಈ ರೋಗಗಳಲ್ಲಿ ಹೃದಯದಲ್ಲಿ ರಂಧ್ರವನ್ನು ಒಳಗೊಂಡಿದೆ. ಈ ರಂಧ್ರದಿಂದ ದೇಹ ಮತ್ತು ಶ್ವಾಸಕೋಶಕ್ಕೆ ಹೋಗುವ ರಕ್ತನಾಳಗಳಲ್ಲಿ ಅಡಚಣೆಗಳಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಹೃದಯದ ಸ್ಪಂದನದಲ್ಲಿ ವಿಪರೀತ ವ್ಯತ್ಯಾಸಗಳಿವೆ. ಅದರಲ್ಲಿ ಈ 3 ವಿಧಗಳು ಹೆಚ್ಚಾಗಿ ಕಂಡು ಬರುತ್ತವೆ. ಹೃದಯದಲ್ಲಿ ರಂಧ್ರವಿರುವ ರೋಗಿಗಳು ಅತಿಯಾದ ವ್ಯಾಯಾಮ ಮಾಡಿದರೆ ಶ್ವಾಸಕೋಶದಲ್ಲಿ ರಕ್ತದೊತ್ತಡವು ಎರಡು ಅಥವಾ ಮೂರು ಪಟ್ಟು ಹೆಚ್ಚಾಗುವ ಅಪಾಯವಿದೆ. ಶ್ವಾಸನಾಳದಲ್ಲಿ ಶುದ್ಧವಾಗಬೇಕಾದ ರಕ್ತವು ಅಶುದ್ಧವಾಗಿ ದೇಹವನ್ನು ಸೇರುತ್ತದೆ. ಇದು ಮೆದುಳನ್ನೂ ತಲುಪುತ್ತದೆ. ಇದರಿಂದ ತಲೆ ಸುತ್ತು ಬಂದು ಕುಸಿದು ಬೀಳುತ್ತಾರೆ ಎನ್ನುತ್ತಾರೆ ವೈದ್ಯರು.

ಕೆಲ ರೋಗಿಗಳು ಕುಸಿದು ಬಿದ್ದ ನಂತರ ಸಾಯುವ ಅಪಾಯವಿದೆ. ಇತರ ಎರಡು ರೀತಿಯ ಪೀಡಿತರಿಗೆ, ತೀವ್ರವಾದ ದೈಹಿಕ ಚಟುವಟಿಕೆಯು ಸಹ ನಿಷ್ಪರಿಣಾಮಕಾರಿಯಾಗಿದೆ. ಯಾವುದೇ ಕಾರಣಕ್ಕೂ ಚಿಕಿತ್ಸೆ ವಿಳಂಬವಾದರೆ ಅಪಾಯ ಎದುರಿಸಬೇಕಾಗುತ್ತದೆ. ಅದಕ್ಕೂ ಮುನ್ನವೇ ಅವರು ಒಮ್ಮೆಯಾದರೂ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಅಷ್ಟೇ ಅಲ್ಲ ಹೃದಯದಲ್ಲಿ ರಂಧ್ರವಿರುವ ಮಕ್ಕಳನ್ನು ದೈಹಿಕ ಚಟುವಟಿಕೆ, ನೃತ್ಯ ಮತ್ತು ಕ್ರೀಡೆಗಳನ್ನು ಒಳಗೊಂಡಿರುವ ಚಟುವಟಿಕೆಗಳಲ್ಲಿ ತೊಡಗಿಸದಂತೆ ಪೋಷಕರು ಕಾಳಜಿ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮೊದಲ ಹಂತದಲ್ಲಿ ಹೃದ್ರೋಗ ಹೊಂದಿರುವ ಮಕ್ಕಳನ್ನು ಗುರುತಿಸುವುದು ಹೇಗೆ?...

* ತುಂಬಾ ಆಯಾಸ ಬರುತ್ತಿರುತ್ತದೆ. ಹಾಲು ಕುಡಿಯಲು ಬಯಸಿದರೂ ಅವರಿಂದ ಆಗುವುದಿಲ್ಲ. ಸ್ವಲ್ಪ, ಸ್ವಲ್ಪ ಕುಡಿದು ನಿದ್ರೆಗೆ ಹೋಗುತ್ತಿರುತ್ತಾರೆ. ಬೆಳವಣಿಗೆ ಇರುವುದಿಲ್ಲ

* ಹಾಲು ಕುಡಿಯುವಾಗ ವಿಪರೀತ ಬೆವರು ಬರುತ್ತದೆ. ಆಗಾಗ್ಗೆ ನ್ಯುಮೋನಿಯಾ ಬರುತ್ತದೆ.

* ಕೆಲವರು ನೀಲಿ ಬಣ್ಣಕ್ಕೆ ತಿರುಗುತ್ತಾರೆ..

* ಸಾಮಾನ್ಯ ಮಕ್ಕಳಂತೆ ಆಟವಾಡಲು ಸಾಧ್ಯವಾಗುವುದಿಲ್ಲ, ಓಡಲು ಆಗುವುದಿಲ್ಲ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.