ETV Bharat / bharat

ಗಣತಂತ್ರದ ಪವಿತ್ರ ದಿನ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದು ದುರದೃಷ್ಟಕರ: ರಾಷ್ಟ್ರಪತಿ ಬೇಸರ

ಗಣರಾಜ್ಯೋತ್ಸವದಂತಹ ಪವಿತ್ರ ದಿನದಂದು ತ್ರಿವರ್ಣ ಧ್ವಜವನ್ನು ಅವಮಾನಿಸುವುದು ಬಹಳ ದುರದೃಷ್ಟಕರ ಸಂಗತಿ. ಸಂವಿಧಾನವೇ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಅದೇ ಸಂವಿಧಾನವೇ ಕಾನೂನನ್ನು ಗಂಭೀರವಾಗಿ ಪಾಲಿಸಬೇಕು ಎಂಬುದನ್ನು ನಮಗೆ ಕಲಿಸುತ್ತದೆ ಎಂದು ರಾಷ್ಟ್ರಪತಿ ಖೇದ ವ್ಯಕ್ತಪಡಿಸಿದರು.

ರಾಮ್ ನಾಥ್ ಕೋವಿಂದ್
ರಾಮ್ ನಾಥ್ ಕೋವಿಂದ್
author img

By

Published : Jan 29, 2021, 11:44 AM IST

Updated : Jan 29, 2021, 12:00 PM IST

ನವದೆಹಲಿ: ಗಣರಾಜ್ಯೋತ್ಸವದ ಹಿಂಸಾಚಾರದ ಬಗ್ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಮ್ಮ ಬಜೆಟ್​ ಅಧಿವೇಶನದ ಜಂಟಿ ಭಾಷಣದಲ್ಲಿ ಪ್ರಸ್ತಾಪಿಸಿದರು.

ಗಣರಾಜ್ಯೋತ್ಸವದಂತಹ ಪವಿತ್ರ ದಿನದಂದು ತ್ರಿವರ್ಣ ಧ್ವಜವನ್ನು ಅವಮಾನಿಸುವುದು ಬಹಳ ದುರದೃಷ್ಟಕರ ಸಂಗತಿ. ಸಂವಿಧಾನವೇ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಅದೇ ಸಂವಿಧಾನವೇ ಕಾನೂನನ್ನು ಗಂಭೀರವಾಗಿ ಪಾಲಿಸಬೇಕು ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಹೇಳಿದರು.

ನಮ್ಮ ಸರ್ಕಾರ ಸಂವಿಧಾನ ಬದ್ಧವಾಗಿ ಶಾಂತಿಯುತ ಪ್ರತಿಭಟನೆಗಳಿಗೆ ಗೌರವ ನೀಡಿದೆ. ಕೆಲವು ದಿನಗಳ ಹಿಂದೆ ಗಣರಾಜ್ಯೋತ್ಸವದಂತಹ ಪವಿತ್ರ ದಿನದಂದು ನಡೆದ ತ್ರಿವರ್ಣ ಧ್ವಜದ ಅಪಮಾನ ದುರದೃಷ್ಟಕರ. ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟ ಸಂವಿಧಾನವೇ ಕಾನೂನು ಪಾಲಿಸಬೇಕು ಎಂಬುದನ್ನು ಬೋಧಿಸುತ್ತದೆ.

ಸಂಸತ್​ ಭವನದಲ್ಲಿ ರಾಷ್ಟ್ರಪತಿಗಳ ಭಾಷಣ

ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಅಧಿಕಾರ:

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳು ರೈತರಿಗೆ ಅಧಿಕಾರ ನೀಡುತ್ತವೆ ಎಂದು ರಾಷ್ಟ್ರಪತಿ ಹೇಳಿದರು.

ಮೂರು ಹೊಸ ಕೃಷಿ ಕಾನೂನುಗಳನ್ನು ರಚಿಸುವ ಮೊದಲು, ಹಳೆಯ ವ್ಯವಸ್ಥೆಯಡಿಯಲ್ಲಿದ್ದ ಹಕ್ಕು ಮತ್ತು ಸೌಲಭ್ಯಗಳಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ನನ್ನ ಸರ್ಕಾರ ಸ್ಪಷ್ಟಪಡಿಸಲು ಬಯಸಿದೆ. ಈಗಿನ ಕೃಷಿ ಸುಧಾರಣೆಗಳ ಮೂಲಕ ಸರ್ಕಾರವು ರೈತರಿಗೆ ಹೊಸ ಹಕ್ಕುಗಳನ್ನು ನೀಡಿದೆ ಎಂದರು.

ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಸರ್ಕಾರ ದಾಖಲೆಯ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಆರ್ಥಿಕತೆ ನಿಭಾಯಿಸಲು ಆರ್ಥಿಕ ಪ್ಯಾಕೇಜ್ ಘೋಷಣೆ ಜತೆಗೆ ನನ್ನ ಸರ್ಕಾರವು ಯಾವುದೇ ಬಡವರು ಹಸಿವಿನಿಂದ ಬಳಲದಂತೆ ನೋಡಿಕೊಂಡಿತ್ತು ಎಂದು ಹೇಳಿದರು.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಸಲು ಸುವರ್ಣಾವಕಾಶ: ಪ್ರಧಾನಿ ಆಶಾವಾದ

ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಎಂಟು ಕೋಟಿ ಜನರಿಗೆ ತಿಂಗಳಿಗೆ ಐದು ಕೆಜಿ ಉಚಿತ ಆಹಾರ ಧಾನ್ಯಗಳನ್ನು ಎಂಟು ತಿಂಗಳವರೆಗೆ ನೀಡಲಾಗಿದೆ. ವಲಸೆ ಕಾರ್ಮಿಕರು, ದಿನಗೂಲಿ ಮತ್ತು ಮನೆಗಳಿಂದ ದೂರ ವಾಸಿಸುವ ಕಾರ್ಮಿಕರನ್ನು ಸರ್ಕಾರ ಸವಲತ್ತುಗಳನ್ನು ನೀಡಿದೆ ಎಂದು ರಾಷ್ಟ್ರಪತಿ ಹೇಳಿದರು.

ಭಾರತದ ಜನರಿಗೆ ಕೋವಿಡ್ -19 ಸಾಂಕ್ರಾಮಿಕ ಮತ್ತು ಸಂಬಂಧಿತ ತೊಂದರೆಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ತೀವ್ರವಾಗಿ ಬಳಲುತ್ತಿರುವ ಎಲ್ಲ ಕ್ಷೇತ್ರಗಳ ಉನ್ನತಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪರಿಚಯಿಸಿದೆ ಎಂದು ಕೋವಿಂದ್ ಹೇಳಿದರು.

ತಮ್ಮ ಭಾಷಣಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ರಾಷ್ಟ್ರಪತಿಗಳು ಹಾಗೂ ಸಂಸತಿನ ಸದಸ್ಯರು ಸಂತಾಪ ಸೂಚಿಸಿದರು.

Last Updated : Jan 29, 2021, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.