ETV Bharat / bharat

ಭಾರತವನ್ನು ದೂಷಿಸುವ ಬದಲು ವಾಸ್ತವ ಅರಿಯಿರಿ; ಪಾಶ್ಚಿಮಾತ್ಯ ಟೀಕಾಕಾರರಿಗೆ ಸಚಿವೆ ಸೀತಾರಾಮನ್​​ ಟಾಂಗ್​

ಭಾರತದಲ್ಲಿ ಅಲ್ಪಸಂಖ್ಯಾತರ ಹಿಂಸಾಚಾರ ನಡೆಯುತ್ತಿದೆ ಎಂದು ದೂಷಿಸುವ ಮೂಲಕ ತಪ್ಪು ಗ್ರಹಿಕೆಯನ್ನು ನೀಡುವ ಬದಲು ದೇಶಕ್ಕೆ ಭೇಟಿ ನೀಡಿ ವಾಸ್ತವ ಅರಿಯಿರಿ ಎಂದು ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್​ ಅವರು ಪಾಶ್ಚಿಮಾತ್ಯ ಟೀಕಾಕಾರರಿಗೆ ತಿಳಿಸಿದ್ದಾರೆ.

ಭಾರತವನ್ನು ದೂಷಿಸುವ ಬದಲು, ಏನಾಗುತ್ತಿದೆ ಎಂದು ವಾಸ್ತವ ಅರಿಯಿರಿ; ನಿರ್ಮಲಾ ಸೀತಾರಾಮನ್​​

author img

By

Published : Apr 11, 2023, 11:43 AM IST

ವಾಷಿಂಗ್ಟನ್ (ಅಮೆರಿಕ)​: ಜಗತ್ತಿನಲ್ಲಿಯೇ ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚಾಗಿ ಹೊಂದಿರುವ ಎರಡನೇ ರಾಷ್ಟ್ರ ಭಾರತವಾಗಿದೆ. ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತವನ್ನು ದೂಷಿಸುವವರಿಗೆ ನಮ್ಮ ದೇಶದ ವಾಸ್ತವಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಭಾರತದ ಬಗ್ಗೆ ನಕಾರಾತ್ಮಕವಾದ ಅಂಶಗಳನ್ನು ಪಾಶ್ಚಾತ್ಯರು ಕೇಳುವ ಬದಲು ಅಲ್ಲಿಗೆ ಭೇಟಿ ನೀಡಿ ವಾಸ್ತವ ಅರಿಯಿರಿ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ವಾಸ್ತವ ಬೇರೆ: ವಾಷಿಂಗ್ಟನ್​ ಡಿಸಿಯಲ್ಲಿ ಪೀಟರ್​ಸನ್​ ಇನ್ಸ್​​ಟಿಟ್ಯೂಟ್​ ಫಾರ್​ ಇಂಟರ್​ನ್ಯಾಷನಲ್​ ಎಕಾನಾಮಿಕ್ಸ್​ನಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಾತ್ರ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದೆ. ಪಾಕಿಸ್ತಾನದಲ್ಲಿ ಮುಹಾಜಿರ್‌ಗಳು, ಶಿಯಾಗಳು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಹಿಂಸಾಚಾರವು ನಡೆಯುತ್ತಿದೆ. ಆದರೆ ಭಾರತದಲ್ಲಿ, ಮುಸ್ಲಿಂ ಸಮುದಾಯದವರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಉದ್ಯಮ ಮಾಡುತ್ತಿದ್ದಾರೆ. ಆದ್ರೆ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನನ್ನು ತಾನು ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲದೇ, ಕೆಲವು ಮುಸ್ಲಿಂ ಪಂಗಡಗಳು ಸಹ ನಾಶವಾಗಿವೆ. ಭಾರತದಲ್ಲಿನ ಮುಸ್ಲಿಮರು ಪಾಕಿಸ್ತಾನಕ್ಕಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1947ರಿಂದ ಭಾರತದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಬೆಳೆದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ದೇಶದ ಪ್ರತಿಯೊಂದು ರಾಜ್ಯವೂ ಚನಾಯಿತ ಸರ್ಕಾರ ಹೊಂದಿದ್ದು, ಆ ರಾಜ್ಯಗಳಲ್ಲಿನ ಸರ್ಕಾರ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಭಾರತದಲ್ಲಿ ಮುಸ್ಲಿಂರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ ಎಂಬುದು ಸುಳ್ಳು. ಈ ರೀತಿ ಆಗಲು ಸಾಧ್ಯವಿಲ್ಲ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ವ್ಯವಸ್ಥೆ ಹೊಂದಿದ್ದು, ಪೊಲೀಸ್​ ವ್ಯವಸ್ಥೆ ಕೂಡ ಭಿನ್ನವಾಗಿದೆ. ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಯಾವುದೇ ಸುಳಿವು ಹೊಂದಿರಲು ನಿಮಗೆ ಸಾಧ್ಯವಿಲ್ಲ ಎಂದು ಟೀಕಾಕಾರರಿಗೆ ನಿರ್ಮಲಾ ಸೀತಾರಾಮನ್​ ಟಾಂಗ್​ ಕೊಟ್ಟಿದ್ದಾರೆ.

ಭಾರತವನ್ನು ಹೊಣೆ ಮಾಡಬೇಡಿ: ಇಂದು ಎಲ್ಲದಕ್ಕೂ ಭಾರತವನ್ನು ಹೊಣೆ ಮಾಡಲಾಗುತ್ತಿದೆ. 2014ರಿಂದ ಇಲ್ಲಿಯವರೆಗೆ ನಿರ್ದಿಷ್ಟ ಸಮುದಾಯದ ಜನಸಂಖ್ಯೆ ಕ್ಷೀಣಿಸಿದೆಯೇ ಅಥವಾ ನಿರೀಕ್ಷೆಗೆ ಮೀರಿ ಹೆಚ್ಚಿದೆಯಾ ಎಂಬುದುನ್ನು ಪರಿಶೀಲಿಸಬೇಕು. ಈ ವರದಿಗಳನ್ನು ಬರೆಯುವ ಜನರಿಗೆ ನಾನು ಭಾರತಕ್ಕೆ ಆಹ್ವಾನಿಸಿ, ಆತಿಥ್ಯ ನೀಡುತ್ತೇನೆ. ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡಿ ಅವರ ಹೇಳಿಕೆಗಳನ್ನು ಸಾಬೀತು ಮಾಡಲಿ ಎಂದು ಇದೇ ವೇಳೆ ಸಚಿವರು ಸವಾಲು ಹಾಕಿದ್ದಾರೆ.

ಭಾರತದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎನ್ನುವ ವರದಿಗಳಿಗೆ ಉತ್ತರ ಭಾರತಕ್ಕೆ ಬರುತ್ತಿರುವ ಹೂಡಿಕೆದಾರರ ಬಳಿ ಇದೆ ಎಂದು ಭಾವಿಸುತ್ತೇನೆ. ಭಾರತಕ್ಕೆ ಭೇಟಿ ನೀಡದೇ, ವಾಸ್ತವ ತಿಳಿಯದೇ ವರದಿ ಮಾಡುವುದು. ಊಹಾಪೋಹಾಗಳನ್ನು ಕೇಳುವುದಕ್ಕಿಂತ ಭಾರತದಲ್ಲಿ ಏನಾಗುತ್ತಿದೆ ಎಂದು ಅರಿಯುವುದು ಮುಖ್ಯ ಎಂದು ಪಾಶ್ಚಿಮಾತ್ಯ ವರದಿಗಳಿಗೆ ತಿರುಗೇಟು ನೀಡಿದರು.

ಏಷ್ಯಾ-ಫೆಸಿಫಿಕ್​ ಪ್ರದೇಶ ಅಂದರೆ ಟರ್ಕಿಯಿಂದ ಇಂಡೋನೆಷ್ಯಾದವರೆಗೆ ಜಗತ್ತಿನಲ್ಲಿ ಶೇ 62ರಷ್ಟು ಮುಸ್ಲಿಂ ಸಮುದಾಯದವರು ವಾಸಿಸುತ್ತಾರೆ. ಇಂಡೋನೇಷ್ಯಾದಲ್ಲಿ ಜಗತ್ತಿನಲ್ಲಿಯೇ ಅಧಿಕ ಮಂದಿ ಮುಸ್ಲಿಂರು ಅಂದರೆ 12.7ರಷ್ಟು ಮಂದಿ ವಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಇಂದು ವಯನಾಡ್​ಗೆ ರಾಹುಲ್​ ಗಾಂಧಿ ಮೊದಲ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.