ETV Bharat / bharat

ಕಳ್ಳತನಕ್ಕೆ ಸಿನಿಮಾ ಪ್ರೇರಣೆ: ಸ್ಪೋರ್ಟ್ಸ್‌ ಬೈಕ್‌ಗಳಲ್ಲಿ ಮೊಬೈಲ್‌ ದೋಚುತ್ತಿದ್ದ ಯುವಕರ ಬಂಧನ - ವರುಣನನ್ನು ಝಂಡೇವಾಲನ್​ನಲ್ಲಿ ಗುರುತಿಸಿ ಬಂಧಿಸಲಾಗಿದೆ

ಚಲನಚಿತ್ರಗಳಿಂದ ಪ್ರೇರಣೆ ಪಡೆದು ಮೊಬೈಲ್​ ಕಳ್ಳತನ ಮಾಡುತ್ತಿದ್ದ ಯುವಕರನ್ನು ದೆಹಲಿಯ ಪೊಲೀಸರು ಬಂಧಿಸಿದ್ದಾರೆ.

Delhi Police
ದೆಹಲಿ ಪೊಲೀಸರು
author img

By

Published : Jan 17, 2023, 12:42 PM IST

ನವದೆಹಲಿ: ಚಲನಚಿತ್ರಗಳಿಂದ ಪ್ರೇರಿತರಾಗಿ ಸೆಲ್ ಫೋನ್ ಕಳ್ಳತನ ಮಾಡುತ್ತಿದ್ದ ದೆಹಲಿಯ ನಾಲ್ವರು ಯುವಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳನ್ನು ವರುಣ್ ಅಲಿಯಾಸ್ ವಂಶ್, ಪಂಕಜ್ ಅಗರ್ವಾಲ್, ಸಮೀರ್ ಮತ್ತು ಸುಲೇಮಾನ್ ಎಂದು ಗುರುತಿಸಲಾಗಿದೆ ಎಂದು ಪಶ್ಚಿಮ ದೆಹಲಿಯ ಡಿಸಿಪಿ ಘನಶ್ಯಾಮ್ ಬನ್ಸಾಲ್ ತಿಳಿಸಿದರು.

ಏನಿದು ಪ್ರಕರಣ?: ಜನವರಿ 12 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ ವಿಜಯ್ ಗುವೇಂದ್ರಂ ಅವರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದರು. ಅವರು ತಮ್ಮ ಪತ್ನಿಯೊಂದಿಗೆ ಪೆಸಿಫಿಕ್ ಮಾಲ್‌ಗೆ ಹೋಗಿದ್ದರು. ಅಲ್ಲಿಂದ ಹೊರಡುವ ಸಂದರ್ಭದಲ್ಲಿ ರಾತ್ರಿ 9.30ರ ಸುಮಾರಿಗೆ ಮೋಟಾರ್‌ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಐಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ವೈದ ವಿಜಯ್ ಗುವೇಂದ್ರಂ ಅವರು ತಕ್ಷಣವೇ ವಾಹನದ ನಂಬರ್ ನೋಟ್ ಮಾಡಿಕೊಂಡು ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಇದರಿಂದ ಎಚ್ಚೆತ್ತುಕೊಂಡ ಪೊಲೀಸರ ತಂಡವು ಕಳ್ಳತನವಾದ ಸಮೀಪದ ಪ್ರದೇಶಗಳ ಸಿಸಿಟಿವಿಯನ್ನು ಪರಿಶೀಲಿಸಿದೆ. ನಂತರ ಆ ದಾಖಲೆಗಳಿಂದ ಬೈಕ್‌ ಅನ್ನು ಪತ್ತೆ ಹಚ್ಚಿದಾಗ ಮಾಲೀಕನ ಸಂಪರ್ಕ ದೊರಕಿದ್ದು ಆತ ಈ ಬೈಕನ್ನು 2019ರಲ್ಲಿ ಮಾರಾಟ ಮಾಡಿದ್ದನೆಂದು ತಿಳಿದು ಬಂದಿದೆ. ಇದರಿಂದ ಆರೋಪಿ ಅಗರ್ವಾಲ್​ನನ್ನು ಬಂಧಿಸಿ ವಿಚಾರಿಸಿದಾಗ, ಕೆಲವು ವೈಯಕ್ತಿಕ ಕೆಲಸಗಳಿಗಾಗಿ ವರುಣ್​ಗೆ ನೀಡಿದ್ದೆ ಎಂದಿದ್ದಾನೆ.

ಹೀಗಾಗಿ ವರುಣ್‌ನ ಹುಡುಕಾಟ ನಡೆಸಿದರೂ ಆತ ಸುಲಭದಲ್ಲಿ ಪತ್ತೆಯಾಗಲಿಲ್ಲ. ಕೊನೆಗೂ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದಿಂದ ಹಾಗು ಮಾಹಿತಿದಾರರ ಸಹಾಯದಿಂದ ವರುಣನನ್ನು ಝಂಡೇವಾಲನ್​ನಲ್ಲಿ ಗುರುತಿಸಿ ಬಂಧಿಸಿದ್ದಾರೆ. ನಂತರ ಈತನ ಸುದೀರ್ಘ ವಿಚಾರಣೆ ನಡೆಸಲಾಗಿದೆ. ಅಗರ್​ವಾಲ್​ನ ಸೂಚನೆಯಂತೆ ಈ ಕೆಲಸ ಮಾಡಿದೆ. ನಮಗೆ ಚಲನಚಿತ್ರದಿಂದ ಕಳ್ಳತನಕ್ಕೆ ಸ್ಫೂರ್ತಿ ದೊರಕಿದ್ದು, ಸ್ಪೋರ್ಟ್ಸ್ ಬೈಕ್ ಬಳಸುತ್ತಿದ್ದೆವು ಎಂದು ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕದ್ದ ಮೊಬೈಲ್ ಅ​ನ್ನು ಅಗರ್​ವಾಲ್​ ವರುಣ್​ನಿಂದ ಪಡೆದು ಸುಲೇಮಾನ್‌ಗೆ ವಿಲೇವಾರಿ ಮಾಡುತ್ತಿದ್ದನಂತೆ. ಹೀಗಾಗಿ ಪೊಲೀಸರು ಸುಲೇಮಾನ್‌ನನ್ನು ಪತ್ತೆ ಹಚ್ಚಲು ಅಗರ್ವಾಲ್​ನನ್ನೇ ಬಳಸಿಕೊಂಡು ಲೇಡಿ ಹಾರ್ಡಿಂಜ್ ಆಸ್ಪತ್ರೆಯ ಬಳಿ ಗುರುತಿಸಿ ಬಂಧಿಸಿದ್ದಾರೆ. ಹೀಗೆ ಸುಲೇಮಾನ್​ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಕದ್ದ ಎಲ್ಲಾ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ಮಾಹಿತಿ ಮೇರೆಗೆ ಒಟ್ಟು 18 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಎಲ್ಲಾ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದಾಗ ದೆಹಲಿಯ ವಿವಿಧ ಪ್ರದೇಶಗಳಿಂದ ಕಳ್ಳತನವಾಗಿರುವುದು ಕಂಡುಬಂದಿದೆ. ಹೆಚ್ಚಿನ ತನಿಖೆಗಾಗಿ ಅವನ ಸಹಚರ ಸಮೀರ್‌ನನ್ನು ಸಹ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಲ್ಲಿನ ಕ್ವಾರಿಯಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ.. ಸಾವಿನ ಹಿಂದೆ ದುಷ್ಕೃತ್ಯ ಶಂಕಿಸಿದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.