ಫರಿದಾಬಾದ್ (ಹರಿಯಾಣ): ಪ್ರತಿ ಜನ್ಮಕ್ಕೂ ಅರ್ಥ,ಮೌಲ್ಯವಿದೆ ಎನ್ನುತ್ತಾರೆ ಹರಿಯಾಣದ ಫರಿದಾಬಾದ್‌ನ ಕಿರಣ್ ಕನೋಜಿಯಾ. ಆಕಸ್ಮಿಕವಾಗಿ ಎಡ ಮೊಣಕಾಲು ಕಳೆದುಕೊಂಡು ಬಳಿಕ ಆಕೆ ತೀವ್ರ ಮಾನಸಿಕ ಸಂಕಟಕ್ಕೆ ಒಳಗಾಗಿದ್ದಳು. ಎಂಥ ಪರಿಸ್ಥಿತಿಯಲ್ಲೂ ಅವಳಿಗೆ ನಡೆಯಲು ಬರುವುದಿಲ್ಲ ಎಂಬ ಸಮಾಜದ ನಿರುತ್ಸಾಹದ ಮಾತುಗಳನ್ನು ಸಹಿಸಿಕೊಂಡಿದ್ದಳು.
ಆದದ್ರೆ ಆ ಛಲಗಾತಿ ಧೃತಿಗೆಡಲಿಲ್ಲ. ಒಂದು ಕಾಲು ಇಲ್ಲದಿದ್ದರೆ ಏನಾಯಿತು, ಸಾಧನೆಗೆ ಹಲವಾರೂ ಮಾರ್ಗಗಳಿವೆ ಧನಾತ್ಮಕ ಚಿಂತನೆಯಿಂದ ಮುನ್ನುಗ್ಗಿದಳು. ಆದರೆ ಸ್ವಲ್ಪ ಸಮಯದಲ್ಲೇ ಕಿರಣ್ ತನ್ನ ಕಾಲಿಗೆ ಬ್ಲೇಡ್ ಕೃತಕ ಕಾಲನ್ನು ಅಳವಡಿಸಿ ಓಡಲು ಪ್ರಾರಂಭಿಸಿದಳು. ಸುಮಾರು ಕಿಲೋಮೀಟರ್ ಮತ್ತು ಮೈಲಿಗಳನ್ನು ಓಡಿದ ನಂತರ ಅವರು ಈಗ ದೇಶದ ಮೊದಲ ಮಹಿಳಾ ಬ್ಲೇಡ್ ರನ್ನರ್ ಆಗಿ ಹೊರಹೊಮ್ಮಿದ್ದಾಳೆ. ಆಕಸ್ಮಿಕ ದುರಂತದ ವಿಧಿಗೆ ವಿಚಲಿತಗೊಳ್ಳದ ಕಿರಣ ಮನೋಜಿಯಾ ತನ್ನ ಯಶೋಗಾಥೆ ಬರೆಯುತ್ತ ಈಗ ತನ್ನಂಥ ಎಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ!
'ನಾವು ಮೂವರು ಒಡಹುಟ್ಟಿದವರು. ನಮ್ಮ ತಂದೆ-ತಾಯಿ ವಿದ್ಯಾವಂತರಲ್ಲದಿದ್ದರೂ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂದು ಬಯಸಿದ್ದರು. ಅದರಂತೆ ಕಷ್ಟಪಟ್ಟು ಓದಿ ಇಂಟರ್ ಮೀಡಿಯೇಟ್ ಮುಗಿಸಿದೆ. ಸ್ಕಾಲರ್‌ಶಿಪ್‌ನಿಂದ ನನ್ನ ಬಿ.ಟೆಕ್ ಮುಗಿಸಿದ ನಂತರ ಕ್ಯಾಂಪಸ್ ಸೆಲೆಕ್ಷನ್ಸ್‌ನಲ್ಲಿ ಹೈದರಾಬಾದ್ ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಆಯ್ಕೆಯಾಗಿದ್ದೆನು. ಆರು ತಿಂಗಳ ನಂತರ ಆಫರ್ ಲೆಟರ್ ಸಿಕ್ಕಿತು. ಹಿರಿಯ ಮಗಳು ಸ್ವಂತವಾಗಿ ಕಷ್ಟಪಟ್ಟು ಓದಿ ಇನ್ಫೋಸಿಸ್‌ನಂಥ ದಿಗ್ಗಜ ಕಂಪನಿ ತಲುಪುವ ಮೂಲಕ ಆಸೆ ಈಡೇರಿಸಿದ್ದಳು. ''ಒಳ್ಳೆಯ ಕೆಲಸ, ತಂದೆ-ತಾಯಿಯ ಕನಸನ್ನು ನನಸು ಮಾಡಿದ ಖುಷಿ.. ನನ್ನನ್ನು ಭಾವುಕಳನ್ನಾಗಿಸಿತು'.
ಆಸ್ಪತ್ರೆ ಬೆಡ್ ಮೇಲೆ ಆರು ತಿಂಗಳು..! 'ಡಿಸೆಂಬರ್ 25 ನನ್ನ ಜನ್ಮದಿನ. ಹುಟ್ಟುಹಬ್ಬವನ್ನು ನನ್ನ ಹೆತ್ತವರ, ಸ್ನೇಹಿತರ ಜತೆಗೆ ಹುಟ್ಟು ಆಚರಿಸಿ ಈ ಸಂತೋಷವನ್ನು ಹಂಚಿಕೊಳ್ಳಲು 2011 ರಲ್ಲಿ ಡಿಸೆಂಬರ್ 24 ರಂದು ಫರಿದಾಬಾದ್‌ಗೆ ಹೊರಟೆನು. ರೈಲಿನಿಂದ ಇಳಿಯಲು ಬಾಗಿಲಲ್ಲಿ ನಿಂತಿದ್ದನು. ಅದೇ ಸಮಯಕ್ಕೆ ಇಬ್ಬರು ಪುಂಡರು ನನ್ನ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಓಡಿ ಹೋದರು. ಆದರೆ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದೆ ಬಿಟ್ಟೆ. ಅಷ್ಟರಲ್ಲಿ ರೈಲಿನ ಬೋಗಿಗಳು ನನ್ನ ಎಡಗಾಲಿನ ಮೇಲೆ ಹಾಯ್ದು ತುಂಡರಿಸಿದ್ದವು'.
'ರೈಲ್ವೆ ಪೊಲೀಸರು ಫರಿದಾಬಾದ್ ನಿಲ್ದಾಣಕ್ಕೆ ತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ಶನಿವಾರ ಮತ್ತು ಸಂಜೆ 6 ಗಂಟೆಗೆ ನಾನು ಎಲ್ಲರನ್ನು ನೋಡುತ್ತಿದ್ದೆ ಮತ್ತು ಕೇಳುತ್ತಿದ್ದೆ. ಆದರೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗಲೇ ಹಿರಿಯ ವೈದ್ಯರು ಬಂದು ಆಪರೇಷನ್ ಮಾಡಬೇಕು. ಇದಕ್ಕಾಗಿ ಆಸ್ಪತ್ರೆಯಲ್ಲಿ 1 ಲಕ್ಷ ರೂಪಾಯಿ ಠೇವಣಿ ಇಡಬೇಕಿತ್ತು. ಹೇಗೋ ಪೋಷಕರು ಹಣ ಹೊಂದಿಸಿಕೊಟ್ಟರು. ಇದೆಲ್ಲವೂ ಬಹಳ ಸಮಯ ತೆಗೆದುಕೊಂಡಿತು. ಮಧ್ಯರಾತ್ರಿ 12 ಗಂಟೆಗೆ ನನ್ನನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು'.
'ನನ್ನ ಸ್ನೇಹಿತರು ಪ್ರತಿ ವರ್ಷ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದ ಸಮಯ ಇದು. ನನ್ನ ಕಣ್ಣುಗಳು ಪದೇ ಪದೇ ಗಡಿಯಾರದತ್ತ ಹೋಗುತ್ತಿದ್ದವು, ಸ್ನೇಹಿತರು ನನ್ನನ್ನು ಕರೆಯುತ್ತಾರೆ ಎಂದು ತೋರುತ್ತದೆ ಅನಿಸಿತು. ನಾನು ಆಸ್ಪತ್ರೆಯಲ್ಲಿ ಮಲಗಿದ್ದೆ. ಆಗ ಡಾಕ್ಟರ್ ಪೇಪರ್ ತಂದು ನನ್ನ ಕಾಲು ತುಂಡರಿಸುವುದಾಗಿ ಹೇಳಿದರು. ಇದನ್ನು ಕೇಳಿದ ಮೇಲೆ ನಾನು ಸಂಪೂರ್ಣ ನಿಸ್ಸಾಯಕಳಾಗಿದ್ದೆ.. ಏನೂ ಅರ್ಥವಾಗಲಿಲ್ಲ'.
ಕೇಕ್ ಕತ್ತರಿಸುವಾಗ ವೈದ್ಯರು ನನ್ನ ಕಾಲು ಕತ್ತರಿಸುವ ಬಗ್ಗೆ ಮಾತನಾಡುತ್ತಿದ್ದರು. ಇದು ನನಗೆ ವರ್ಣಿಸಲಾಗದ ಕರಾಳ ಪರಿಸ್ಥಿತಿ ಆಗಿತ್ತು. ನಾನು ಕಾಗದಕ್ಕೆ ಸಹಿ ಹಾಕಿದೆ. ಅದರ ನಂತರ ನನಗೆ ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸುಮಾರು ಆರು ತಿಂಗಳು ಬೇಕಾಯಿತು'
‘ ಒಂದು ಕಾಲು ಕಳೆದುಕೊಂಡಿದ್ದಾಳೆ.. ಈ ಹುಡುಗಿ ತನ್ನ ಕಾಲ ಮೇಲೆ ಹೇಗೆ ನಿಲ್ಲುತ್ತಾರೆ?’ ಸಮಾಜದ ಹಲವು ಪ್ರಶ್ನೆಗಳನ್ನು ನನ್ನನ್ನು ಅಧೈರ್ಯರನ್ನಳಾಗಿ ಮಾಡಿದವು. ಆದರೆ ಈ ಸಮಯದಲ್ಲಿ ತಂದೆ ನನ್ನ ಬೆಂಬಲಕ್ಕೆ ನಿಂತರು. ಅವರು ನನಗೆ ನಾಟ್ಯಮಯೂರಿ ಸುಧಾ ಚಂದ್ರನ್ ಅವರ ಜೀವನ ಕಥೆ ವಿವರಿಸಿದರು ಮತ್ತು ನನಗೆ ಸ್ಫೂರ್ತಿ ತುಂಬಿದರು'.
'ಕಾಲಿಗೆ ಬ್ಲೇಡ್ ಕೃತಕ ಕಾಲನ್ನು ಅಳವಡಿಸಿದ ಬಳಿಕ ಈ ಆತ್ಮವಿಶ್ವಾಸದಿಂದ ಓಡಲೂ ಪ್ರಾರಂಭಿಸಿದೆ. ವಿವಿಧೆಡೆ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದೆ. 2014ರಲ್ಲಿ ‘ಹೈದರಾಬಾದ್ ಏರ್ ಟೆಲ್ ಮ್ಯಾರಥಾನ್ ’ನಲ್ಲಿ ಭಾಗವಹಿಸಿ ಮೊದಲ ಪದಕ ಪಡೆದಾಗ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ಒಂದು ಕಾಲದಲ್ಲಿ ಕೇಳಲೂ ಬಾರದ ಅವಮಾನ ಮಾಡಿದ ಈ ಸಮಾಜ, ಈಗ ಹೊಗಳುತ್ತಿರುವುದು ನನ್ನಲ್ಲಿ ಮತ್ತಷ್ಟು ಹೆಮ್ಮೆ ಮೂಡುತ್ತಿದೆ. 'ದೇಶದ ಮೊದಲ ಮಹಿಳಾ ಬ್ಲೇಡ್ ಓಟಗಾರ್ತಿ' ಎಂದು ಗುರುತಿಸಿದ್ದು, ನನಗೆ ದೆಹಲಿ ಮತ್ತು ಮುಂಬೈನಲ್ಲಿ ಮ್ಯಾರಥಾನ್‌ಗಳನ್ನು ಪ್ರಾರಂಭಿಸಲು ಆಹ್ವಾನಗಳು ಬರುತ್ತಿವೆ' ಎಂದು ಕಿರಣ ಸಂತಸ ಹಂಚಿಕೊಂಡರು.
ಆ ತೃಪ್ತಿ ಸಾಕು: ''ಈಗ ನಾನು ಓಡುವುದು ಮಾತ್ರವಲ್ಲ, ಸೈಕ್ಲಿಂಗ್ ಮತ್ತು ಈಜು ಕೂಡ ಮಾಡಬಲ್ಲೆ. ಇನ್ನೊಂದೆಡೆ ವೃತ್ತಿಗೂ ಸಮಾನ ಆದ್ಯತೆ ನೀಡುತ್ತ ಮುನ್ನಡೆಯುತ್ತಿದ್ದೇವೆ. ಅವರು NITI ಆಯೋಗ್ ಮತ್ತು UN ಇಂಡಿಯಾದಿಂದ 2017 ರಲ್ಲಿ 'ವುಮೆನ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಪ್ರಶಸ್ತಿ' ಪಡೆದಿದಿದ್ದೇನೆ. ನನ್ನ ಜೀವನದಲ್ಲಿ ನನ್ನ ಗುರಿ ಒಂದೇ.. ನನ್ನಂತಹ ದೈಹಿಕ ವಿಕಲಚೇತನರಿಗೆ ಸ್ಪೂರ್ತಿ..! ಈಗ ಶಾಲಾ-ಕಾಲೇಜುಗಳಿಗೆ ತೆರಳಿ ಸ್ಪೂರ್ತಿದಾಯಕ ಭಾಷಣ ಮಾಡುವುದರ ಜತೆಗೆ ಅಂಥವರಿಗೆ ಧೈರ್ಯ ತುಂಬುತ್ತಿದ್ದೇನೆ. ಇಷ್ಟು ದೊಡ್ಡ ಅಪಘಾತದಲ್ಲಿ ಬದುಕುಳಿದು ಪುನರ್ಜನ್ಮ ಪಡೆದಿರುವುದು.. ಇನ್ನೂ ಮಾಡಬೇಕಾ ದದ್ದು ಬಹಳ ಇದೇ ಅನಿಸುತ್ತಿದೆ. ನಿಸ್ಸಾಯಕರಾಗಿರುವ ನಾಲ್ವರಲ್ಲಿ ಸ್ಫೂರ್ತಿ ತುಂಬುವುದು ಈಗ ತೃಪ್ತಿ ನೀಡುತ್ತಿದೆ. ಮತ್ತೊಂದೆಡೆ, ನಾನು ಈಗ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿ ಸಂತಸದ ಸಂಸಾರ ನಡೆಸುತ್ತಿದ್ದೇನೆ ಎಂದು ಪ್ಯಾರಾ ಅಥ್ಲೀಟ್ ತಮ್ಮ ಬದುಕಿನ ಯಶೋಗಾಥೆ ಮತ್ತು ತಾವು ಅನುಭವಿಸಿದ ನೋವನ್ನು ಈಟಿವಿ ಭಾರತ ದೊಂದಿಗೆ ಹಂಚಿಕೊಂಡರು.
ಇದನ್ನೂಓದಿ:ಚಾಂಪಿಯನ್ ಆಟ ಮುಂದುವರೆಸುತ್ತೇನೆ, ನಿವೃತ್ತಿ ಪಡೆಯುವುದಿಲ್ಲ : ಲಿಯೊನೆಲ್ ಮೆಸ್ಸಿ