ವಿಶಾಖಪಟ್ಟಣ (ಆಂಧ್ರಪ್ರದೇಶ): ಭಾರತೀಯ ನೌಕಾ ಸೇನೆಯಲ್ಲಿ ಸುದೀರ್ಘ 41 ವರ್ಷಗಳ ಸೇವೆ ಸಲ್ಲಿಸಿರುವ ಐಎನ್ಎಸ್ ರಜಪೂತ್ ಸೇವೆ ನಾಳೆ ಯುಗಾಂತ್ಯವಾಗಲಿದೆ.
ಯುಎಸ್ಎಸ್ಆರ್ ನಿರ್ಮಿಸಿದ್ದ ಕಾಶಿನ್-ಕ್ಲಾಸ್ ಯುದ್ಧನೌಕೆ ಐಎಸ್ಎಸ್ ರಜಪೂತ್ 1980 ಮೇ 4ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. ಇದೀಗ ಸೇನೆಯಿಂದ ಮುಕ್ತಿ ಪಡೆಯುತ್ತಿದೆ.
ವಿಶಾಖಪಟ್ಟಣದ ನೇವಲ್ ಡಾಕ್ ಯಾರ್ಡ್ನಲ್ಲಿ ನಡೆಯುವ ಸಮಾರಂಭದಲ್ಲಿ ಐಎನ್ಎಸ್ ರಜಪೂತ್ ನೌಕೆಗೆ ಅಂತಿಮ ವಿದಾಯ ಹೇಳಲಾಗುವುದು ಎಂದು ಪೂರ್ವ ನೌಕಾಸೇನೆ ಕಮಾಂಡ್ (ಇಎಸ್ಸಿ) ತಿಳಿಸಿದ್ದಾರೆ. ಕೊರೊನಾದಿಂದಾಗಿ ಸಮಾರಂಭವು ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಿಲ್ದಾಣದ ಅಧಿಕಾರಿಗಳು ಮತ್ತು ನಾವಿಕರು ಮಾತ್ರ ಭಾಗವಹಿಸಲಿದ್ದಾರೆ.
ರಷ್ಯಾದ ನಾಡೆಜ್ನಿ ಅಂದರೆ ‘ಹೋಪ್’ ಹೆಸರಿನ ನಿಕೋಲೇವ್ ಕಮ್ಯುನಾರ್ಡ್ಸ್ ಶಿಪ್‌ಯಾರ್ಡ್‌ನಲ್ಲಿ ಐಎನ್ಎಸ್ ರಜಪೂತ್ ಅನ್ನು ನಿರ್ಮಿಸಲಾಗಿತ್ತು. ಸತತ ಒಂದು ವರ್ಷದ ಕಾಲದಲ್ಲಿ ಈ ಯುದ್ಧನೌಕೆ ತಯಾರಾಗಿ 1980ರಲ್ಲಿ ಸೇನೆಗೆ ಸೇರಿತ್ತು. ಮೊದಲನೆಯದಾಗಿ ಕ್ಯಾಪ್ಟನ್ ಗುಲಾಬ್ ಮೋಹನ್ಲಾಲ್ ಹಿರಾನಂದಾನಿ ಕಮಾಂಡರ್ ಆಗಿ ರಜಪೂತ್ ಅನ್ನು ಮುನ್ನಡೆಸಿದ್ದರು.
ರಾಷ್ಟ್ರವನ್ನು ಸುರಕ್ಷಿತವಾಗಿರಿಸುವ ಉದ್ದೇಶದಿಂದ ಹಡಗು ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. ಇವುಗಳಲ್ಲಿ ಕೆಲವು ಐಪಿಕೆಎಫ್‌ಗೆ ಸಹಾಯ ಮಾಡಲು ಆಪರೇಷನ್ ಅಮಾನ್, ಶ್ರೀಲಂಕಾ ಕರಾವಳಿಯಲ್ಲಿ ಗಸ್ತು ತಿರುಗಲು ಆಪರೇಷನ್ ಪವನ್, ಮಾಲ್ಡೀವ್ಸ್ನಿಂದ ಒತ್ತೆಯಾಳುಗಳ ಮೇಲೆ ನಿಗಾವಹಿಸಲು ಆಪರೇಷನ್ ಕ್ಯಾಕ್ಟಸ್ ಮತ್ತು ಲಕ್ಷದ್ವೀಪದಿಂದ ಆಪರೇಷನ್ ಕ್ರೋಸ್ನೆಸ್ಟ್ ಸೇರಿದಂತೆ ಇನ್ನೂ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದೆ.
ರಜಪೂತ್ ಯುದ್ಧನೌಕೆಯು ಬ್ರಹ್ಮೋಸ್ ಯುದ್ಧವಿಮಾನ, ಖಂಡಾಂತರ ಕ್ಷಿಪಣಿಗೆ ಪ್ರಯೋಗ ವೇದಿಕೆಯಾಗಿ ಕಾರ್ಯನಿರ್ವಹಿಸಿತ್ತು.