ETV Bharat / bharat

'ಅವರ ಒಳಉಡುಪು ಕೇಸರಿ': ಹೈಕೋರ್ಟ್‌ ನ್ಯಾಯಾಧೀಶರ ವಿರುದ್ಧ ಪಿಎಫ್‌ಐ ನಾಯಕನ ವಿವಾದಿತ ಹೇಳಿಕೆ

author img

By

Published : May 29, 2022, 10:46 AM IST

'ಇತ್ತೀಚೆಗಿನ ದಿನಗಳಲ್ಲಿ ನ್ಯಾಯಾಲಯಗಳಿಗೆ ಬಹುಬೇಗನೆ ಆಘಾತ ಉಂಟಾಗುತ್ತಿದೆ. ಅಲಪ್ಪುಳಾದಲ್ಲಿ ನಡೆದ ರ್‍ಯಾಲಿಯಲ್ಲಿ ಮೊಳಗಿದ ಘೋಷಣೆಗಳನ್ನು ಕೇಳಿ ಹೈಕೋರ್ಟ್‌ ನ್ಯಾಯಾಧೀಶರಿಗೆ ಆಘಾತವಾಗಿದೆ. ಅವರ ಒಳಉಡುಪುಗಳು ಕೇಸರಿಯಾಗಿರುವುದೇ ಇದಕ್ಕೆ ಕಾರಣ'- ಪಿಎಫ್‌ಐ ಮುಖಂಡ ಯಾಹ್ಯಾ ತಂಗಳ್‌.

ಪಿಎಫ್‌ಐ
ಪಿಎಫ್‌ಐ

ಅಲಪ್ಪುಳ(ಕೇರಳ): ಹೈಕೋರ್ಟ್‌ ನ್ಯಾಯಾಧೀಶರುಗಳ 'ಒಳಉಡುಪು ಕೇಸರಿ' ಎಂದು ಪಿಎಫ್‌ಐ (ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ) ನಾಯಕ ಯಾಹ್ಯಾ ತಂಗಳ್‌ ವಿವಾದಿತ ಹೇಳಿಕೆ ನೀಡಿದ್ದಾನೆ. ಇತ್ತೀಚೆಗೆ ಪಿಎಫ್‌ಐ ನಡೆಸಿದ ರ್‍ಯಾಲಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್‌ ಧರ್ಮೀಯರ ವಿರುದ್ಧ ಬಾಲಕನೋರ್ವ ಸಂಘಟನೆಯ ಕಾರ್ಯಕರ್ತನ ಹೆಗಲ ಮೇಲೆ ಕುಳಿತು ಅತ್ಯಂತ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇರಳ ಹೈಕೋರ್ಟ್‌, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಿಎಫ್‌ಐ ನಾಯಕನೋರ್ವ ಇದೀಗ ನ್ಯಾಯಾಧೀಶರ ವಿರುದ್ಧವೇ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾನೆ.

ಅಲಪ್ಪುಳಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ತಂಗಳ್‌, 'ಇತ್ತೀಚೆಗಿನ ದಿನಗಳಲ್ಲಿ ನ್ಯಾಯಾಲಯಗಳಿಗೆ ಬಹುಬೇಗನೆ ಆಘಾತ ಉಂಟಾಗುತ್ತಿದೆ. ಅಲಪ್ಪುಳಾದಲ್ಲಿ ನಡೆದ ರ್ಯಾಲಿಯಲ್ಲಿ ಮೊಳಗಿದ ಘೋಷಣೆಗಳನ್ನು ಕೇಳಿ ಹೈಕೋರ್ಟ್‌ ನ್ಯಾಯಾಧೀಶರಿಗೆ ಆಘಾತವಾಗಿದೆ. ಇದಕ್ಕೇನು ಕಾರಣ ಗೊತ್ತೇ? ಏಕೆಂದರೆ, ಅವರ ಒಳಉಡುಪು ಕೇಸರಿ. ಒಳಉಡುಪು ಕೇಸರಿಯಾಗಿರುವ ಕಾರಣ ಬೇಗನೆ ಬಿಸಿಯಾಗುತ್ತದೆ. ಅದು ನಿಮಗೆ ಸುಟ್ಟಿರುವ ಅನುಭವ ನೀಡುವುದಲ್ಲದೆ ತೊಂದರೆ ಕೊಡುತ್ತದೆ' ಎಂದು ಹೇಳಿದ್ದಾನೆ.

ಇತ್ತೀಚೆಗೆ ಇದೇ ಅಲಪ್ಪುಳಾದಲ್ಲಿ ಪಿಎಫ್‌ಐ ನಡೆಸಿದ ರ್‍ಯಾಲಿಯಲ್ಲಿ ಬಾಲಕನೋರ್ವ ಸಂಘಟನೆಯ ಕಾರ್ಯಕರ್ತನ ಹೆಗಲ ಮೇಲೆ ಕುಳಿತು, 'ಹಿಂದೂಗಳು ತಮ್ಮ ಅಂತಿಮ ಕ್ರಿಯೆಗೆ ಅಕ್ಕಿ ಇಟ್ಟುಕೊಳ್ಳಿ, ಕ್ರಿಶ್ಚಿಯನ್ನರು ನಿಮ್ಮ ಅಂತಿಮ ಸಂಸ್ಕಾರಕ್ಕೆ ಊದುಬತ್ತಿ ಇಟ್ಟುಕೊಳ್ಳಿ. ನೀವು ಸಭ್ಯತೆಯಿಂದ ಬದುಕುವುದಾದರೆ ನಮ್ಮ ಮಣ್ಣಿನಲ್ಲಿ ಬದುಕಿ. ಇಲ್ಲದೇ ಇದ್ದರೆ ನಮಗೆ ಸ್ವಾತಂತ್ರ್ಯ ಬೇಕು' ಎಂದು ಅತ್ಯಂತ ಪ್ರಚೋದನಾತ್ಮಕವಾಗಿ ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಮೂಲಕ ಕೇರಳದಲ್ಲಿ ವಾಸಿಸುವ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ನೇರವಾಗಿಯೇ ಪ್ರಾಣ ಬೆದರಿಕೆ ಹಾಕಲಾಗಿತ್ತು. ಕೇರಳ ಪೊಲೀಸರು ಈ ಸಂಬಂಧ ಪಿಎಫ್‌ಐ ಜೊತೆ ನಂಟು ಹೊಂದಿರುವ 18 ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ: 'ಕೇರಳದ ಕೆಲವು ಜಿಲ್ಲೆಗಳು ಸೌದಿ ಅರೇಬಿಯಾದಂತೆ ಭಾಸವಾಗುತ್ತಿವೆ': ಬಿಜೆಪಿ ಸಂಸದ ಕೆ.ಜೆ.ಅಲ್ಪೋನ್ಸ್‌ ಕಳವಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.