ETV Bharat / bharat

ಬೈಕ್​​​ನಲ್ಲೇ ಪುಟ್ಟ ಮಗಳ ಶವ ಹೊತ್ತೊಯ್ದ ತಂದೆ; ತಿರುಪತಿಯಲ್ಲಿ ಕರುಳರಿಯುವ ಘಟನೆ - ಮಗಳ ಶವ ಹೊತ್ತು ಬೈಕ್​ನಲ್ಲೇ ಸಾಗಿದ ಬಡಪಾಯಿ

ಆಂಧ್ರಪ್ರದೇಶದ ತಿರುಪತಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಂದೆಯೋರ್ವ ಮಗಳ ಮೃತದೇಹವನ್ನು ಬೈಕ್​ನಲ್ಲೇ ಸಾಗಿಸಿದ್ದಾನೆ.

Father carried daughter's dead body
Father carried daughter's dead body
author img

By

Published : May 6, 2022, 12:20 PM IST

Updated : May 6, 2022, 12:28 PM IST

ತಿರುಪತಿ(ಆಂಧ್ರಪ್ರದೇಶ): ಮಗನ ಶವವನ್ನು ಮನೆಗೆ ಸಾಗಿಸಲು ಆ್ಯಂಬುಲೆನ್ಸ್​​​ ಚಾಲಕ​​ 10 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದರಿಂದ ನೊಂದ ವ್ಯಕ್ತಿಯೋರ್ವ ಮೃತದೇಹವನ್ನು ಬೈಕ್‌ನಲ್ಲೇ ಸಾಗಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಇದರ ಬೆನ್ನಲ್ಲೇ ತಿರುಪತಿಯಲ್ಲಿಯೇ ಮತ್ತೊಂದು ಕರುಳು ಹಿಂಡುವ ಪ್ರಕರಣ ಬೆಳಕಿಗೆ ಬಂದಿದೆ. 2 ವರ್ಷದ ಪುಟ್ಟ ಬಾಲಕಿಯ ಮೃತದೇಹವನ್ನು ಸಾಗಿಸಲು ಆ್ಯಂಬುಲೆನ್ಸ್ ಚಾಲಕ​​ ಹಿಂದೇಟು ಹಾಕಿದ್ದು ತಂದೆಯೋರ್ವ ಆಕೆಯ ಶವವನ್ನು ಬೈಕ್​​ನಲ್ಲಿಟ್ಟುಕೊಂಡೇ ಸಾಗಿಸಿದ್ದಾನೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದ ಘಟನೆಯ ವಿಡಿಯೋ ಇಲ್ಲಿದೆ.

ದೊರವರಿ ಸತ್ರ ಮಂಡಲದ ಕೊತ್ತಪಲ್ಲಿಯಲ್ಲಿ ಹೊಂಡಕ್ಕೆ ಬಿದ್ದು ಶ್ರವಂತ್ ಹಾಗೂ ಅಕ್ಷಯ ಅಸ್ವಸ್ಥಗೊಂಡಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡ ಕಾರಣ ಅಕ್ಷಯಾಳನ್ನು ನಾಯ್ಡುಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ವೇಳೆ ಎರಡು ವರ್ಷದ ಬಾಲಕಿಯ ಶವವನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ಯಲು 108 ಆ್ಯಂಬುಲೆನ್ಸ್​ ಸಿಬ್ಬಂದಿ ನಿರಾಕರಿಸಿದರು. ಹೀಗಾಗಿ, ತಂದೆ ಇನ್ನಿಬ್ಬರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ನಾಯ್ಡುಪೇಟೆಯಿಂದ ಸ್ವಗ್ರಾಮಕ್ಕೆ ಬೈಕ್​​ನಲ್ಲೇ ಮೃತದೇಹವನ್ನು ಸಾಗಿಸಿದರು.

ಇದನ್ನೂ ಓದಿ: 10 ಸಾವಿರ ಕೇಳಿದ ಆಂಬ್ಯುಲೆನ್ಸ್‌ ಚಾಲಕ; ಮಗನ ಶವ ಹೊತ್ತು ಬೈಕ್​ನಲ್ಲೇ 90 ಕಿಮೀ ಸಾಗಿದ ಬಡಪಾಯಿ ತಂದೆ!

Last Updated : May 6, 2022, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.