ETV Bharat / bharat

ಹಿಡಿತಕ್ಕೆ ಬಂದ ಕೊರೊನಾ: ಕಚೇರಿಗಳಿಂದ ಕೆಲಸ ಪುನರಾರಂಭಿಸಲು ಇನ್ಫೋಸಿಸ್ ಚಿಂತನೆ - ಇನ್ಫೋಸಿಸ್

ದೇಶದ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದು ಇನ್ಫೋಸಿಸ್ ಲಿಮಿಟೆಡ್ ಮತ್ತೆ ಕಚೇರಿ ತೆರೆಯಲು ಯೋಜಿಸುತ್ತಿದೆ. ನಮ್ಮ ಕೆಲವು ಉದ್ಯೋಗಿಗಳು ವೈಯಕ್ತಿಕ ಆದ್ಯತೆಯಂತೆ ಹಿಂತಿರುಗಿ ಕಚೇರಿಯಿಂದ ಕೆಲಸ ಮಾಡಲು ಪ್ರಾರಂಭಿಸುತ್ತಿದ್ದಾರೆ ಎಂದು ಇನ್ಫೋಸಿಸ್​ ಹೇಳಿಕೊಂಡಿದೆ.

Infosys reopens offices as India Inc eyes long road back to work
ಇನ್ಫೋಸಿಸ್
author img

By

Published : Jul 21, 2021, 8:44 PM IST

ಭಾರತೀಯ ಐಟಿ ದೈತ್ಯ ಸಂಸ್ಥೆ ಇನ್ಫೋಸಿಸ್ ಲಿಮಿಟೆಡ್ ತನ್ನ ನೌಕರರಿಗೆ ಕಚೇರಿಗಳಿಂದ ಕೆಲಸ ಪುನರ್‌ ಆರಂಭಿಸುವ ಬಗ್ಗೆ ಸೂಚನೆ ನೀಡಿದೆ.

ಕೋವಿಡ್​ ಸಾಂಕ್ರಾಮಿಕ ಹೆಚ್ಚಾಗುತ್ತಿದ್ದಂತೆ, ಬೆಂಗಳೂರು ಮೂಲದ ಐಟಿ ಸೇವೆಗಳ ಕಂಪನಿಯು ಎಲ್ಲಾ ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಕರೆಸಿಕೊಳ್ಳುವುದನ್ನು ನಿಲ್ಲಿಸಿತ್ತು. ಇದೀಗ ಕೊರೊನಾ ಒಂದು ಹಂತದಲ್ಲಿ ಕಡಿಮೆಯಾಗಿದ್ದು ಮತ್ತೆ ಆಫೀಸ್​ ತೆರೆಯಲು ಇನ್ಫೋಸಿಸ್​ ಯೋಜಿಸುತ್ತಿದೆ.

ದೇಶದ ಪರಿಸ್ಥಿತಿ ಸುಧಾರಿಸುತ್ತಿರುವ ಕಾರಣ, ನೌಕರರಿಗೆ ಇನ್ಫೋಸಿಸ್ ಕ್ಯಾಂಪಸ್‌ಗಳಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಅನೇಕರು ಮನವಿ ಮಾಡಿದ್ದಾರಂತೆ. ಹೀಗಾಗಿ ಉದ್ಯೋಗಿಗಳ ವೈಯಕ್ತಿಕ ಆದ್ಯತೆಯಂತೆ ಹಿಂತಿರುಗಿ ಕಚೇರಿಯಿಂದ ಕೆಲಸ ಮಾಡಲು ಪ್ರಾರಂಭಿಸಲಾಗುತ್ತಿದೆ ಎಂದು ಇನ್ಫೋಸಿಸ್​ ಹೇಳಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.