ETV Bharat / bharat

2 ತಿಂಗಳಲ್ಲಿ 7 ಸಲ ನವಜಾತ ಹೆಣ್ಣು ಶಿಶು ಮಾರಾಟ: ಕೊನೆಗೂ ಅಮ್ಮನ ಮಡಿಲು ಸೇರಿದ್ದೊಂದು ರೋಚಕ ಕಥೆ! - ಏಳು ಸಲ ಮಾರಾಟವಾದ ಮಗು

ಕೇವಲ ಎರಡೇ ತಿಂಗಳಲ್ಲಿ ಏಳು ಬಾರಿ ಮಾರಾಟವಾಗಿದ್ದ ನವಜಾತ ಹೆಣ್ಣು ಶಿಶುವನ್ನು ಪೊಲೀಸರು ತಾಯಿಯ ಮಡಿಲು ಸೇರಿಸುವಲ್ಲಿ ಕೊನೆಗೂ ಯಶಸ್ವಿಯಾದರು.

Infant sold seven times
Infant sold seven times
author img

By

Published : Mar 30, 2022, 3:42 PM IST

ವಿಜಯವಾಡ (ಆಂಧ್ರಪ್ರದೇಶ): ಕೇವಲ ಮೂರು ತಿಂಗಳ ಹೆಣ್ಣು ಮಗುವೊಂದು ಎರಡು ತಿಂಗಳ ಅಂತರದಲ್ಲಿ ಏಳು ಸಲ ಮಾರಾಟವಾಗಿ, ಕೊನೆಗೂ ಅಮ್ಮನ ಮಡಿಲು ಸೇರಿದೆ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದಿನಗೂಲಿ ಕೆಲಸಗಾರನಾಗಿದ್ದ ಮನೋಜ್​ ಎಂಬಾತನಿಗೆ ಮೂವರು ಹೆಣ್ಣು ಮಕ್ಕಳು. ಕುಡಿತದ ಚಟದಿಂದಾಗಿ ಮಕ್ಕಳನ್ನು ಸಾಕಲಾಗದೆ ಮೂರು ತಿಂಗಳ ಹೆಣ್ಣು ಮಗುವೊಂದನ್ನು 70 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ.

ಮಗುವಿನ ಮಾರಾಟ ಮಾಡಿರುವ ವಿಷಯ ಗೊತ್ತಿಲ್ಲದ ಕಾರಣ ತಾಯಿ ಹಾಗೂ ಅಜ್ಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮಗು, ನಾಗಲಕ್ಷ್ಮಿ ಎಂಬುವವರ ಮೂಲಕ ನಲ್ಗೊಂಡದ ಗಾಯತ್ರಿ ಎಂಬುವವರಿಗೆ 70 ಸಾವಿರ ರೂ.ಗೆ ಮಾರಾಟವಾಗಿದೆ ಎಂಬುದನ್ನು ಪತ್ತೆ ಹಚ್ಚಿದರು. ಇದಾದ ಬಳಿಕ ಇದೇ ಮಗು ಹೈದರಾಬಾದ್​​ನ ಮಂಗಳಗಿರಿ, ದಾಚೆಪಲ್ಲಿಗೂ ಮಾರಾಟವಾಗಿದ್ದು, ಕೊನೆಯದಾಗಿ ವಿಜಯವಾಡದ ಕುಟುಂಬಕ್ಕೆ 2.50 ಲಕ್ಷ ರೂ.ಗೆ ಸೇಲ್​ ಆಗಿದ್ದು ಗೊತ್ತಾಗಿದೆ. ಪ್ರಕರಣದ ಬೆನ್ನುಬಿದ್ದ ಪೊಲೀಸರು ಮಗುವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ಕಂದಮ್ಮನನ್ನು ತಾಯಿಯ ಮಡಿಲಿಗೆ ಸೇರಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ನಿರ್ದೇಶಕನಿಂದ ನಿರಂತರ ಅತ್ಯಾಚಾರ ಆರೋಪ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ

ರಹಸ್ಯ ಬೇಧಿಸಿದ ಪೊಲೀಸರು: ಈ ಮಗುವಿನ ಮಾರಾಟದಲ್ಲಿ ಭಾಗಿಯಾಗಿರುವ ಯಾವುದೇ ಆರೋಪಿಗಳು ಕ್ರಿಮಿನಲ್​ ಹಿನ್ನೆಲೆ ಹೊಂದಿಲ್ಲ ಎಂಬುದು ತಿಳಿದು ಬಂದಿದೆ. 70 ಸಾವಿರ ಹಣಕ್ಕೆ ಮಗು ಖರೀದಿಸಿರುವ ಗಾಯತ್ರಿ ತದನಂತರ ಹೈದರಾಬಾದ್​ನ ದಿಲ್​ಖುಷ್‌ ನಗರದ ಭೂಕ್ಯಾ ಬಾಲವರ್ತಿರಾಜು ಎಂಬುವವರಿಗೆ 1,20,000 ಸಾವಿರ ರೂ.ಗೆ ಮಾರಾಟ ಮಾಡಿದ್ದು, ತದನಂತರ ಮಗು ನೂರ್ ಜಹಾನ್​ಗೆ 1,87,000 ರೂಗೆ ಸೇಲ್​ ಆಗಿದೆ. ಇದಾದ ಬಳಿಕ ನೂರ್ ಜಹಾನ್​​ ಮಗುವನ್ನು 1,90,000 ರೂ.ಗೆ ಮಾರಾಟ ಮಾಡಿದ್ದಾರೆ.

ಇದಾದ ಬಳಿಕ, ಇದೇ ಮಗು ವಿಜಯವಾಡದ ಬೆಂಜ್​ ಸರ್ಕಲ್​ನ ಶ್ರಾವಣಿ ಎಂಬುವವರಿಗೆ 2 ಲಕ್ಷ ರೂ.ಗೆ ಮಾರಾಟವಾಗಿದ್ದು, ತದನಂತರ ವಿಜಯಲಕ್ಷ್ಮೀ ಎಂಬುವವರಿಗೆ 2,20,000 ರೂಗೆ ಮಾರಾಟವಾಗಿದೆ. ಕೊನೆಯದಾಗಿ ಮಗುವನ್ನು ಪೂರ್ವ ಗೋದಾವರಿಯ ರಮೇಶ್ ಎಂಬುವವರಿಗೆ 2,50,000 ರೂ.ಗೆ ಮಾರಾಟ ಮಾಡಲಾಗಿದೆ.

ಮಹತ್ವದ ಕಾರ್ಯಾಚರಣೆ: ಗುಂಟೂರು ಜಿಲ್ಲಾ ನಗರ ಪೊಲೀಸ್ ವರಿಷ್ಠಾಧಿಕಾರಿ ಆರೀಫ್​ ಹಫೀಜ್​ ಅವರ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಗುವಿನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಕೊನೆಯದಾಗಿ ತಾಯಿ ಮಡಿಲಿಗೆ ಸೇರಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ ಪೊಲೀಸರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಬಾಲಕಿಯ ತಂದೆ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳ ವಿರುದ್ಧವೂ ಐಪಿಸಿ ಸೆಕ್ಷನ್​​ 372 ಅಡಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.