ಇಂದೋರ್ (ಮಧ್ಯಪ್ರದೇಶ): ನಗರದ ಗೋದಾಮು ಒಂದರಲ್ಲಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 16,000 ಕೆಜಿ ಗಾಂಜಾವನ್ನು ಇಂದೋರ್ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ.
ನಮ್ಮ ತಂಡವು ಸ್ಥಳದ ಮೇಲೆ ದಾಳಿ ನಡೆಸಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 16,000 ಕೆಜಿ ಗಾಂಜಾ ತುಂಬಿದ 270 ಚೀಲಗಳನ್ನು ವಶಪಡಿಸಿಕೊಂಡಿದೆ. ನಾವು ಇದುವರೆಗೆ ಐದು ಜನರನ್ನು ಬಂಧಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇಂದೋರ್‌ನ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಗುರು ಪ್ರಸಾದ್ ಪರಾಶರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಓದಿ: ಟ್ಯಾಂಕರ್ನಿಂದ ವಿಷಾನಿಲ ಸೋರಿಕೆ.. ಐವರ ಸಾವು, 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು!
ಇದಕ್ಕೂ ಮುನ್ನ ಇಂದೋರ್ ಬಳಿ 3.15 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬೇರೆ ಬೇರೆ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಸಾಮಾನ್ಯ ಉಪ್ಪಿನಂತೆ ಕವರ್ ಸರಕು ಹೊಂದಿರುವ ಟ್ರಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಭಾರಿ ಪ್ರಮಾಣದ ಗಾಂಜಾವನ್ನು ಸಾಗಿಸುತ್ತಿದ್ದಾರೆ ಎಂದು ಇಂದೋರ್ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ನಿರ್ದಿಷ್ಟ ಗುಪ್ತಚರ ಮಾಹಿತಿ ನೀಡಿತ್ತು.
ಅದರಂತೆ, ಶಂಕಿತ ಟ್ರಕ್‌ಗಾಗಿ ಕಣ್ಗಾವಲು ಹಾಕಲಾಯಿತು. DRI ನ ಅಧಿಕಾರಿಗಳು ಇಂದೋರ್ ಬಳಿ ಆಂಧ್ರಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟ್ರಕ್ ಅನ್ನು ವಶಕ್ಕೆ ಪಡೆದಾಗ ಪ್ರಕರಣ ಬೆಳಕಿಗೆ ಬಂತು.