ನವದೆಹಲಿ: ಅಗರ್ತಲಾ, ಭುವನೇಶ್ವರ, ಜೈಪುರ, ಚೆನ್ನೈ, ಬೆಂಗಳೂರು, ಪಾಟ್ನಾ ಮತ್ತು ತಿರುಪತಿ ಸೇರಿದಂತೆ ವಿವಿಧ ನಗರಗಳಿಂದ ಮಾರ್ಚ್ 28 ರಿಂದ 22 ಹೊಸ ವಿಮಾನಗಳನ್ನು ಪ್ರಾರಂಭಿಸುವುದಾಗಿ ಇಂಡಿಗೊ ತಿಳಿಸಿದೆ.
ಇಂಡಿಗೊ ಆರ್‌ಸಿಎಸ್ (ಪ್ರಾದೇಶಿಕ ಸಂಪರ್ಕ ಯೋಜನೆ) ಅಡಿಯಲ್ಲಿ ಅಗರ್ತಲಾ-ಐಜ್ವಾಲ್ ನಡುವೆ ಹೊಸ ವಿಮಾನಯಾನ ಮತ್ತು ಭುವನೇಶ್ವರ-ಪಾಟ್ನಾ, ಜೈಪುರ-ವಡೋದರಾ, ಚೆನ್ನೈ-ವಡೋದರಾ, ಬೆಂಗಳೂರು-ಶಿರಡಿ, ಪಾಟ್ನಾ-ಕೊಚ್ಚಿ, ಮತ್ತು ರಾಜಮಂಡ್ರಿ-ತಿರುಪತಿ ನಡುವೆ ವಿಶೇಷ ವಿಮಾನಯಾನಗಳನ್ನು ನಡೆಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಹಾಗೆಯೇ ಮಾರ್ಚ್ 28 ರಿಂದ ಕೋಲ್ಕತಾ-ಗಯಾ, ಕೊಚ್ಚಿನ್-ತಿರುವನಂತಪುರ, ಜೈಪುರ-ಸೂರತ್, ಚೆನ್ನೈ-ಸೂರತ್ ನಡುವೆ ವಿಮಾನಯಾನ ಪ್ರಾರಂಭಿಸಲಿದೆ.
ಕಳೆದ ವರ್ಷ ಮಾರ್ಚ್ 23 ರಿಂದ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳು ಸ್ಥಗಿತಗೊಂಡಿರುವುದರಿಂದ ಭಾರತೀಯ ವಾಯು ವಾಹಕಗಳು ನಷ್ಟದಲ್ಲಿದ್ದವು. ಈ ಹಿನ್ನೆಲೆ ಈಗ ದೇಶೀಯ ಮಾರ್ಗಗಳ ಮೇಲೆ ಹೆಚ್ಚು ಗಮನ ಹರಿಸಿವೆ.
ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ದೇಶೀಯ ವಿಮಾನಗಳ ಮೇಲಿನ ಮಿತಿಗಳನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಿದೆ. ಕಳೆದ ವರ್ಷ ಮೇ 21 ರಂದು ನಿಗದಿತ ದೇಶೀಯ ವಿಮಾನಗಳ ಪುನರಾರಂಭವನ್ನು ಘೋಷಿಸುವಾಗ, ಸಚಿವಾಲಯವು ವಿಮಾನದ ಅವಧಿಯ ಆಧಾರದ ಮೇಲೆ ವರ್ಗೀಕರಿಸಿದ ಏಳು ಬ್ಯಾಂಡ್‌ಗಳ ಮೂಲಕ ವಿಮಾನ ದರಗಳಿಗೆ ಮಿತಿಗಳನ್ನು ವಿಧಿಸಿತ್ತು.