ETV Bharat / bharat

ಟೇಕ್​ ಆಫ್​ ಆಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ - ನಾಗ್ಪುರ ವಿಮಾನ ನಿಲ್ದಾಣ

ನಾಗ್ಪುರದಿಂದ ಉತ್ತರ ಪ್ರದೇಶದ ಲಖನೌಗೆ ವಿಮಾನ ಟೇಕ್​ ಆಫ್​ ಆಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಕಾರಣ ಮರಳಿ ನಾಗ್ಪುರಕ್ಕೆ ಬಂದು ತುರ್ತು ಭೂಸ್ಪರ್ಶ ಮಾಡಲಾಗಿದೆ.

Nagpur-Lucknow flight
ನಾಗ್ಪುರ-ಲಖನೌ ಇಂಡಿಗೋ ವಿಮಾನ
author img

By

Published : Apr 5, 2022, 3:54 PM IST

ನಾಗ್ಪುರ (ಮಹಾರಾಷ್ಟ್ರ): ತಾಂತ್ರಿಕ ದೋಷ ಕಾರಣದಿಂದ ಇಂಡಿಗೋ ವಿಮಾನವು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಹೇಳಿದೆ.

ನಾಗ್ಪುರದಿಂದ ಉತ್ತರ ಪ್ರದೇಶದ ಲಖನೌಗೆ ವಿಮಾನ ಟೇಕ್​ ಆಫ್​ ಆಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಕಾರಣ ಮರಳಿ ನಾಗ್ಪುರಕ್ಕೆ ಬಂದು ತುರ್ತು ಭೂಸ್ಪರ್ಶ ಮಾಡಲಾಗಿದೆ. ಪೈಲಟ್‌ಗಳು ಮುನ್ನೆಚ್ಚರಿಕೆಯ ಕಾರ್ಯ ವಿಧಾನ ಅನುಸರಿಸಿದ ಕಾರಣ ವಿಮಾನವು ಸುರಕ್ಷಿತವಾಗಿ ಮರಳಿದೆ ಎಂದೂ ವಿಮಾನಯಾನ ಸಂಸ್ಥೆ ತಿಳಿಸಿದೆ.

ಇತ್ತ, ಈ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ವಿಮಾನದಿಂದ ಹೊಗೆ ಹೊರ ಬಂದಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಜಯ್​ ರಾವತ್​ ಆಸ್ತಿಯನ್ನು ಜಪ್ತಿ ಮಾಡಿದ ಇಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.